Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶ

137 ಕ್ಯಾನ್ಸರ್ ಔಷಧಿಗಳ ಬೆಲೆ ಇಳಿಕೆ ಜಾರಿ; ಅಕ್ರಮ ವಸೂಲಿಗೆ ಕ್ರಮದ ಎಚ್ಚರಿಕೆ

By ANU News
November 14, 2026 1 Min Read
Comments Off on 137 ಕ್ಯಾನ್ಸರ್ ಔಷಧಿಗಳ ಬೆಲೆ ಇಳಿಕೆ ಜಾರಿ; ಅಕ್ರಮ ವಸೂಲಿಗೆ ಕ್ರಮದ ಎಚ್ಚರಿಕೆ

ನವದೆಹಲಿ: ಕ್ಯಾನ್ಸರ್ ರೋಗಿಗಳಿಗೆ ಔಷಧಗಳ ವೆಚ್ಚ ಕಡಿಮೆ ಮಾಡುವ ಉದ್ದೇಶದಿಂದ 137 ನಿಗದಿತವಲ್ಲದ ಕ್ಯಾನ್ಸರ್ ಔಷಧಿಗಳ ವ್ಯಾಪಾರ ಮಾರ್ಜಿನ್‌ಗೆ ಶೇ.30ರ ಮಿತಿ ನಿಗದಿಪಡಿಸಲಾಗಿದೆ. ನವೆಂಬರ್ 9ರಿಂದ ಪರಿಷ್ಕೃತ ದರ ಜಾರಿಯಾಗಿದ್ದು, ಕಟ್ಟುನಿಟ್ಟಿನ ಮೇಲ್ವಿಚಾರಣೆಗೆ ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರ (NPPA) ಸೂಚಿಸಿದೆ.

ಔಷಧ ತಯಾರಕರು, ವಿತರಕರು, ಆಸ್ಪತ್ರೆಗಳು ಮತ್ತು ಚಿಲ್ಲರೆ ವ್ಯಾಪಾರಿಗಳು ಹೊಸ ಬೆಲೆ ಪಾಲಿಸುವುದು ಕಡ್ಡಾಯ. ಪರಿಷ್ಕೃತ ದರಪಟ್ಟಿಯನ್ನು ಪ್ರಮುಖವಾಗಿ ಪ್ರದರ್ಶಿಸುವಂತೆಯೂ ಸೂಚಿಸಲಾಗಿದೆ. ಹೆಚ್ಚಿನ ಬೆಲೆಗೆ ಮಾರಾಟ ಮಾಡಿದರೆ ಔಷಧ ಬೆಲೆ ನಿಯಂತ್ರಣ ಆದೇಶ-2013ರಡಿ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

ಈವರೆಗೆ 85 ಕಂಪನಿಗಳು 121 ಔಷಧಿಗಳ ಪರಿಷ್ಕೃತ ಎಂಆರ್‌ಪಿ ಪ್ರಕಟಿಸಿದ್ದು, 1,366 ಔಷಧ ಘಟಕಗಳ ಬೆಲೆ ಇಳಿಕೆಯಾಗಿದೆ. ಕೆಲವು ಔಷಧಿಗಳ ಬೆಲೆ ಗರಿಷ್ಠ ಶೇ.96.45ರಷ್ಟು ಕಡಿಮೆಯಾಗಿದೆ. ಇದರಿಂದ ರೋಗಿಗಳಿಗೆ ಸುಮಾರು ₹3,541 ಕೋಟಿ ಉಳಿತಾಯವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Author

ANU News

Follow Me
Other Articles
Previous

40 Passengers Escape as Bus Catches Fire on Yamuna Expressway

Next

Prices of 137 Cancer Drugs Cut, NPPA Warns Against Overcharging

Recent Posts

  • Karnataka: Bantwal Govt Hospital Achieves Milestone with First Hip Replacement Surgery
  • Bengaluru Property Owners Get Four Schemes from BDA on Golden Jubilee
  • ಬಿಡಿಎ 50ನೇ ವರ್ಷದ ಸಂಭ್ರಮ: ಸಾರ್ವಜನಿಕರಿಗೆ ನಾಲ್ಕು ವಿಶೇಷ ಯೋಜನೆಗಳ ಕೊಡುಗೆ
  • ಕರ್ನಾಟಕ: ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಸೊಂಟದ ಕೀಲು ಬದಲಾವಣೆ ಶಸ್ತ್ರಚಿಕಿತ್ಸೆ ಯಶಸ್ವಿ
  • ASHA Workers Reject K’taka Minister’s Assurances, Bengaluru Protest Enters Fifth Day
Copyright 2026 — ANU News. All rights reserved. Blogsy WordPress Theme