Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ವಿದೇಶ

ಈಜಿಪ್ಟ್‌ನಲ್ಲಿ ಎರಡು ರೈಲುಗಳ ಡಿಕ್ಕಿ: ಭಾರೀ ಸಾವು ನೋವು

By ANU News
November 9, 2026 1 Min Read
Comments Off on ಈಜಿಪ್ಟ್‌ನಲ್ಲಿ ಎರಡು ರೈಲುಗಳ ಡಿಕ್ಕಿ: ಭಾರೀ ಸಾವು ನೋವು

ಕೈರೋ: ಈಜಿಪ್ಟ್‌ನ ಗಿಜಾ ಪ್ರಾಂತ್ಯದಲ್ಲಿ ಎರಡು ರೈಲುಗಳ ನಡುವೆ ಸಂಭವಿಸಿದ ಭೀಕರ ಡಿಕ್ಕಿಯಲ್ಲಿ ಏಳು ಮಂದಿ ಮೃತಪಟ್ಟಿದ್ದು, 112 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳ ಪೈಕಿ 45 ಮಂದಿಗೆ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಕಫ್ರ್ ಅಮ್ಮಾರ್ ಮತ್ತು ಅಲ್-ರಕ್ಕಾ ನಿಲ್ದಾಣಗಳ ನಡುವೆ ಗಿಜಾ-ಫಯೂಮ್ ಮಾರ್ಗದ ರೈಲು, ಕೈರೋ-ಅಸ್ವಾನ್ ರೈಲಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ. ರಕ್ಷಣಾ ಕಾರ್ಯಾಚರಣೆಗೆ 72 ಆಂಬುಲೆನ್ಸ್‌ಗಳನ್ನು ನಿಯೋಜಿಸಲಾಗಿದ್ದು, ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಗೆ ವ್ಯವಸ್ಥೆ ಮಾಡುವಂತೆ ಆರೋಗ್ಯ ಸಚಿವ ಖಾಲೆದ್ ಅಬ್ದೆಲ್ ಘಫಾರ್ ಸೂಚಿಸಿದ್ದಾರೆ. ಅಧ್ಯಕ್ಷ ಅಬ್ದೆಲ್ ಫತ್ತಾಹ್ ಅಲ್-ಸಿಸಿ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದು, ಅಪಘಾತದ ತ್ವರಿತ ತನಿಖೆ ನಡೆಸಿ ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ.

ಅವಶೇಷ ತೆರವು ಹಾಗೂ ರೈಲು ಸಂಚಾರ ಪುನರಾರಂಭಕ್ಕೆ ಕಾರ್ಯಾಚರಣೆ ಮುಂದುವರಿದಿದೆ. ಹಳೆಯ ರೈಲ್ವೆ ಉಪಕರಣಗಳು ಮತ್ತು ನಿರ್ವಹಣಾ ಲೋಪಗಳು ಈಜಿಪ್ಟ್‌ನಲ್ಲಿ ಪದೇಪದೇ ರೈಲು ಅಪಘಾತಗಳಿಗೆ ಕಾರಣವಾಗುತ್ತಿವೆ.

Author

ANU News

Follow Me
Other Articles
Previous

‘Ramayana’ Nears ₹500 Crore Worldwide in Four Days

Next

Seven Killed, 112 Injured in Train Collision in Egypt

Recent Posts

  • ಕಾಮನ್‌ವೆಲ್ತ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಖ್ಯೋಡಾ ತಾಲಿಕ್‌ಗೆ ಚಿನ್ನ
  • Arunachal Karateka Khyoda Talik Wins Gold at Commonwealth Championship
  • ಯೂತ್ ಒಲಿಂಪಿಕ್ಸ್‌ನಲ್ಲಿ ಶೌರ್ಯ ಅಂಬುರೆಗೆ ಕಂಚಿನ ಪದಕ
  • Thane’s Shourya Ambure Scripts History With Youth Olympics Bronze in 100m Hurdles
  • BK Hariprasad Hails Sonia Gandhi’s Life of Sacrifice, Patience and Resilience
Copyright 2026 — ANU News. All rights reserved. Blogsy WordPress Theme