Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ವಿದೇಶ

ಜಾಗತಿಕ ಇಂಧನ ಬಿಕ್ಕಟ್ಟಿಗೆ ಉತ್ಪಾದನೆ ಕೊರತೆಯಲ್ಲ: ಜಿ20 ವಿದೇಶಾಂಗ ಸಚಿವರ ಸಭೆಯಲ್ಲಿ ಭಾರತದ ನಿಲುವು ಮಂಡನೆ

By ANU News
October 31, 2026 1 Min Read
Comments Off on ಜಾಗತಿಕ ಇಂಧನ ಬಿಕ್ಕಟ್ಟಿಗೆ ಉತ್ಪಾದನೆ ಕೊರತೆಯಲ್ಲ: ಜಿ20 ವಿದೇಶಾಂಗ ಸಚಿವರ ಸಭೆಯಲ್ಲಿ ಭಾರತದ ನಿಲುವು ಮಂಡನೆ

ಅಟ್ಲಾಂಟಾ: ಜಾಗತಿಕ ಇಂಧನ ಬಿಕ್ಕಟ್ಟಿಗೆ ಉತ್ಪಾದನೆಯ ಕೊರತೆಗಿಂತ ಪೂರೈಕೆ ಸರಪಳಿಯಲ್ಲಿನ ಅಡಚಣೆಗಳೇ ಪ್ರಮುಖ ಕಾರಣ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.

ಅಟ್ಲಾಂಟಾದಲ್ಲಿ ನಡೆದ ಜಿ20 ವಿದೇಶಾಂಗ ಸಚಿವರ ಸಭೆಯಲ್ಲಿ ಮಾತನಾಡಿದ ಅವರು, ಇಂಧನ ವ್ಯಾಪಾರ ಮತ್ತು ಮೂಲಸೌಕರ್ಯಗಳ ಮೇಲಿನ ದಾಳಿಗಳು ಬೆಲೆ ಏರಿಕೆಗೆ ಕಾರಣವಾಗುತ್ತಿವೆ. ನಿರ್ಬಂಧ ಹಾಗೂ ಅಡೆತಡೆಗಳಿಂದ ಜಾಗತಿಕ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದ್ದು, ಬಡ ರಾಷ್ಟ್ರಗಳು ಹೆಚ್ಚಿನ ಸಂಕಷ್ಟ ಎದುರಿಸುತ್ತಿವೆ ಎಂದರು.

ಭಾರತಕ್ಕೆ ಎಲ್‌ಪಿಜಿ ನಿರಂತರ ಮತ್ತು ವಿಶ್ವಾಸಾರ್ಹ ಪೂರೈಕೆ ಅಗತ್ಯವಿದೆ ಎಂದು ಪ್ರತಿಪಾದಿಸಿದ ಅವರು, ನಿರ್ಣಾಯಕ ಖನಿಜಗಳ ಅನ್ವೇಷಣೆಯಿಂದ ಮರುಬಳಕೆಯವರೆಗೆ ರಾಷ್ಟ್ರೀಯ ಮಿಷನ್ ಕೈಗೊಂಡಿರುವುದನ್ನು ವಿವರಿಸಿದರು. ಜಿ20 ನಿರ್ಣಾಯಕ ಖನಿಜ ಮರುಬಳಕೆ ಉಪಕ್ರಮಕ್ಕೂ ಪ್ರಸ್ತಾಪಿಸಿದರು.

ಹಸಿರು ಹೈಡ್ರೋಜನ್, ಜೈವಿಕ ಇಂಧನ ಮತ್ತು ಸಣ್ಣ ಅಣು ರಿಯಾಕ್ಟರ್‌ಗಳಿಗೆ ಹೂಡಿಕೆ ಹೆಚ್ಚಿಸುವಂತೆ ಕರೆ ನೀಡಿದರು. ಜಾಗತಿಕ ಸಂಘರ್ಷಗಳಿಗೆ ಸೇನಾ ಪರಿಹಾರ ಸಾಧ್ಯವಿಲ್ಲ; ರಾಜತಾಂತ್ರಿಕತೆಗೆ ಅವಕಾಶ ನೀಡಬೇಕು. ನಾಗರಿಕ ಹಡಗುಗಳು ಮತ್ತು ನಾವಿಕರ ಮೇಲಿನ ದಾಳಿಗಳು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೆಚ್ಚಿನ ಹೊಡೆತ ನೀಡುತ್ತವೆ ಎಂದರು.

Author

ANU News

Follow Me
Other Articles
Previous

US Clears Proposed $2.1 Billion Patriot Missile Deal for Ukraine

Next

Supply Disruptions, Not Production Shortage, Driving Global Energy Crisis: Jaishankar

Recent Posts

  • ISRO Launches 2,250-Kg NVS-03 Satellite to Strengthen India’s NavIC System
  • ಇಸ್ರೋದಿಂದ ಎನ್‌ವಿಎಸ್-03 ನ್ಯಾವಿಗೇಷನ್ ಉಪಗ್ರಹ ಯಶಸ್ವಿ ಉಡಾವಣೆ
  • India Beat Cuba 6-4, Finish FIFA U-15 World Cup and Festival in 87th Place
  • ಫಿಫಾ ಅಂಡರ್-15 ವಿಶ್ವಕಪ್, ಫೆಸ್ಟಿವಲ್‌: ಕ್ಯೂಬಾ ವಿರುದ್ಧ ಭಾರತಕ್ಕೆ ಜಯ
  • SAFF Championship: Young India Squad to Begin Title Defence Against Pakistan
Copyright 2026 — ANU News. All rights reserved. Blogsy WordPress Theme