Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶ

ಮಾಲ್ಡೀವ್ಸ್‌ಗೆ ಜಿಐ ಟ್ಯಾಗ್‌ನ ಗುಲ್ಬರ್ಗಾ ತೊಗರಿಬೇಳೆ ರಫ್ತು: ರೈತರಿಗೆ ಶೇ.30 ಹೆಚ್ಚುವರಿ ಆದಾಯ

By ANU News
September 26, 2026 1 Min Read
0

ಬೆಂಗಳೂರು: ಕರ್ನಾಟಕದ ಪ್ರಸಿದ್ಧ ಗುಲ್ಬರ್ಗಾ ತೊಗರಿಬೇಳೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದ್ದು, ಜಿಐ ಟ್ಯಾಗ್ ಹೊಂದಿರುವ 1 ಮೆಟ್ರಿಕ್ ಟನ್ ತೊಗರಿಬೇಳೆ ಮಾಲ್ಡೀವ್ಸ್‌ಗೆ ರಫ್ತಾಗಿದೆ.

ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (APEDA) ಸೆ.24ರಂದು ರಫ್ತು ಸರಕಿಗೆ ಚಾಲನೆ ನೀಡಿತು. ಮೈಸೂರಿನ ಸಿಲ್ಕೆನ್ ಗ್ಲೋಬಲ್ ಎಕ್ಸ್‌ಪೋರ್ಟ್ಸ್ ಆ್ಯಂಡ್ ಇಂಪೋರ್ಟ್ಸ್ ಸಂಸ್ಥೆ ತನ್ನ ಎಫ್‌ಪಿಒ ಆಧಾರಿತ ಬ್ರ್ಯಾಂಡ್ ಮೂಲಕ ಸರಕನ್ನು ರಫ್ತು ಮಾಡಿದ್ದು, ಸಮುದ್ರ ಮಾರ್ಗದ ಮೂಲಕ ಮಾಲ್ಡೀವ್ಸ್‌ಗೆ ಸಾಗಿಸಲಾಗುತ್ತಿದೆ.

ರಫ್ತು ಆಧಾರಿತ ಮೌಲ್ಯ ಸರಪಳಿಯ ಪ್ರಮುಖ ಅಂಶವೆಂದರೆ ರೈತರಿಗೆ ದೊರೆಯುವ ಹೆಚ್ಚಿನ ಬೆಲೆ. ಪ್ರಸ್ತುತ ಮಾರುಕಟ್ಟೆ ದರ ಕೆ.ಜಿ.ಗೆ ಸುಮಾರು ₹60 ಇದ್ದರೆ, ರಫ್ತು ಮಾರ್ಗದ ಮೂಲಕ ರೈತರಿಗೆ ₹82ರಷ್ಟು ಬೆಲೆ ದೊರೆಯುವ ನಿರೀಕ್ಷೆಯಿದೆ. ಇದು ಮಾರುಕಟ್ಟೆ ದರಕ್ಕಿಂತ ಶೇ.30ಕ್ಕೂ ಅಧಿಕ ಹೆಚ್ಚಳವಾಗಿದೆ.

ಈ ಕ್ರಮದಿಂದ ರೈತ ಉತ್ಪಾದಕ ಸಂಸ್ಥೆಗಳು (FPOs) ರಫ್ತು ಆಧಾರಿತ ಮೌಲ್ಯ ಸರಪಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸಲು ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಗಳೊಂದಿಗೆ ನೇರ ಸಂಪರ್ಕ ಬೆಳೆಸಿಕೊಳ್ಳಲು ಅವಕಾಶವಾಗಲಿದೆ ಎಂದು APEDA ತಿಳಿಸಿದೆ.

ಜಿಐ ಮಾನ್ಯತೆಯಿಂದ ಜಾಗತಿಕ ಗುರುತು
ಕಲಬುರಗಿ ಭಾಗದೊಂದಿಗೆ ಗುರುತಿಸಿಕೊಂಡಿರುವ ಗುಲ್ಬರ್ಗಾ ತೊಗರಿಬೇಳೆಗೆ 2019ರಲ್ಲಿ ಭೌಗೋಳಿಕ ಸೂಚ್ಯಂಕ (GI) ನೋಂದಣಿ ದೊರೆತಿದೆ. ವಿಶಿಷ್ಟ ರುಚಿ ಮತ್ತು ಗುಣಮಟ್ಟಕ್ಕೆ ಹೆಸರುವಾಸಿಯಾಗಿರುವ ಈ ಉತ್ಪನ್ನವು ಕಲ್ಯಾಣ ಕರ್ನಾಟಕದ ಕೃಷಿ ಆರ್ಥಿಕತೆಯಲ್ಲಿ ಪ್ರಮುಖ ಸ್ಥಾನ ಹೊಂದಿದೆ.

ಗುಲ್ಬರ್ಗಾ ತೊಗರಿಬೇಳೆಯನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಕೊಂಡೊಯ್ಯುವುದರಿಂದ ರೈತರಿಗೆ ಮಾರುಕಟ್ಟೆ ಸಂಪರ್ಕ ಬಲಪಡಿಸುವುದರ ಜತೆಗೆ ಪ್ರಾದೇಶಿಕ ಕೃಷಿ ಉತ್ಪನ್ನಗಳಿಗೆ ಜಾಗತಿಕ ಮನ್ನಣೆ ದೊರೆಯಲಿದೆ ಎಂದು APEDA ಅಧ್ಯಕ್ಷ ಅಭಿಷೇಕ್ ದೇವ್ ಹೇಳಿದ್ದಾರೆ.

ಮಾಲ್ಡೀವ್ಸ್‌ಗೆ ನಡೆದ ಈ ರಫ್ತು ಮುಂದಿನ ದಿನಗಳಲ್ಲಿ ಗುಲ್ಬರ್ಗಾ ತೊಗರಿಬೇಳೆಯ ನಿಯಮಿತ ರಫ್ತಿಗೆ ದಾರಿ ಮಾಡಿಕೊಡುವ ನಿರೀಕ್ಷೆಯಿದ್ದು, ಕರ್ನಾಟಕದ ರೈತರು, FPOಗಳು ಹಾಗೂ ರಫ್ತುದಾರರಿಗೆ ನಿರಂತರ ಮಾರುಕಟ್ಟೆ ಅವಕಾಶಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ.

ರಫ್ತು ಚಾಲನೆ ಕಾರ್ಯಕ್ರಮದಲ್ಲಿ APEDA ಹಿರಿಯ ಅಧಿಕಾರಿಗಳು ಹಾಗೂ ಉದ್ಯಮ ಪ್ರತಿನಿಧಿಗಳಾದ ಡಾ. ತರುಣ್ ಬಜಾಜ್, ವಿನಿತಾ ಸುಧಾಂಶು, KSPAML ವ್ಯವಸ್ಥಾಪಕ ನಿರ್ದೇಶಕ ವಿ. ಸದಾಶಿವ ಹಾಗೂ ಸಿಲ್ಕೆನ್ ಗ್ಲೋಬಲ್ ಎಕ್ಸ್‌ಪೋರ್ಟ್ಸ್ ಆ್ಯಂಡ್ ಇಂಪೋರ್ಟ್ಸ್‌ನ ಇಮ್ರಾನ್ ಪಾಷಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಜಿಐ ಟ್ಯಾಗ್ ಹೊಂದಿರುವ ಹಾಗೂ ಮೌಲ್ಯವರ್ಧಿತ ಕೃಷಿ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಪರಿಚಯಿಸುವ APEDA ಪ್ರಯತ್ನಗಳ ಭಾಗವಾಗಿ ಈ ರಫ್ತು ನಡೆದಿದೆ.

Author

ANU News

Follow Me
Other Articles
Previous

GI-tagged Gulbarga Tur Dal exported to Maldives; farmers get 30% higher realisation

Next

ಸಾಗುವಳಿ ಚೀಟಿ ಅಕ್ರಮ ಬಯಲು: 691 ಪ್ರಕರಣಗಳಲ್ಲಿ ನಿಯಮ ಉಲ್ಲಂಘನೆ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Karnataka CM Shivakumar Demands Scrapping of SIR, Fresh Electoral Roll Revision
    • SIR ರದ್ದುಗೊಳಿಸಿ ಹೊಸದಾಗಿ ಪ್ರಕ್ರಿಯೆ ನಡೆಸಬೇಕು; ಸಿಎಂ ಡಿ.ಕೆ. ಶಿವಕುಮಾರ್ ಆಗ್ರಹ
    • Humanity Must Remain at Heart of Education Amid AI Shift: Experts
    • ತಂತ್ರಜ್ಞಾನ ಬದಲಾದರೂ ಶಿಕ್ಷಣದಲ್ಲಿ ಮಾನವೀಯತೆ ಉಳಿಯಲಿ: ಅಲಯನ್ಸ್ ವಿವಿ ‘ಇಂಟರ್‌ನ್ಯಾಷನಲ್ ಸ್ಕೂಲ್ ಲೀಡರ್ಸ್ ಸಮಿಟ್’ನಲ್ಲಿ ಶಿಕ್ಷಣ ತಜ್ಞರ ಕರೆ
    • Don’t Blame Election Commission for Poll Defeats, Says Karnataka BJP MLC CT Ravi
    Copyright 2026 — ANU News. All rights reserved. Blogsy WordPress Theme