Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ವಿಧಾನಪರಿಷತ್ ಸಭಾಪತಿ ರಾಜೀನಾಮೆಗೆ ಸಿಎಂ ಮನವಿ; ಕಾಂಗ್ರೆಸ್ ಹೊಸ ಸಂಪ್ರದಾಯಕ್ಕೆ ಹೊರಟ್ಟಿ ಆಕ್ಷೇಪ

By ANU News
August 4, 2026 1 Min Read
0

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದೂರವಾಣಿ ಮೂಲಕ ಮನವಿ ಮಾಡಿದ ಹಿನ್ನೆಲೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರೆ ಮಾಡಿ, “ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ. ದಯವಿಟ್ಟು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿ” ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಬಸವರಾಜ ಹೊರಟ್ಟಿ, “ಇದು ಕಲುಷಿತ ರಾಜಕಾರಣ. ಈ ಬೆಳವಣಿಗೆಯಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ” ಎಂದು ಹೇಳಿದ್ದಾರೆ.

ಇದಲ್ಲದೆ, ಕಾಂಗ್ರೆಸ್ ಪಕ್ಷದ ಲೆಟರ್‌ಹೆಡ್‌ನಲ್ಲಿ ನೂತನ ವಿಧಾನ ಪರಿಷತ್ ಸಭಾಪತಿ ಹೆಸರನ್ನು ಪ್ರಕಟಿಸಿರುವ ಕ್ರಮಕ್ಕೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

“ಸಭಾಪತಿ ಹಾಗೂ ಸಭಾಧ್ಯಕ್ಷರ ಹುದ್ದೆಗಳು ಸಾಂವಿಧಾನಿಕ ಹುದ್ದೆಗಳಾಗಿವೆ. ಆ ಹುದ್ದೆಯಲ್ಲಿರುವವರನ್ನು ಬದಲಾಯಿಸಲು ಬಯಸಿದರೆ ಮೊದಲು ನೋಟಿಸ್ ನೀಡಬೇಕು. ಅದಕ್ಕೆ ನಾನು ಸೂಕ್ತ ಉತ್ತರ ನೀಡುತ್ತೇನೆ. ಇಲ್ಲವೇ ನಿಯಮಾನುಸಾರ ಅವಿಶ್ವಾಸ ನಿರ್ಣಯ ಮಂಡಿಸಬೇಕು. ಅದನ್ನು ಬಿಟ್ಟು ಸಭಾಪತಿಯಿಂದ ರಾಜೀನಾಮೆ ಕೇಳುವುದು ಪ್ರಜಾಪ್ರಭುತ್ವದ ಸಂಪ್ರದಾಯಕ್ಕೆ ಹೊಂದಿಕೆಯಾಗುವುದಿಲ್ಲ” ಎಂದು ಹೊರಟ್ಟಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Author

ANU News

Follow Me
Other Articles
Previous

‘ಅಭಿವೃದ್ಧಿ, ಗ್ಯಾರಂಟಿ ಅನುಷ್ಠಾನಕ್ಕೆ ಒತ್ತು ನೀಡಿ’ ನೂತನ ಸಚಿವರಿಗೆ ಸುರ್ಜೆವಾಲಾ ಸಲಹೆ

Next

Basavaraj Horatti Calls CM’s Resignation Request ‘Political’, Says Constitutional Process Must Be Followed

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ದಿನೇಶ್ ಗುಂಡೂರಾವ್‌ಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ; ಕೆಪಿಸಿಸಿ ಕಚೇರಿ ಎದುರು ಕಾರ್ಯಕರ್ತರ ಪ್ರತಿಭಟನೆ
    • Basavaraj Horatti Calls CM’s Resignation Request ‘Political’, Says Constitutional Process Must Be Followed
    • ವಿಧಾನಪರಿಷತ್ ಸಭಾಪತಿ ರಾಜೀನಾಮೆಗೆ ಸಿಎಂ ಮನವಿ; ಕಾಂಗ್ರೆಸ್ ಹೊಸ ಸಂಪ್ರದಾಯಕ್ಕೆ ಹೊರಟ್ಟಿ ಆಕ್ಷೇಪ
    • ‘ಅಭಿವೃದ್ಧಿ, ಗ್ಯಾರಂಟಿ ಅನುಷ್ಠಾನಕ್ಕೆ ಒತ್ತು ನೀಡಿ’ ನೂತನ ಸಚಿವರಿಗೆ ಸುರ್ಜೆವಾಲಾ ಸಲಹೆ
    • ರಾಜ್ಯ ಸಂಪುಟದಲ್ಲಿ ಪ್ರಾದೇಶಿಕ ಅಸಮತೋಲನ?; ಕೋಲಾರ ಸೇರಿ 8 ಜಿಲ್ಲೆಗಳು ಪ್ರಾತಿನಿಧ್ಯದಿಂದ ವಂಚಿತ
    Copyright 2026 — ANU News. All rights reserved. Blogsy WordPress Theme