Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶ

ಆಸಿಯಾನ್-ಭಾರತ, ಪೂರ್ವ ಏಷ್ಯಾ ಶೃಂಗಸಭೆ: ನ.16ರಿಂದ ಪ್ರಧಾನಿ ಮೋದಿ ಮನಿಲಾ ಪ್ರವಾಸ

By ANU News
November 13, 2026 1 Min Read
Comments Off on ಆಸಿಯಾನ್-ಭಾರತ, ಪೂರ್ವ ಏಷ್ಯಾ ಶೃಂಗಸಭೆ: ನ.16ರಿಂದ ಪ್ರಧಾನಿ ಮೋದಿ ಮನಿಲಾ ಪ್ರವಾಸ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 16 ಮತ್ತು 17ರಂದು ಫಿಲಿಪೈನ್ಸ್ ರಾಜಧಾನಿ ಮನಿಲಾಗೆ ಭೇಟಿ ನೀಡಲಿದ್ದು, 23ನೇ ಆಸಿಯಾನ್-ಭಾರತ ಶೃಂಗಸಭೆ ಹಾಗೂ 21ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ.

ಫಿಲಿಪೈನ್ಸ್ ಅಧ್ಯಕ್ಷ ಫರ್ಡಿನಾಂಡ್ ಆರ್. ಮಾರ್ಕೋಸ್ ಜೂನಿಯರ್ ಅವರ ಆಹ್ವಾನದ ಮೇರೆಗೆ ಮೋದಿ ಈ ಪ್ರವಾಸ ಕೈಗೊಳ್ಳುತ್ತಿದ್ದಾರೆ. 2026ರಲ್ಲಿ ಆಸಿಯಾನ್ ಅಧ್ಯಕ್ಷತೆ ವಹಿಸಿರುವ ಫಿಲಿಪೈನ್ಸ್ ನವೆಂಬರ್ 17ರಂದು ಎರಡೂ ಶೃಂಗಸಭೆಗಳನ್ನು ಆಯೋಜಿಸಿದೆ.

ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಉಭಯ ದೇಶಗಳ ನಡುವಿನ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಪ್ರಗತಿ ಪರಿಶೀಲನೆಯಾಗಲಿದೆ. 2026-2030ರ ಅವಧಿಯ ಕ್ರಿಯಾ ಯೋಜನೆ ಅನುಷ್ಠಾನ ಹಾಗೂ ಭವಿಷ್ಯದ ಸಹಕಾರದ ಮಾರ್ಗಸೂಚಿ ಕುರಿತು ಚರ್ಚೆ ನಡೆಯಲಿದೆ.

ಭಾರತದ ‘ಆಕ್ಟ್ ಈಸ್ಟ್’ ನೀತಿ ಮತ್ತು ಇಂಡೋ-ಪೆಸಿಫಿಕ್ ದೃಷ್ಟಿಕೋನದಲ್ಲಿ ಆಸಿಯಾನ್ ಪ್ರಮುಖ ಪಾತ್ರ ವಹಿಸಿದೆ. 2026ನೇ ವರ್ಷವನ್ನು ಆಸಿಯಾನ್-ಭಾರತ ಕಡಲ ಸಹಕಾರ ವರ್ಷವಾಗಿ ಆಚರಿಸಲಾಗುತ್ತಿದೆ.

2027ರಲ್ಲಿ ಭಾರತ ಮತ್ತು ಆಸಿಯಾನ್ ನಡುವಿನ ಸಂವಾದ ಸಂಬಂಧಕ್ಕೆ 35 ವರ್ಷ ಹಾಗೂ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಗೆ ಐದು ವರ್ಷ ಪೂರ್ಣಗೊಳ್ಳಲಿವೆ.

ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರು ಆಸಿಯಾನ್ ನಾಯಕರು ಹಾಗೂ ಇತರ ಭಾಗವಹಿಸುವ ರಾಷ್ಟ್ರಗಳ ಪ್ರತಿನಿಧಿಗಳೊಂದಿಗೆ ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಕುರಿತು ಚರ್ಚಿಸಲಿದ್ದಾರೆ.

Author

ANU News

Follow Me
Other Articles
Previous

ಹಾಸನಾಂಬೆ ಉತ್ಸವ: ಈ ಬಾರಿ 30.06 ಲಕ್ಷ ಭಕ್ತರಿಂದ ದೇವಿ ದರ್ಶನ, ₹29.55 ಕೋಟಿ ಆದಾಯ

Next

PM Modi to Visit Manila for ASEAN-India, East Asia Summits on November 16-17

Recent Posts

  • ಡಿಜಿಟಲ್ ಜೀವ ಪ್ರಮಾಣಪತ್ರ ಸಲ್ಲಿಕೆಯಲ್ಲಿ ದಾಖಲೆ: 20.48 ಲಕ್ಷ ರಕ್ಷಣಾ ಪಿಂಚಣಿದಾರರ ನೋಂದಣಿ
  • Over 20 Lakh Defence Pensioners Submit Digital Life Certificates Under Campaign 5.0
  • ‘ಕಿಸಾನ್ ತಕ್ ಭಾರತ್ ಕೃಷಿ ಸಮ್ಮೇಳನ-2026; ಸ್ಮಾರ್ಟ್ ಕೃಷಿ, ವಿಕಸಿತ ಭಾರತ ನಿರ್ಮಾಣಕ್ಕೆ ತಂತ್ರಜ್ಞಾನವೇ ಕೀಲಿಕೈ
  • Smart Farming, Technology Key to Building Viksit Bharat: PM Modi
  • PM Modi to Visit Manila for ASEAN-India, East Asia Summits on November 16-17
Copyright 2026 — ANU News. All rights reserved. Blogsy WordPress Theme