Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

‘ಚರ್ಚೆ ಇಲ್ಲದೆ ಮಂಡಿಸಿರುವ ಮಸೂದೆಗಳನ್ನು ಸರ್ಕಾರ ವಾಪಸ್ ಪಡೆಯಬೇಕು’

By ANU News
August 26, 2026 1 Min Read
0

ಬೆಂಗಳೂರು: ಪ್ರತಿಪಕ್ಷದ ಪ್ರಶ್ನೆಗಳಿಗೆ ಉತ್ತರಿಸಲು ಹೆದರಿ ಕಾಂಗ್ರೆಸ್ ಸರ್ಕಾರ ವಿಧಾನಮಂಡಲ ಅಧಿವೇಶನವನ್ನು ಮುಂಚಿತವಾಗಿ ರದ್ದುಪಡಿಸಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆರೋಪಿಸಿದ್ದಾರೆ. ಚರ್ಚೆ ಇಲ್ಲದೆ ಮಂಡಿಸಿರುವ ಮಸೂದೆಗಳನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್‌ನಲ್ಲೇ ನಡೆಯಬೇಕಿದ್ದ ಅಧಿವೇಶನ ಸಚಿವ ಸಂಪುಟದ ಆಂತರಿಕ ಭಿನ್ನಾಭಿಪ್ರಾಯದಿಂದ ತಡವಾಗಿ ಆರಂಭವಾಗಿತ್ತು. ಆದರೆ ಮೂರು ದಿನ ಮುಂಚಿತವಾಗಿಯೇ ಅಧಿವೇಶನವನ್ನು ರದ್ದುಪಡಿಸಿರುವುದು ಸರ್ಕಾರದ ಆಡಳಿತ ವೈಫಲ್ಯ ಎಂದು ಟೀಕಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಪ್ರಕರಣದಲ್ಲಿ ಸಚಿವ ಬಿ.ನಾಗೇಂದ್ರ ಅವರನ್ನು ರಕ್ಷಿಸಲು ಇಡೀ ಸದನದ ಕಲಾಪವನ್ನೇ ಮೊಟಕುಗೊಳಿಸಲಾಗಿದೆ ಎಂದು ಆರೋಪಿಸಿದ ಅವರು, ಬಿಜೆಪಿ ಅವಧಿಯಲ್ಲಿ ಆರೋಪ ಎದುರಾದಾಗ ಸಚಿವರಿಂದ ರಾಜೀನಾಮೆ ಪಡೆದು ಸದನದ ಕಲಾಪ ಮುಂದುವರಿಸಲಾಗಿತ್ತು ಎಂದರು.

ಬರ ಪರಿಸ್ಥಿತಿ, ನೈಸ್ ಟೋಲ್ ಅಕ್ರಮ, ಕೆಪಿಎಸ್‌ಸಿ ಅಕ್ರಮ, ಬೆಂಗಳೂರಿನ ಕಸ ಟೆಂಡರ್, ಸುರಂಗ ರಸ್ತೆ ಯೋಜನೆ ಹಾಗೂ ರೇಷನ್ ಕಾರ್ಡ್‌ಗಳ ಕಡಿತ ಸೇರಿದಂತೆ ಹಲವು ವಿಷಯಗಳ ಕುರಿತು ದಾಖಲೆಗಳೊಂದಿಗೆ ಚರ್ಚಿಸಲು ಬಿಜೆಪಿ ಸಿದ್ಧವಾಗಿತ್ತು. ಆದರೆ ಸರ್ಕಾರ ಅವಕಾಶ ನೀಡಲಿಲ್ಲ ಎಂದು ಹೇಳಿದರು.

ಉದ್ಯಾನಗಳ ಶೇ.5ರಷ್ಟು ಜಾಗ ಬಳಕೆಗೆ ವಿರೋಧ

ಸರ್ಕಾರ ಹಲವು ಮಸೂದೆಗಳನ್ನು ಚರ್ಚೆ ಇಲ್ಲದೆ ಅಂಗೀಕರಿಸಿದೆ ಎಂದು ಆರೋಪಿಸಿದ ಅಶೋಕ, ಉದ್ಯಾನಗಳ ಶೇ.5ರಷ್ಟು ಜಾಗವನ್ನು ಇತರೆ ಉದ್ದೇಶಗಳಿಗೆ ಬಳಸಲು ಅವಕಾಶ ನೀಡುವ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು.

ಉದ್ಯಾನಗಳು ಸಾರ್ವಜನಿಕರ ಆಸ್ತಿ. ಅವುಗಳನ್ನು ರಕ್ಷಿಸುವ ಬದಲು ಸರ್ಕಾರವೇ ಹಾಳು ಮಾಡಲು ಮುಂದಾಗಿದೆ ಎಂದು ಟೀಕಿಸಿದರು. ಲಾಲ್‌ಬಾಗ್‌ ಸೇರಿದಂತೆ ಬೆಂಗಳೂರಿನ ಉದ್ಯಾನಗಳ ಮೇಲೆ ಕಣ್ಣು ಹಾಕಲಾಗಿದೆ. ಸ್ಯಾಂಕಿ ಟ್ಯಾಂಕ್‌ ಬಳಿಯೂ ಔಟ್‌ಲೆಟ್‌ ನಿರ್ಮಿಸುವ ಪ್ರಸ್ತಾವನೆ ಇದೆ ಎಂದು ಆರೋಪಿಸಿದರು.

ಉದ್ಯಾನಗಳ ಜಾಗವನ್ನು ಲೀಸ್‌ಗೆ ನೀಡುವ ಕ್ರಮಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈ ಹಿಂದೆ ಆಕ್ಷೇಪ ವ್ಯಕ್ತಪಡಿಸಿತ್ತು. ಹೀಗಾಗಿ ಸರ್ಕಾರ ಇಂತಹ ಕ್ರಮ ಕೈಗೊಳ್ಳಬಾರದು ಎಂದು ಒತ್ತಾಯಿಸಿದರು.

ಉದ್ಯಾನಗಳ ಸಂರಕ್ಷಣೆಗೆ ಒತ್ತಾಯಿಸಿ ರಾಜ್ಯದ ವಿವಿಧ ಉದ್ಯಾನಗಳಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಆರ್.ಅಶೋಕ ಘೋಷಿಸಿದರು.

Author

ANU News

Follow Me
Other Articles
Previous

‘Development or real estate?’: Vijayendra questions Karnataka government’s priorities

Next

India, New Zealand step up defence cooperation; focus on maritime security, joint training

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Karnataka Cabinet to Decide on SC, ST Quota Appeal Against High Court Order: Parameshwara
    • ಮೀಸಲಾತಿ ಹೆಚ್ಚಳ ರದ್ದು ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ: ಸಂಪುಟದಲ್ಲಿ ಚರ್ಚಿಸಿ ಕ್ರಮ ಎಂದ ಡಿಸಿಎಂ 
    • Delhi Police Register Four FIRs Against INDIA Bloc Protesters
    • ದಿಲ್ಲಿ ಚಲೋ ಸಂಕಷ್ಟ: INDIA ಬಣದ ಹೋರಾಟಗಾರರ ವಿರುದ್ಧ ನಾಲ್ಕು ಎಫ್‌ಐಆರ್
    • Scindia Unveils ₹331-Crore Development Projects in Mizoram
    Copyright 2026 — ANU News. All rights reserved. Blogsy WordPress Theme