Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶ

ಲೇಹ್ ಬಳಿ ಸೇನಾ ಹೆಲಿಕಾಪ್ಟರ್ ಪತನ ; ಅಧಿಕಾರಿಗಳು ಪಾರು

By ANU News
May 23, 2026 2 Min Read
0

ಲೇಹ್: ಲಡಾಖ್‌ನ ಲೇಹ್ ಸಮೀಪದ ಟ್ಯಾಂಗ್ಸ್ಟೆ ಪರ್ವತ ಪ್ರದೇಶದಲ್ಲಿ ಭಾರತೀಯ ಸೇನೆಯ ‘ಚೀತಾ’ ಹೆಲಿಕಾಪ್ಟರ್ ಅಪಘಾತಕ್ಕೀಡಾದ ಘಟನೆ ಮೇ 20ರಂದು ನಡೆದಿದ್ದು, ಘಟನೆಯಲ್ಲಿ ಮೂವರು ಹಿರಿಯ ಸೇನಾ ಅಧಿಕಾರಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಸೇನಾ ಮೂಲಗಳ ಪ್ರಕಾರ, ಏಕ ಎಂಜಿನ್ ಹೊಂದಿದ್ದ ‘ಚೀತಾ’ ಹೆಲಿಕಾಪ್ಟರ್‌ನಲ್ಲಿ ಲೆಫ್ಟಿನೆಂಟ್ ಕರ್ನಲ್, ಇಬ್ಬರು ಮೇಜರ್ ಹುದ್ದೆಯ ಅಧಿಕಾರಿಗಳು ಹಾಗೂ 3 ಪದಾತಿ ದಳದ ಜನರಲ್ ಆಫೀಸರ್ ಕಮಾಂಡಿಂಗ್ ಮೇಜರ್ ಜನರಲ್ ಸಚಿನ್ ಮೆಹ್ತಾ ಪ್ರಯಾಣಿಸುತ್ತಿದ್ದರು.

ಅಪಘಾತ ಸಂಭವಿಸಿದ ವೇಳೆ ಹೆಲಿಕಾಪ್ಟರ್ ಅನ್ನು ಲೆಫ್ಟಿನೆಂಟ್ ಕರ್ನಲ್ ಮತ್ತು ಒಬ್ಬ ಮೇಜರ್ ನಿರ್ವಹಿಸುತ್ತಿದ್ದರು. ಘಟನೆ ಬಳಿಕ ಮೂವರು ಅಧಿಕಾರಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಸುರಕ್ಷಿತವಾಗಿ ಬದುಕುಳಿದಿರುವುದನ್ನು ಸೇನಾ ಅಧಿಕಾರಿಗಳು ದೃಢಪಡಿಸಿದ್ದಾರೆ.

3 army officers had a narrow escape after their Cheetah helicopter crashed in the mountainous Tangste region near Leh.

A Lt Col and a major were piloting the single-engine chopper and their passenger was Maj Gen Sachin Mehta, General Officer Commanding of 3 Infantry Division pic.twitter.com/W90I1OTfkP

— Defence Squad (@Defence_Squad_) May 23, 2026

ಅಪಘಾತದ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು. ಗಾಯಗೊಂಡ ಅಧಿಕಾರಿಗಳನ್ನು ಸ್ಥಳದಿಂದ ಸುರಕ್ಷಿತವಾಗಿ ಸ್ಥಳಾಂತರಿಸಿ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.

ಇನ್ನೊಂದೆಡೆ, ಅಪಘಾತದ ನಂತರ ಮೇಜರ್ ಜನರಲ್ ಸಚಿನ್ ಮೆಹ್ತಾ ತೆಗೆದುಕೊಂಡ ಸೆಲ್ಫಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಕಷ್ಟು ಗಮನ ಸೆಳೆದಿದೆ.

ಹೆಲಿಕಾಪ್ಟರ್ ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ತಾಂತ್ರಿಕ ದೋಷ ಅಥವಾ ಪ್ರತಿಕೂಲ ಹವಾಮಾನ ಪರಿಸ್ಥಿತಿ ಕಾರಣವಾಗಿದೆಯೇ ಎಂಬುದರ ಕುರಿತು ಸೇನಾ ಅಧಿಕಾರಿಗಳು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.

ಈ ಕುರಿತು ಭಾರತೀಯ ಸಶಸ್ತ್ರ ಪಡೆಗಳ ರಕ್ಷಣಾ ವಿಭಾಗವು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಲೇಹ್ ಸಮೀಪದ ಪರ್ವತ ಪ್ರದೇಶದಲ್ಲಿ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದಲ್ಲಿ ಅಧಿಕಾರಿಗಳು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ ಎಂದು ತಿಳಿಸಿದೆ.

A Major General, a Lieutenant Colonel and a Major survived a helicopter crash in Ladakh today.

All three walked out of the wreckage on their own.

Officials called it nothing short of a miracle 🇮🇳

The Indian Army Cheetah went down in the high altitude Tangste region near Leh… pic.twitter.com/oeRSmrsIwq

— Military Observer (@TheMilObserverr) May 23, 2026

Author

ANU News

Follow Me
Other Articles
Previous

ಕಲಬುರಗಿಯಲ್ಲಿ ಭೀಕರ ರಸ್ತೆ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Next

ಕಾರ್ಮಿಕರ ಕನಿಷ್ಠ ವೇತನದಲ್ಲಿ ಶೇ.60 ಹೆಚ್ಚಳ: ರಾಜ್ಯ ಸರ್ಕಾರದಿಂದ ಅಧಿಸೂಚನೆ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Rahul’s protest over pellet injury ‘anarchy politics’ to divert attention from Vande Mataram row: Ravi Shankar Prasad
    • ವಂದೇ ಮಾತರಂ’ ವಿವಾದದಿಂದ ಗಮನ ಬೇರೆಡೆಗೆ ಸೆಳೆಯಲು ಕಾಂಗ್ರೆಸ್ ಅರಾಜಕತೆಯ ರಾಜಕೀಯ: ಬಿಜೆಪಿ ಆಕ್ರೋಶ
    • Delhi Police register FIR over alleged pellet-gun injury to student after Rahul Gandhi’s protest
    • ಪೆಲೆಟ್ ಗನ್ ಪ್ರಕರಣ: ರಾಹುಲ್ ಗಾಂಧಿ ಧರಣಿ ಬೆನ್ನಲ್ಲೇ ಎಫ್‌ಐಆರ್ ದಾಖಲು
    • ಸನ್ನಡತೆ ಆಧಾರದಲ್ಲಿ ರಾಜ್ಯದ 28 ಕೈದಿಗಳ ಅವಧಿಪೂರ್ವ ಬಿಡುಗಡೆಗೆ ಗ್ರೀನ್ ಸಿಗ್ನಲ್
    Copyright 2026 — ANU News. All rights reserved. Blogsy WordPress Theme