Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಅಸಮಾಧಾನಿತ ‘ಕೈ’ ಶಾಸಕರ ಮನವೊಲಿಕೆಗೆ ‘ಹೈ’ ಕಸರತ್ತು; ಉತ್ತರಕ್ಕೆ ಅನ್ಯಾಯವಾಗಿದೆ ಎಂದ ನಾಯಕ

By ANU News
August 6, 2026 1 Min Read
Comments Off on ಅಸಮಾಧಾನಿತ ‘ಕೈ’ ಶಾಸಕರ ಮನವೊಲಿಕೆಗೆ ‘ಹೈ’ ಕಸರತ್ತು; ಉತ್ತರಕ್ಕೆ ಅನ್ಯಾಯವಾಗಿದೆ ಎಂದ ನಾಯಕ

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಕಾಂಗ್ರೆಸ್ ಶಾಸಕರನ್ನು ಮನವೊಲಿಸುವ ಪ್ರಯತ್ನವನ್ನು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಮುಂದುವರಿಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರೊಂದಿಗೆ ಸರಣಿ ಸಭೆಗಳನ್ನು ನಡೆಸಿ ಅಸಮಾಧಾನ ಶಮನಕ್ಕೆ ಮುಂದಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಶಾಸಕ ಎಂ. ಕೃಷ್ಣಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ ಸುರ್ಜೆವಾಲ, ಅವರೊಂದಿಗೆ ಮಾತುಕತೆ ನಡೆಸಿದರು. ಆದರೆ, ಸಚಿವ ಸ್ಥಾನ ಹೊರತುಪಡಿಸಿ ಬೇರೆ ಯಾವುದೇ ಹುದ್ದೆ ಅಥವಾ ಜವಾಬ್ದಾರಿಯನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಕೃಷ್ಣಪ್ಪ ಹೇಳಿದ್ದಾರೆ ಎನ್ನಲಾಗಿದೆ.

ಇದೇ ವೇಳೆ, ಸಚಿವ ಸ್ಥಾನ ವಂಚಿತರಾದ ಹಿರಿಯ ಶಾಸಕ ಹೆಚ್.ಕೆ. ಪಾಟೀಲ್ ಅವರ ನಿವಾಸಕ್ಕೂ ಭೇಟಿ ನೀಡಿ ಚರ್ಚೆ ನಡೆಸಿದರು. ಉತ್ತರ ಕರ್ನಾಟಕಕ್ಕೆ ಸಚಿವ ಸಂಪುಟದಲ್ಲಿ ಸಮರ್ಪಕ ಪ್ರಾತಿನಿಧ್ಯ ಸಿಕ್ಕಿಲ್ಲ. ಪ್ರಾದೇಶಿಕ ಅಸಮಾನತೆ ಇನ್ನೂ ಮುಂದುವರಿದಿದೆ ಎಂದು ಹೆಚ್.ಕೆ. ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಣದೀಪ್ ಸಿಂಗ್ ಸುರ್ಜೆವಾಲ, “ನಾವೆಲ್ಲ ಒಂದೇ ಕುಟುಂಬದವರು. ಪಕ್ಷದ ಹೈಕಮಾಂಡ್ ಹಾಗೂ ರಾಜ್ಯ ನಾಯಕರು ಅಸಮಾಧಾನಿತ ಶಾಸಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಎಲ್ಲ ಸಮಸ್ಯೆಗಳಿಗೂ ಶೀಘ್ರದಲ್ಲೇ ಪರಿಹಾರ ಸಿಗಲಿದೆ ಎಂಬ ವಿಶ್ವಾಸವಿದೆ” ಎಂದು ಹೇಳಿದರು.

ಸಚಿವ ಸಂಪುಟ ವಿಸ್ತರಣೆಯ ಬಳಿಕ ಕಾಂಗ್ರೆಸ್‌ನಲ್ಲಿ ಕಾಣಿಸಿಕೊಂಡಿರುವ ಅಸಮಾಧಾನವನ್ನು ಶಮನಗೊಳಿಸಲು ಹೈಕಮಾಂಡ್ ಮಟ್ಟದಲ್ಲಿ ನಿರಂತರ ಪ್ರಯತ್ನಗಳು ನಡೆಯುತ್ತಿವೆ.

Author

ANU News

Follow Me
Other Articles
Previous

MSMEಗಳಿಗೆ ಹಣಕಾಸು ಬಲ; SIDBIಯಿಂದ 71 ಹೊಸ ಶಾಖೆಗಳು, ECLGS 5.0 ಜಾರಿ: ಕೇಂದ್ರ

Next

Karnataka cabinet fallout: Surjewala meets upset MLAs, says Congress will resolve differences

Recent Posts

  • ಪ್ರಧಾನಿ ಮೋದಿ ಆಹ್ವಾನಕ್ಕೆ ಭಾರತಕ್ಕೆ ಬರಲಿರುವ ನೇಪಾಳ ಪ್ರಧಾನಿ ಬಾಲೆನ್ ಶಾ; ನ.22ರಿಂದ ಎರಡು ದಿನಗಳ ಭೇಟಿ
  • Nepal PM Balen Shah to visit India on November 22 for first bilateral foreign trip
  • Samantha Ruth Prabhu and Raj Nidimoru welcome baby boy; name him Dev Nidimoru
  • ಸಮಂತಾ-ರಾಜ್ ದಂಪತಿಗೆ ಗಂಡು ಮಗು ಜನನ; ಮಗುವಿಗೆ ‘ದೇವ್ ನಿಡಿಮೋರು’ ಎಂದು ನಾಮಕರಣ!
  • ‘ಬಸವಣ್ಣನವರ ಗೌರವಕ್ಕೆ ಧಕ್ಕೆಯಾದರೆ ಸರ್ಕಾರ ಸುಮ್ಮನಿರಲ್ಲ’: ಮುಖ್ಯಮಂತ್ರಿ ಎಚ್ಚರಿಕೆ
Copyright 2026 — ANU News. All rights reserved. Blogsy WordPress Theme