Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಹಾಲಿನ ದರ ಹೆಚ್ಚಳಕ್ಕೆ ಸರ್ಕಾರದ ಕಸರತ್ತು; ಚುನಾವಣಾ ಆಯೋಗದ ಅನುಮತಿ ಸಿಕ್ಕಿದರೆ ಬೆಲೆ ಏರಿಕೆ ಎಂದ ಸಚಿವ

By ANU News
October 7, 2026 1 Min Read
0

ಮಂಡ್ಯ: ಕೆಲವು ಜಿಲ್ಲೆಗಳಲ್ಲಿ ನೀತಿಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಹಾಲಿನ ದರ ಏರಿಕೆಗೆ ಚುನಾವಣಾ ಆಯೋಗದ ಅನುಮತಿ ಕೋರಲಾಗಿದೆ. ಅನುಮತಿ ದೊರೆತರೆ ದರ ಹೆಚ್ಚಿಸಲಾಗುವುದು; ಇಲ್ಲದಿದ್ದರೆ ಚುನಾವಣೆ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಸಚಿವ ಎನ್‌. ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ರೈತರ ಕುಂದುಕೊರತೆ, ಬರ ಪರಿಸ್ಥಿತಿ ಹಾಗೂ 6ನೇ ಹಂತದ ಕುಡಿಯುವ ನೀರಿನ ಸಮಸ್ಯೆಗಳ ಕುರಿತು ನಡೆದ ರೈತ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

ಮನ್‌ಮುಲ್ ಹಗರಣದಲ್ಲಿ ಯಾರಿಗೂ ರಕ್ಷಣೆ ಇಲ್ಲ

ಮನ್‌ಮುಲ್ ಹಗರಣ ಬೆಳಕಿಗೆ ಬಂದ 24 ಗಂಟೆಯೊಳಗೆ ಕಾನೂನು ಕ್ರಮ ಕೈಗೊಳ್ಳುವಂತೆ ತಾನೇ ಸೂಚಿಸಿದ್ದಾಗಿ ಸಚಿವರು ತಿಳಿಸಿದರು. “ಜಿಲ್ಲಾ ಪೊಲೀಸರ ಮೇಲೆ ನನಗೆ ಪೂರ್ಣ ವಿಶ್ವಾಸವಿದೆ. ಅಗತ್ಯವಿದ್ದರೆ ಉನ್ನತ ಮಟ್ಟದ ತನಿಖೆಗೂ ವಹಿಸಲಾಗುವುದು. ಆರೋಪಿಗಳು ನನ್ನ ಆಪ್ತರಾಗಿದ್ದರೂ ಅವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು” ಎಂದು ಸ್ಪಷ್ಟಪಡಿಸಿದರು.

ಅಗತ್ಯ ಬಿದ್ದರೆ ಇಡೀ ಆಡಳಿತ ಮಂಡಳಿಯನ್ನೇ ಸೂಪರ್‌ಸೀಡ್ ಮಾಡುವ ಕ್ರಮ ಕೈಗೊಳ್ಳಲಾಗುವುದು ಎಂದರು.

Author

ANU News

Follow Me
Other Articles
Previous

Kumaraswamy’s ‘sting operation’ claim politically motivated, says Ramesh Babu

Next

PM Modi meets L.K. Advani, seeks his blessings

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಮೋದಿ ಭೇಟಿ ಮಾಡಿದ ಚಂದ್ರಬಾಬು ನಾಯ್ಡು; ನದಿ ಜೋಡಣೆ ಯೋಜನೆ ಕುರಿತು ಚರ್ಚೆ
    • Chandrababu Naidu meets PM Modi, seeks support for Godavari Pushkaralu 2027
    • ಬೆಳೆ ಪರಿಹಾರ, ಕುಡಿಯುವ ನೀರು, ಮೇವು ಪೂರೈಕೆಗೆ ಆದ್ಯತೆ; ಬಾಕಿ ಕೂಲಿ ₹12.73 ಕೋಟಿ ತಕ್ಷಣ ಪಾವತಿಸಲು ನಿರ್ದೇಶನ
    • Honey-trap allegations against ministers: BJP seeks FIR, official statement from CM
    • ‘ಹನಿ ಟ್ರ್ಯಾಪ್’ ಆರೋಪ: ಸತ್ಯ ಬಹಿರಂಗಪಡಿಸಾಲು ಸಿಎಂಗೆ ಬಿಜೆಪಿ ಆಗ್ರಹ
    Copyright 2026 — ANU News. All rights reserved. Blogsy WordPress Theme