Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಕುಮಾರಕೃಪಾ ಅತಿಥಿಗೃಹಕ್ಕೆ ‘ಗಂಗಾ’ ಎಂದು ಮರುನಾಮಕರಣ: ಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ

By ANU News
November 17, 2026 1 Min Read
Comments Off on ಕುಮಾರಕೃಪಾ ಅತಿಥಿಗೃಹಕ್ಕೆ ‘ಗಂಗಾ’ ಎಂದು ಮರುನಾಮಕರಣ: ಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ

ಬೆಂಗಳೂರು: ಬೆಂಗಳೂರಿನ ಕುಮಾರಕೃಪಾ ಅತಿಥಿಗೃಹಕ್ಕೆ ‘ಗಂಗಾ’ ಎಂದು ಮರುನಾಮಕರಣ ಮಾಡಿರುವುದನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಮರ್ಥಿಸಿಕೊಂಡಿದ್ದು, ವಿರೋಧ ಪಕ್ಷದ ನಾಯಕರನ್ನೂ ಸ್ಥಳಕ್ಕೆ ಆಹ್ವಾನಿಸಿ ಪರಿಶೀಲನೆಗೆ ಅವಕಾಶ ನೀಡುವುದಾಗಿ ತಿಳಿಸಿದ್ದಾರೆ.

ಸಾರ್ವಜನಿಕರು ಭೇಟಿಯಾಗಲು ಹಾಗೂ ಶಾಸಕರು ಮತ್ತು ಅಧಿಕಾರಿಗಳಿಗೆ ಅನುಕೂಲವಾಗುವಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ಸಭೆ ನಡೆಸಲು ಪ್ರತ್ಯೇಕ ಸಭಾಂಗಣ ಸೇರಿದಂತೆ ಮತ್ತೊಂದು ಹಾಲ್ ವ್ಯವಸ್ಥೆ ಮಾಡಲಾಗುತ್ತಿದೆ. ಈ ವ್ಯವಸ್ಥೆಗಳನ್ನು ಪೂರ್ಣಗೊಳಿಸಲು ಇನ್ನೂ ಎರಡು-ಮೂರು ದಿನಗಳು ಬೇಕಾಗಬಹುದು ಎಂದರು.

ಮುಖ್ಯಮಂತ್ರಿಗೆ ವಾಸ್ತವ್ಯಕ್ಕೆ ನಿವಾಸದ ಅಗತ್ಯವಿದೆ. ಯಾರೂ ಶಾಶ್ವತವಾಗಿ ಅಧಿಕಾರದಲ್ಲಿರುವುದಿಲ್ಲ. ಅನಗತ್ಯವಾಗಿ ಹಣ ವ್ಯಯಿಸಬಾರದು ಎಂಬ ಉದ್ದೇಶದಿಂದ ಈ ವ್ಯವಸ್ಥೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು. ವಿರೋಧ ಪಕ್ಷದ ಕೆಲಸವೇ ವಿರೋಧಿಸುವುದಾಗಿದೆ ಎಂದು ಟೀಕಿಸಿದ ಅವರು, ಪ್ರತಿಪಕ್ಷದ ನಾಯಕರು ಸ್ಥಳಕ್ಕೆ ಬಂದು ಪರಿಶೀಲಿಸಲಿ ಎಂದು ಆಹ್ವಾನಿಸಿದರು.

Author

ANU News

Follow Me
Other Articles
Previous

ಹಾಸನದಲ್ಲಿ ಕಾಡಾನೆ ದಾಳಿಗೆ ಇಬ್ಬರ ಬಲಿ: 10 ಆನೆಗಳ ಸೆರೆಗೆ ಆದೇಶ

Next

Two killed in elephant attacks in Hassan; 10 wild elephants to be captured

Recent Posts

  • ಭದ್ರಾ ಅಚ್ಚುಕಟ್ಟು ರೈತರ ನೆರವಿಗೆ ಸರ್ಕಾರ: ಬೇಸಿಗೆ ಭತ್ತದ ಬೆಳೆಗೆ 1 ಟಿಎಂಸಿ ನೀರು ಬಿಡುಗಡೆಗೆ ಆದೇಶ
  • ಲೇಬರ್ ಕೋಡ್‌ಗಳ ವಿರುದ್ಧ, ಪಿಂಚಣಿ ಹೆಚ್ಚಳಕ್ಕೆ ಆಗ್ರಹ: ರಾಜ್ಯಾದ್ಯಂತ ಕಟ್ಟಡ ಕಾರ್ಮಿಕರ ಪ್ರತಿಭಟನೆ
  • Karnataka construction workers protest Labour Codes, demand pension hike and welfare fund protection
  • Two killed in elephant attacks in Hassan; 10 wild elephants to be captured
  • ಕುಮಾರಕೃಪಾ ಅತಿಥಿಗೃಹಕ್ಕೆ ‘ಗಂಗಾ’ ಎಂದು ಮರುನಾಮಕರಣ: ಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ
Copyright 2026 — ANU News. All rights reserved. Blogsy WordPress Theme