Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶ

‘ಕಿಸಾನ್ ತಕ್ ಭಾರತ್ ಕೃಷಿ ಸಮ್ಮೇಳನ-2026; ಸ್ಮಾರ್ಟ್ ಕೃಷಿ, ವಿಕಸಿತ ಭಾರತ ನಿರ್ಮಾಣಕ್ಕೆ ತಂತ್ರಜ್ಞಾನವೇ ಕೀಲಿಕೈ

By ANU News
November 13, 2026 1 Min Read
Comments Off on ‘ಕಿಸಾನ್ ತಕ್ ಭಾರತ್ ಕೃಷಿ ಸಮ್ಮೇಳನ-2026; ಸ್ಮಾರ್ಟ್ ಕೃಷಿ, ವಿಕಸಿತ ಭಾರತ ನಿರ್ಮಾಣಕ್ಕೆ ತಂತ್ರಜ್ಞಾನವೇ ಕೀಲಿಕೈ

ನವದೆಹಲಿ: ವಿಕಸಿತ ಭಾರತದ ಗುರಿ ಸಾಧನೆಗೆ ಕೃಷಿ ಕ್ಷೇತ್ರದ ಆಧುನೀಕರಣ, ತಂತ್ರಜ್ಞಾನ ಅಳವಡಿಕೆ ಮತ್ತು ರೈತರ ಸಬಲೀಕರಣ ಅತ್ಯಗತ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಗುರುವಾರ ‘ಕಿಸಾನ್ ತಕ್ ಭಾರತ್ ಕೃಷಿ ಸಮ್ಮೇಳನ-2026’ ಉದ್ದೇಶಿಸಿ ಮಾತನಾಡಿದ ಅವರು, ಕೃಷಿಯನ್ನು ಹೆಚ್ಚು ಲಾಭದಾಯಕವಾಗಿಸಲು ವೈವಿಧ್ಯಮಯ ಬೆಳೆ ಪದ್ಧತಿ ಹಾಗೂ ಆಧುನಿಕ ತಂತ್ರಜ್ಞಾನಕ್ಕೆ ಆದ್ಯತೆ ನೀಡಬೇಕು ಎಂದರು.

ಪಿಎಂ-ಕುಸುಮ್ ಯೋಜನೆಯಡಿ ಸುಮಾರು 12 ಲಕ್ಷ ಸೌರ ಪಂಪ್‌ಗಳನ್ನು ಸ್ಥಾಪಿಸಲಾಗಿದ್ದು, ಇದರಿಂದ ರೈತರು ಇಂಧನ ಉತ್ಪಾದಕರಾಗಲು ಮತ್ತು ಹೆಚ್ಚುವರಿ ಆದಾಯ ಗಳಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.

‘ಪ್ರಯೋಗಾಲಯದಿಂದ ಭೂಮಿಗೆ’ ಎಂಬ ಪರಿಕಲ್ಪನೆಯಡಿ ವೈಜ್ಞಾನಿಕ ಸಂಶೋಧನೆ ರೈತರನ್ನು ತಲುಪಬೇಕು. ದೇಶದಲ್ಲಿ 8,400ಕ್ಕೂ ಹೆಚ್ಚು ಮಣ್ಣು ಪರೀಕ್ಷಾ ಪ್ರಯೋಗಾಲಯಗಳು ಮತ್ತು 725ಕ್ಕೂ ಹೆಚ್ಚು ಕೃಷಿ ವಿಜ್ಞಾನ ಕೇಂದ್ರಗಳಿವೆ ಎಂದು ಹೇಳಿದರು.

ಕೃಷಿಯಲ್ಲಿ ಡ್ರೋನ್, ಕೃತಕ ಬುದ್ಧಿಮತ್ತೆ ಮತ್ತು ಆಧುನಿಕ ಯಂತ್ರೋಪಕರಣಗಳ ಬಳಕೆಯನ್ನು ಹೆಚ್ಚಿಸುವಂತೆ ಕರೆ ನೀಡಿದರು. ನಮೋ ಡ್ರೋನ್ ದೀದಿಗಳ ಕೊಡುಗೆಯನ್ನೂ ಶ್ಲಾಘಿಸಿದರು.

ಕಳೆದ ವರ್ಷಗಳಲ್ಲಿ ಹಾಲು ಉತ್ಪಾದನೆ ಶೇ.70, ಮೊಟ್ಟೆ ಉತ್ಪಾದನೆ ಶೇ.90ರಷ್ಟು ಹೆಚ್ಚಿದ್ದು, ಮೀನು ಉತ್ಪಾದನೆ ದ್ವಿಗುಣಗೊಂಡಿದೆ ಎಂದು ವಿವರಿಸಿದರು. 10 ಸಾವಿರ ರೈತ ಉತ್ಪಾದಕ ಸಂಸ್ಥೆಗಳು ಸಣ್ಣ ರೈತರನ್ನು ಸಂಸ್ಕರಣೆ ಮತ್ತು ರಫ್ತು ಮಾರುಕಟ್ಟೆಗಳಿಗೆ ಸಂಪರ್ಕಿಸುತ್ತಿವೆ ಎಂದರು.

ಕೈಗೆಟುಕುವ ರಸಗೊಬ್ಬರ ಪೂರೈಕೆಗಾಗಿ ಕಳೆದ 12 ವರ್ಷಗಳಲ್ಲಿ ಸರ್ಕಾರ ₹16 ಲಕ್ಷ ಕೋಟಿ ವೆಚ್ಚ ಮಾಡಿದೆ. ಕೃಷಿ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಲು ಸಮ್ಮೇಳನದಲ್ಲಿ ವ್ಯಕ್ತವಾಗುವ ಸಲಹೆಗಳನ್ನು ಪರಿಗಣಿಸಲಾಗುವುದು ಎಂದು ಮೋದಿ ತಿಳಿಸಿದರು.

Author

ANU News

Follow Me
Other Articles
Previous

Smart Farming, Technology Key to Building Viksit Bharat: PM Modi

Next

Over 20 Lakh Defence Pensioners Submit Digital Life Certificates Under Campaign 5.0

Recent Posts

  • ಡಿಜಿಟಲ್ ಜೀವ ಪ್ರಮಾಣಪತ್ರ ಸಲ್ಲಿಕೆಯಲ್ಲಿ ದಾಖಲೆ: 20.48 ಲಕ್ಷ ರಕ್ಷಣಾ ಪಿಂಚಣಿದಾರರ ನೋಂದಣಿ
  • Over 20 Lakh Defence Pensioners Submit Digital Life Certificates Under Campaign 5.0
  • ‘ಕಿಸಾನ್ ತಕ್ ಭಾರತ್ ಕೃಷಿ ಸಮ್ಮೇಳನ-2026; ಸ್ಮಾರ್ಟ್ ಕೃಷಿ, ವಿಕಸಿತ ಭಾರತ ನಿರ್ಮಾಣಕ್ಕೆ ತಂತ್ರಜ್ಞಾನವೇ ಕೀಲಿಕೈ
  • Smart Farming, Technology Key to Building Viksit Bharat: PM Modi
  • PM Modi to Visit Manila for ASEAN-India, East Asia Summits on November 16-17
Copyright 2026 — ANU News. All rights reserved. Blogsy WordPress Theme