Skip to content
ANU News
ANU News
  • Home
  • Home
ANU News
ANU News
  • Home
  • Home
ಎಲ್ಲಾ ಸುದ್ದಿದೇಶಪ್ರಾದೇಶಿಕ

ಮತ್ತೊಮ್ಮೆ ಇಂಧನ ದರ ಏರಿಕೆ: ಸಾರ್ವಜನಿಕರಿಗೆ ಬೆಲೆ ಬಿಸಿ

By ANU News
May 19, 2026 1 Min Read
0

ಬೆಂಗಳೂರು: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಮತ್ತೊಮ್ಮೆ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ಮಾಡಿದ್ದು, ಸಾರ್ವಜನಿಕರಿಗೆ ಬೆಲೆ ಬಿಸಿ ಮತ್ತಷ್ಟು ಹೆಚ್ಚಾಗಿದೆ.

ಒಂದೇ ವಾರದಲ್ಲಿ ಎರಡನೇ ಬಾರಿ ಇಂಧನ ದರ ಏರಿಕೆಯಾಗಿದ್ದು, ಜನರ ಜೇಬಿಗೆ ಮತ್ತಷ್ಟು ಕತ್ತರಿ ಬಿದ್ದಂತಾಗಿದೆ. ಕಳೆದ ಶುಕ್ರವಾರ ತೈಲ ಕಂಪನಿಗಳು ಪ್ರತಿ ಲೀಟರ್‌ಗೆ 3 ರೂ. ಹೆಚ್ಚಳ ಮಾಡಿದ್ದವು. ಇದೀಗ ಮಂಗಳವಾರ ಬೆಳ್ಳಂಬೆಳಗ್ಗೆ ಮತ್ತೆ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಸರಾಸರಿ 90 ಪೈಸೆ ಏರಿಕೆ ಮಾಡಲಾಗಿದೆ.

ಇಂಧನ ದರ ಏರಿಕೆಯಿಂದ ವಾಹನ ಸವಾರರು, ಸಾರಿಗೆ ಕ್ಷೇತ್ರ ಹಾಗೂ ಸಾಮಾನ್ಯ ಜನರು ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ದಿನನಿತ್ಯದ ವಸ್ತುಗಳ ಬೆಲೆಯ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ.

ಪ್ರಮುಖ ನಗರಗಳಲ್ಲಿನ ಪೆಟ್ರೋಲ್ ದರ:
ದೆಹಲಿ – ₹98.64 (+0.87)
ಕೋಲ್ಕತಾ – ₹109.70 (+0.96)
ಮುಂಬೈ – ₹107.59 (+0.91)
ಚೆನ್ನೈ – ₹104.49 (+0.82)

ಪ್ರಮುಖ ನಗರಗಳಲ್ಲಿನ ಡೀಸೆಲ್ ದರ:
ದೆಹಲಿ – ₹91.58 (+0.91)
ಕೋಲ್ಕತಾ – ₹96.07 (+0.94)
ಮುಂಬೈ – ₹94.08 (+0.94)
ಚೆನ್ನೈ – ₹96.11 (+0.86)

ಇಂಧನ ದರ ಏರಿಕೆಯಿಂದ ಮುಂದಿನ ದಿನಗಳಲ್ಲಿ ಸಾರಿಗೆ ವೆಚ್ಚ ಹೆಚ್ಚುವ ಸಾಧ್ಯತೆ ಇದ್ದು, ಅದರ ಪರಿಣಾಮವಾಗಿ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗುವ ಆತಂಕ ವ್ಯಕ್ತವಾಗಿದೆ.

Author

ANU News

Follow Me
Other Articles
Previous

ಸುವೇಂದು ಅಧಿಕಾರಿ ಪಿಎ ಕೊಲೆ ಪ್ರಕರಣ: ಪ್ರಮುಖ ಶೂಟರ್ ರಾಜ್‌ಕುಮಾರ್ ಸಿಂಗ್ ಬಂಧನ

Next

2028ರಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ: ಡಿ.ಕೆ. ಶಿವಕುಮಾರ್ ವಿಶ್ವಾಸ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ₹39,000 ಕೋಟಿ ಘನತ್ಯಾಜ್ಯ ಟೆಂಡರ್ ರಾಜ್ಯದ ಅತಿದೊಡ್ಡ ಹಗರಣ: ಕುಮಾರಸ್ವಾಮಿ
    • ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಜೈಲಿನಲ್ಲಿ ಹೃದಯಾಘಾತದಿಂದ ಸಾವು
    • ಸೆಲೂನ್, ಸ್ಪಾ, ಮಸಾಜ್ ಕೇಂದ್ರಗಳ ನಿಯಂತ್ರಣಕ್ಕೆ ವಿಶೇಷ ಕಾನೂನು: ವಕೀಲ ಮನೋರಾಜ್ ಸಲಹೆಗೆ ಕಾನೂನು ಆಯೋಗ ಅಸ್ತು, ರಾಜ್ಯ ಸರ್ಕಾರಕ್ಕೆ ಮಹತ್ವದ ಶಿಫಾರಸು
    • ಉತ್ತಮ ಡಿಜಿಟಲ್ ಸಂಪರ್ಕ ಮೌಲ್ಯಮಾಪನಕ್ಕೆ TRAI ಹೊಸ ರೇಟಿಂಗ್ ಕೈಪಿಡಿ ಬಿಡುಗಡೆ
    • ಇರಾನ್ ಜೊತೆ ಒಪ್ಪಂದವಾದರೆ ತೈಲ ಬೆಲೆ ಇಳಿಕೆ: ಟ್ರಂಪ್
    Copyright 2026 — ANU News. All rights reserved. Blogsy WordPress Theme