Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶ

ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಚಲಿಸುತ್ತಿದ್ದ ಬಸ್‌ಗೆ ಬೆಂಕಿ; 40 ಪ್ರಯಾಣಿಕರು ಪಾರು

By ANU News
November 14, 2026 1 Min Read
Comments Off on ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಚಲಿಸುತ್ತಿದ್ದ ಬಸ್‌ಗೆ ಬೆಂಕಿ; 40 ಪ್ರಯಾಣಿಕರು ಪಾರು

ಮಥುರಾ: ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಯಮುನಾ ಎಕ್ಸ್‌ಪ್ರೆಸ್‌ವೇಯ ರಾಯಾ ಕಟ್ ಸೇತುವೆ ಮೇಲೆ ಶನಿವಾರ ಮುಂಜಾನೆ ಚಲಿಸುತ್ತಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ಬಸ್‌ನಲ್ಲಿದ್ದ ಸುಮಾರು 40 ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತರಲಾಗಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ದೆಹಲಿ ಕಾಶ್ಮೀರಿ ಗೇಟ್‌ನಿಂದ ಮಧ್ಯಪ್ರದೇಶದ ಛತ್ತರ್‌ಪುರಕ್ಕೆ ತೆರಳುತ್ತಿದ್ದ ಖಜುರಾಹೋ ಟ್ರಾವೆಲ್ಸ್‌ಗೆ ಸೇರಿದ ಬಸ್‌ನಲ್ಲಿ ಬೆಳಗಿನ ಜಾವ 1.38ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದಾರೆ.

ಸುಮಾರು ಒಂದೂವರೆ ಗಂಟೆಗಳ ಕಾರ್ಯಾಚರಣೆ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಬೆಂಕಿಯ ತೀವ್ರತೆಗೆ ಬಸ್ ಸಂಪೂರ್ಣ ಸುಟ್ಟುಹೋಗಿದ್ದು, ಪ್ರಯಾಣಿಕರ ವಸ್ತುಗಳಿಗೂ ಹಾನಿಯಾಗಿದೆ. ಸದ್ಯ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Author

ANU News

Follow Me
Other Articles
Previous

Harmanpreet Kaur Gets World’s First Wax Statue of Female Cricketer

Next

40 Passengers Escape as Bus Catches Fire on Yamuna Expressway

Recent Posts

  • ಪ್ರಧಾನಿ ಮೋದಿ ಆಹ್ವಾನಕ್ಕೆ ಭಾರತಕ್ಕೆ ಬರಲಿರುವ ನೇಪಾಳ ಪ್ರಧಾನಿ ಬಾಲೆನ್ ಶಾ; ನ.22ರಿಂದ ಎರಡು ದಿನಗಳ ಭೇಟಿ
  • Nepal PM Balen Shah to visit India on November 22 for first bilateral foreign trip
  • Samantha Ruth Prabhu and Raj Nidimoru welcome baby boy; name him Dev Nidimoru
  • ಸಮಂತಾ-ರಾಜ್ ದಂಪತಿಗೆ ಗಂಡು ಮಗು ಜನನ; ಮಗುವಿಗೆ ‘ದೇವ್ ನಿಡಿಮೋರು’ ಎಂದು ನಾಮಕರಣ!
  • ‘ಬಸವಣ್ಣನವರ ಗೌರವಕ್ಕೆ ಧಕ್ಕೆಯಾದರೆ ಸರ್ಕಾರ ಸುಮ್ಮನಿರಲ್ಲ’: ಮುಖ್ಯಮಂತ್ರಿ ಎಚ್ಚರಿಕೆ
Copyright 2026 — ANU News. All rights reserved. Blogsy WordPress Theme