Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಕ್ರೀಡೆದೇಶ

‘ಸನ್‌ರೈಸರ್ಸ್’ ಅದ್ಭುತ ಗೆಲುವು: 244 ರನ್ ಗುರಿ ಬೆನ್ನಟ್ಟಿ ದಾಖಲೆ ಚೇಸ್

By ANU News
April 30, 2026 1 Min Read
0

ಮುಂಬೈ: ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು 5 ವಿಕೆಟ್ ನಷ್ಟಕ್ಕೆ ಭರ್ಜರಿ 243 ರನ್ ಕಲೆಹಾಕಿದರೂ, ಸನ್‌ರೈಸರ್ಸ್ ಹೈದರಾಬಾದ್ ತಂಡ ಅದ್ಭುತ ಚೇಸಿಂಗ್ ಮೂಲಕ 8 ಎಸೆತಗಳು ಬಾಕಿ ಇರುವಾಗಲೇ 249 ರನ್ ಬಾರಿಸಿ ಗೆಲುವಿನ ನಗೆ ಬೀರಿತು.

ಮುಂಬೈ ಪರ ರಯಾನ್ ರಿಕಲ್ಟನ್ ಅಜೇಯ 123 ರನ್ ಸಿಡಿಸಿ ಮಿಂಚಿದರು. ಜೊತೆಗೆ ವಿಲ್ ಜ್ಯಾಕ್ಸ್ (46) ಮತ್ತು ಹಾರ್ದಿಕ್ ಪಾಂಡ್ಯ (31) ತಂಡಕ್ಕೆ ಬಲ ನೀಡಿದರು. ರಿಕಲ್ಟನ್ ಕೇವಲ 44 ಎಸೆತಗಳಲ್ಲಿ ಶತಕ ಪೂರೈಸಿದ್ದು, ಮುಂಬೈ ಪರ ವೇಗದ ಶತಕದ ದಾಖಲೆ ನಿರ್ಮಿಸಿದರು.

ಪ್ರತ್ಯುತ್ತರವಾಗಿ ಹೈದರಾಬಾದ್ ಪರ ಟ್ರಾವಿಸ್ ಹೆಡ್ 76 ರನ್, ಅಭಿಷೇಕ್ ಶರ್ಮಾ 45 ರನ್ ಗಳಿಸಿದರು. ಇಶಾನ್ ಕಿಶನ್ ಡಕೌಟ್ ಆಗಿ ನಿರಾಸೆ ಮೂಡಿಸಿದರು. ಬಳಿಕ ನಿತೀಶ್ ಕುಮಾರ್ ರೆಡ್ಡಿ 21 ರನ್ ಗಳಿಸಿ ಔಟಾದರು.

ಅಂತಿಮ ಘಟ್ಟದಲ್ಲಿ ಹೆನ್ರಿಚ್ ಕ್ಲಾಸೆನ್ ಅಜೇಯ 65 ಮತ್ತು ಸಲೀಲ್ ಅರೋರಾ ಅಜೇಯ 30 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಮುಂಬೈ ಆರಂಭಿಕ ಜೋಡಿ ಜ್ಯಾಕ್ಸ್-ರಿಕಲ್ಟನ್ ಮೊದಲ ವಿಕೆಟ್‌ಗೆ 93 ರನ್ ಸೇರಿಸಿ ಉತ್ತಮ ನೆಲೆ ನಿರ್ಮಿಸಿತ್ತು. ಆದರೆ ಅಂತಿಮವಾಗಿ ಹೈದರಾಬಾದ್ ಬ್ಯಾಟರ್‌ಗಳ ಸ್ಫೋಟಕ ಆಟಕ್ಕೆ ಮುಂಬೈ ಬೌಲರ್‌ಗಳು ಉತ್ತರ ಕಾಣಲಿಲ್ಲ.

Author

ANU News

Follow Me
Other Articles
Previous

South Coastal Railway zone from June 1; AP gets record rail push

Next

ಪಂಚ ರಾಜ್ಯ ಚುನಾವಣೆ: ಎಕ್ಸಿಟ್ ಪೋಲ್‌ಗಳ ಮಿಶ್ರ ಚಿತ್ರ, ಫಲಿತಾಂಶದತ್ತ ದೇಶದ ಕಣ್ಣು

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಅಂಬರೀಶ್’ಗೆ ಮರಣೋತ್ತರ ‘ಕರ್ನಾಟಕ ರತ್ನ’ ನೀಡಿ: ಸರ್ಕಾರಕ್ಕೆ ಪ್ರಸ್ತಾವನೆ ರಾಮಲಿಂಗಾ ರೆಡ್ಡಿ ಪ್ರಸ್ತಾವನೆ
    • Protest march in Byndoor over alleged cattle theft
    • ಗೋಕಳ್ಳತನ ಖಂಡಿಸಿ ಬೈಂದೂರಿನಲ್ಲಿ ಭವ್ಯ ಪಾದಯಾತ್ರೆ: ಗೋಹಂತಕರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ;
    • ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ: ಭಾರತ ತಂಡ ಪ್ರಕಟ
    • Ramalinga Reddy proposes posthumous ‘Karnataka Ratna’ for actor Ambarish
    Copyright 2026 — ANU News. All rights reserved. Blogsy WordPress Theme