Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

₹5 ಕೋಟಿ ಮೌಲ್ಯದ ನಕಲಿ ಔಷಧಿ ಮರುಪ್ಯಾಕಿಂಗ್ ಜಾಲ ಪತ್ತೆ: ಓರ್ವ ಬಂಧನ

By ANU News
August 19, 2026 1 Min Read
0

ರಾಮನಗರ: ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಬೃಹತ್ ನಕಲಿ ಔಷಧಿ ಮರುಪ್ಯಾಕಿಂಗ್ ಜಾಲವನ್ನು ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಫಾರ್ಮ್‌ಹೌಸ್‌ವೊಂದರಲ್ಲಿ ಯಾವುದೇ ಪರವಾನಗಿ ಇಲ್ಲದೆ ನಡೆಯುತ್ತಿದ್ದ ಘಟಕದ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಸುಮಾರು ₹5 ಕೋಟಿ ಮೌಲ್ಯದ ನಕಲಿ ಔಷಧಿಗಳು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಸ್ಥಳೀಯರಿಂದ ಫಾರ್ಮ್‌ಹೌಸ್‌ನ್ನು ಲೀಸ್‌ಗೆ ಪಡೆದಿದ್ದ ಪ್ರಶಾಂತ್ ಎಂಬಾತ ಕಳೆದ ಒಂದು ವರ್ಷದಿಂದ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ. ತೆಲಂಗಾಣ ಮತ್ತು ಹಿಮಾಚಲ ಪ್ರದೇಶದಿಂದ ಕಡಿಮೆ ಬೆಲೆಯ ಔಷಧಿಗಳನ್ನು ತರಿಸಿ, ಪ್ರತಿಷ್ಠಿತ ಔಷಧ ಕಂಪನಿಗಳ ಹೆಸರಿನ ಲೇಬಲ್‌ಗಳನ್ನು ಅಂಟಿಸಿ ಮರುಪ್ಯಾಕಿಂಗ್ ಮಾಡಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು ₹600 ಮೌಲ್ಯದ ಔಷಧಿಗಳಿಗೆ ₹6,000ರಿಂದ ₹8,000 ಮೌಲ್ಯದ ಔಷಧಿಗಳ ಲೇಬಲ್‌ಗಳನ್ನು ಅಂಟಿಸಿ ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ. ಕ್ಯಾನ್ಸರ್ ಚಿಕಿತ್ಸೆಗೆ ಬಳಸುವ ಔಷಧಿಗಳನ್ನೂ ಇದೇ ರೀತಿ ಮರುಪ್ಯಾಕಿಂಗ್ ಮಾಡಿ ಮಾರುಕಟ್ಟೆಗೆ ಪೂರೈಸಲಾಗುತ್ತಿತ್ತು ಎಂಬ ಆರೋಪ ಕೇಳಿಬಂದಿದೆ.

30ಕ್ಕೂ ಹೆಚ್ಚು ಅಧಿಕಾರಿಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಕಲಿ ಔಷಧಿಗಳು, ಲೇಬಲ್‌ಗಳು, ಅವಧಿ ಮೀರಿದ ಔಷಧಿಗಳು ಹಾಗೂ ಖಾಲಿ ಬಾಟಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಚೇತನ್‌ಗಾಗಿ ಶೋಧ ಮುಂದುವರಿದಿದೆ. ನಕಲಿ ಔಷಧಿಗಳನ್ನು ಎಲ್ಲೆಲ್ಲಿಗೆ ಪೂರೈಸಲಾಗುತ್ತಿತ್ತು ಮತ್ತು ಜಾಲದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ರಾಮನಗರ ಎಸ್‌ಪಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.

Author

ANU News

Follow Me
Other Articles
Previous

KPSC row: High Court orders Shivashankarappa’s reinstatement within 7 days

Next

₹5 crore fake medicine repackaging racket busted in Bengaluru South; one arrested

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Trump hints at halting Iran talks; US steps up economic pressure
    • ಇರಾನ್ ಜೊತೆಗಿನ ಮಾತುಕತೆ ಸ್ಥಗಿತಕ್ಕೆ ಟ್ರಂಪ್ ಸೂಚನೆ; ಆರ್ಥಿಕ ಒತ್ತಡ ಹೆಚ್ಚಿಸಿದ ಅಮೆರಿಕ
    • Bengaluru South fake drug racket may have nationwide links; Khader seeks high-level probe
    • ಬೆಂಗಳೂರು ದಕ್ಷಿಣದ ನಕಲಿ ಔಷಧಿ ಜಾಲಕ್ಕೆ ದೇಶವ್ಯಾಪಿ ಸಂಪರ್ಕ? ಉನ್ನತ ಮಟ್ಟದ ತನಿಖೆ ಸಾಧ್ಯತೆ
    • ₹187 crore case: BJP demands Nagendra’s resignation, rejects CID clean chit
    Copyright 2026 — ANU News. All rights reserved. Blogsy WordPress Theme