Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಕ್ರೀಡೆ

ಫುಟ್‌ಬಾಲ್ ದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ; 23 ವರ್ಷಗಳಲ್ಲಿ ಪೋರ್ಚುಗಲ್ ಪರ 234 ಪಂದ್ಯಗಳ ಆಟ, 146 ಗೋಲು

By ANU News
November 6, 2026 1 Min Read
Comments Off on ಫುಟ್‌ಬಾಲ್ ದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ; 23 ವರ್ಷಗಳಲ್ಲಿ ಪೋರ್ಚುಗಲ್ ಪರ 234 ಪಂದ್ಯಗಳ ಆಟ, 146 ಗೋಲು

ಲಿಸ್ಬನ್: ಫುಟ್‌ಬಾಲ್ ದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ ಅವರು ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ವಿದಾಯ ಘೋಷಿಸಿದ್ದಾರೆ. ಅಂತಾರಾಷ್ಟ್ರೀಯ ಫುಟ್‌ಬಾಲ್‌ ನ ದಂತಕಥೆಯಾಗಿದ್ದ ಕ್ರಿಸ್ಟಿಯಾನೊ ರೊನಾಲ್ಡೊ ತಮ್ಮ 41ನೇ ವಯಸ್ಸಿನಲ್ಲಿ ತಮ್ಮ ಈ ನಿರ್ಧಾರ ಕೈಗೊಂಡಿದ್ದಾರೆ.

23 ವರ್ಷಗಳ ವೃತ್ತಿಜೀವನದಲ್ಲಿ ಪೋರ್ಚುಗಲ್ ಪರ 234 ಪಂದ್ಯಗಳನ್ನು ಆಡಿರುವ ರೊನಾಲ್ಡೊ 146 ಗೋಲು ದಾಖಲಿಸಿದ್ದಾರೆ. ಅಂತಾರಾಷ್ಟ್ರೀಯ ಪುರುಷರ ಫುಟ್‌ಬಾಲ್‌ನಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ವಿಶ್ವದಾಖಲೆ ಅವರ ಹೆಸರಿನಲ್ಲಿದೆ.

2003ರಲ್ಲಿ 18ನೇ ವಯಸ್ಸಿನಲ್ಲಿ ಹಿರಿಯರ ತಂಡಕ್ಕೆ ಪಾದಾರ್ಪಣೆ ಮಾಡಿದ ಅವರು, ಐದು ಫಿಫಾ ವಿಶ್ವಕಪ್ ಮತ್ತು ಆರು ಯುರೋಪಿಯನ್ ಚಾಂಪಿಯನ್‌ಷಿಪ್‌ಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. 2016ರ ಯುರೋ ಕಪ್ ಹಾಗೂ 2019ರ ಯುಇಎಫ್‌ಎ ನೇಷನ್ಸ್ ಲೀಗ್ ಗೆಲುವಿನಲ್ಲಿ ನಾಯಕನಾಗಿ ಪ್ರಮುಖ ಪಾತ್ರ ವಹಿಸಿದ್ದರು.

ದೇಶದ ಜರ್ಸಿಗಾಗಿ ತಮ್ಮ ಸಂಪೂರ್ಣ ಶ್ರಮ ಮತ್ತು ಶಕ್ತಿಯನ್ನು ನೀಡಿದ್ದೇನೆ ಎಂದು ಭಾವುಕ ಸಂದೇಶದಲ್ಲಿ ತಿಳಿಸಿದ್ದಾರೆ. ರೊನಾಲ್ಡೊ ಅವರ ನಿರ್ಗಮನದೊಂದಿಗೆ ಪೋರ್ಚುಗಲ್ ಫುಟ್‌ಬಾಲ್‌ನಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ.

Author

ANU News

Follow Me
Other Articles
Previous

Jagan Accuses Naidu Govt of Undermining Fair Elections in Andhra Pradesh

Next

234 Matches, 146 Goals: Cristiano Ronaldo’s Remarkable 23-Year Portugal Journey

Recent Posts

  • ‘ಚುನಾವಣಾ ಆಯೋಗದ ವಿರುದ್ಧ ಅಪಪ್ರಚಾರ ಬೇಡ, SIR ಅಕ್ರಮ ಸಾಬೀತುಪಡಿಸಿ’: ಕಾಂಗ್ರೆಸ್‌ಗೆ ಡಾ.ರವಿ ಸಿ.ಟಿ. ಸವಾಲು
  • Diwali 2026: K’taka minister Ramalinga Reddy Appeals to Public to Use Only Green Crackers
  • ಪರಿಸರ ಸ್ನೇಹಿ ದೀಪಾವಳಿ ಆಚರಿಸಿ; ಹಸಿರು ಪಟಾಕಿಗಳಿಗೆ ಮಾತ್ರ ಅವಕಾಶ: ಸಚಿವ ರಾಮಲಿಂಗಾ ರೆಡ್ಡಿ ಕಿವಿಮಾತು
  • PM Modi’s Karnataka Visit on November 13: Pink Metro, Planetarium Among Key Events
  • ನವೆಂಬರ್ 13ರಂದು ಬೆಂಗಳೂರಿನ ಪಿಂಕ್ ಮೆಟ್ರೋ ಮಾರ್ಗ ಉದ್ಘಾಟಿಸಲಿರುವ ಪ್ರಧಾನಿ ಮೋದಿ
Copyright 2026 — ANU News. All rights reserved. Blogsy WordPress Theme