Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಖಾಸಗಿ ರಸ್ತೆಗಳು ಇನ್ಮುಂದೆ ಸಾರ್ವಜನಿಕ ಆಸ್ತಿ: ಏನಿದು ಹೊಸ ಕಾನೂನು?

By ANU News
August 21, 2026 1 Min Read
0

ಬೆಂಗಳೂರು: ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿರುವ ಖಾಸಗಿ ರಸ್ತೆಗಳು ಮತ್ತು ಚರಂಡಿಗಳು ಹದಗೆಟ್ಟು ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದರೆ, ಅವುಗಳನ್ನು ಸಾರ್ವಜನಿಕ ರಸ್ತೆಗಳಾಗಿ ಘೋಷಿಸಿ ಸ್ಥಳೀಯ ಸಂಸ್ಥೆಗಳ ಸುಪರ್ದಿಗೆ ಪಡೆಯಲು ಅವಕಾಶ ಕಲ್ಪಿಸುವ ಮಹತ್ವದ ತಿದ್ದುಪಡಿ ವಿಧೇಯಕಗಳಿಗೆ ವಿಧಾನಸಭೆ ಗುರುವಾರ ಅನುಮೋದನೆ ನೀಡಿದೆ.

ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡ ಮಂಡಿಸಿದ ‘ಕರ್ನಾಟಕ ಪುರಸಭೆಗಳ (ತಿದ್ದುಪಡಿ) ವಿಧೇಯಕ, 2026’ ಮತ್ತು ‘ಕರ್ನಾಟಕ ಮಹಾನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ, 2026’ಕ್ಕೆ ವಿಪಕ್ಷಗಳ ತೀವ್ರ ವಿರೋಧ ಹಾಗೂ ಗದ್ದಲದ ನಡುವೆಯೇ ಅಂಗೀಕಾರ ದೊರೆತಿದೆ.

ತಿದ್ದುಪಡಿಯನ್ವಯ, ನಗರ ಅಥವಾ ಪಟ್ಟಣ ಪ್ರದೇಶಗಳಲ್ಲಿರುವ ಖಾಸಗಿ ರಸ್ತೆಗಳು ಹಾಗೂ ಚರಂಡಿಗಳು ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಗೆ ಅಪಾಯ ಉಂಟುಮಾಡುವ ರೀತಿಯಲ್ಲಿ ಹದಗೆಟ್ಟಿದ್ದರೆ, ಮುನ್ಸಿಪಲ್ ಕಮಿಷನರ್ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಅವುಗಳನ್ನು ಸಾರ್ವಜನಿಕ ರಸ್ತೆ ಎಂದು ಘೋಷಿಸಿ ಸ್ಥಳೀಯ ಸಂಸ್ಥೆಯ ಸುಪರ್ದಿಗೆ ಪಡೆಯಬಹುದು. ಬಳಿಕ ರಸ್ತೆ ಅಭಿವೃದ್ಧಿ ಹಾಗೂ ನಿರ್ವಹಣೆಯ ಜವಾಬ್ದಾರಿ ಸ್ಥಳೀಯ ಸಂಸ್ಥೆಗೆ ಸೇರುತ್ತದೆ.

ಖಾಸಗಿ ರಸ್ತೆಯನ್ನು ಸಾರ್ವಜನಿಕ ರಸ್ತೆ ಎಂದು ಘೋಷಿಸಿದ ಬಳಿಕ ಮೂಲ ಭೂಮಾಲೀಕರಿಗೆ ಯಾವುದೇ ಹಣಕಾಸಿನ ಪರಿಹಾರ ನೀಡಲಾಗುವುದಿಲ್ಲ. ಅಲ್ಲದೆ, ಪರ್ಯಾಯವಾಗಿ ಅಭಿವೃದ್ಧಿ ಹಕ್ಕು ಪ್ರಮಾಣಪತ್ರ (TDR) ಪಡೆಯುವ ಅವಕಾಶವೂ ಇರುವುದಿಲ್ಲ.

ಅದೇ ವೇಳೆ, ಖಾಸಗಿ ರಸ್ತೆ ಅಥವಾ ಲೇಔಟ್‌ನ ಮಾಲೀಕರೂ ತಮ್ಮ ರಸ್ತೆಯನ್ನು ಸಾರ್ವಜನಿಕ ರಸ್ತೆಯಾಗಿ ಘೋಷಿಸುವಂತೆ ಸಂಬಂಧಪಟ್ಟ ನಗರಸಭೆ ಅಥವಾ ಪಾಲಿಕೆಗೆ ಮನವಿ ಸಲ್ಲಿಸಬಹುದು.

ಪರಿಹಾರ ನೀಡದೆ ಖಾಸಗಿ ಆಸ್ತಿಯನ್ನು ಸರ್ಕಾರದ ಸುಪರ್ದಿಗೆ ಪಡೆಯುವುದು ಆಸ್ತಿ ಮಾಲೀಕರ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ಅಧಿಕಾರಿಗಳು ತಮಗೆ ಬೇಕಾದ ಖಾಸಗಿ ಲೇಔಟ್‌ಗಳು ಅಥವಾ ಇತರ ಪ್ರದೇಶಗಳ ರಸ್ತೆಗಳನ್ನು ಸಾರ್ವಜನಿಕ ರಸ್ತೆ ಎಂದು ಘೋಷಿಸುವ ಮೂಲಕ ನಿಯಮ ದುರ್ಬಳಕೆ ಮಾಡುವ ಸಾಧ್ಯತೆಯ ಬಗ್ಗೆಯೂ ಆತಂಕ ವ್ಯಕ್ತಪಡಿಸಿವೆ.

ಆದರೆ, ನಿರ್ವಹಣೆಯಿಲ್ಲದೆ ಹದಗೆಟ್ಟಿರುವ ಖಾಸಗಿ ಬಡಾವಣೆಗಳ ರಸ್ತೆಗಳ ಸಮಸ್ಯೆಗೆ ಪರಿಹಾರ ಕಲ್ಪಿಸಲು ಈ ತಿದ್ದುಪಡಿ ಸಹಕಾರಿಯಾಗಲಿದೆ ಎಂದು ಸರ್ಕಾರದ ನಿಲುವಾಗಿದೆ.

Author

ANU News

Follow Me
Other Articles
Previous

Western Ghats draft: MLA Gantihole flags livelihood concerns over ESA boundaries

Next

Private roads to become public assets in Karnataka

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Five killed, five injured as speeding bus runs over crowd in Bihar’s Champaran
    • ಚಂಪಾರಣ್‌ನಲ್ಲಿ ಭೀಕರ ಅಪಘಾತ: ಬಸ್ ಹರಿದು 5 ಮಂದಿ ಸಾವು, 5 ಜನರಿಗೆ ಗಂಭೀರ ಗಾಯ
    • ಇರಾನ್‌ಗೆ ಅಣ್ವಸ್ತ್ರ ಹೊಂದಲು ಎಂದಿಗೂ ಅವಕಾಶವಿಲ್ಲ; ಆಯಕಟ್ಟಿನ ಜಲಮಾರ್ಗಗಳ ಮೇಲೆ ಅಮೆರಿಕದ ನಿಯಂತ್ರಣ: ಟ್ರಂಪ್
    • Trump says US ‘essentially controlling’ strategic waterways linked to Iran
    • Mangaluru railway area to come under Mysuru division of SWR from Oct 1: Brijesh Chota
    Copyright 2026 — ANU News. All rights reserved. Blogsy WordPress Theme