Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ವಿದೇಶ

ಹಾರ್ಮುಜ್ ಜಲಸಂಧಿಯಲ್ಲಿ ಮತ್ತೊಂದು ತೈಲ ಟ್ಯಾಂಕರ್ ಸ್ಫೋಟ: ಇರಾನ್ ಹೇಳಿಕೆ

By ANU News
October 18, 2026 1 Min Read
0

ಟೆಹ್ರಾನ್: ಆಯಕಟ್ಟಿನ ಹಾರ್ಮುಜ್ ಜಲಸಂಧಿಯಲ್ಲಿ ಎರಡನೇ ತೈಲ ಸೂಪರ್‌ಟ್ಯಾಂಕರ್‌ನಲ್ಲಿ ಸ್ಫೋಟ ಸಂಭವಿಸಿ ಭಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್‌ (IRGC) ನೌಕಾಪಡೆ ಹೇಳಿದೆ. ನೌಕಾ ಮೈನ್‌ಗೆ ಡಿಕ್ಕಿಯಾದ ಪರಿಣಾಮ ಸ್ಫೋಟ ಸಂಭವಿಸಿದೆ ಎಂದು ಇರಾನ್ ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಹಡಗಿನ ಎಂಜಿನ್ ಕೊಠಡಿಯಲ್ಲಿ ಸ್ಫೋಟ ಸಂಭವಿಸಿದೆ ಎಂದು ವರದಿಯಾಗಿದೆ. ಈ ಸೂಪರ್‌ಟ್ಯಾಂಕರ್‌ನಲ್ಲಿ 20 ಲಕ್ಷ ಬ್ಯಾರೆಲ್‌ಗೂ ಹೆಚ್ಚು ಕಚ್ಚಾ ತೈಲ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಆದರೆ ಹಡಗಿನ ಹೆಸರು, ಸಿಬ್ಬಂದಿಯ ಸ್ಥಿತಿ ಮತ್ತು ಹಾನಿಯ ಪ್ರಮಾಣದ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

ಟ್ಯಾಂಕರ್ ತನ್ನ ಜಿಪಿಎಸ್ ಮತ್ತು ರಾಡಾರ್ ವ್ಯವಸ್ಥೆಗಳನ್ನು ಸ್ಥಗಿತಗೊಳಿಸಿಕೊಂಡು ಸಾಗುತ್ತಿತ್ತು ಎಂದು ಇರಾನ್ ಆರೋಪಿಸಿದೆ. ಅನುಮತಿ ಪಡೆಯದೆ ನಿಗದಿತ ಮಾರ್ಗದ ಹೊರತಾಗಿ ಹಾರ್ಮುಜ್ ಜಲಸಂಧಿಯನ್ನು ದಾಟಲು ಯತ್ನಿಸಿದ ಸಂದರ್ಭದಲ್ಲಿ ಘಟನೆ ನಡೆದಿದೆ ಎಂದು IRGC ಹೇಳಿದೆ.

ಇದೇ ದಿನ ಮತ್ತೊಂದು ಸೂಪರ್‌ಟ್ಯಾಂಕರ್‌ನಲ್ಲಿಯೂ ಸ್ಫೋಟ ಸಂಭವಿಸಿದ್ದು, ಎರಡೂ ಹಡಗುಗಳಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಇರಾನ್ ನೌಕಾಪಡೆ ಮಾಹಿತಿ ನೀಡಿದೆ.

ಜಾಗತಿಕ ತೈಲ ಸಾಗಣೆಗೆ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿ ಮೂಲಕ ಸಂಚರಿಸುವ ಹಡಗುಗಳ ಮೇಲೆ ಇರಾನ್ ಕಟ್ಟುನಿಟ್ಟಿನ ನಿಗಾ ಇರಿಸಿದೆ. ಪರ್ಷಿಯನ್ ಕೊಲ್ಲಿ ಮತ್ತು ಹಾರ್ಮುಜ್ ಜಲಸಂಧಿಯ ಮೇಲೆ ನಿರಂತರ ನಿಯಂತ್ರಣ ಹೊಂದಿರುವುದಾಗಿ IRGC ಕಮಾಂಡರ್ ಹೇಳಿಕೊಂಡಿದ್ದಾರೆ.

Author

ANU News

Follow Me
Other Articles
Previous

Ebola Cases in Kenya Rise to Seven, Three Healthcare Workers Infected

Next

Iran Reports Another Oil Tanker Explosion in Strait of Hormuz

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • RSS Holds Vijayadashami Route Marches in Kerala, Maharashtra
    • ‘ಅರ್ಕೇಶ್ವರ ದೇವಸ್ಥಾನದಲ್ಲಿ ಚಿಹ್ನೆ ತೆರವು ಮಾತ್ರ ಸಾಲದು, ತಪ್ಪಿತಸ್ಥರ ಬಂಧನವಾಗಲಿ’: ವಿಜಯೇಂದ್ರ ಆಗ್ರಹ
    • Ayodhya Ram Temple Increases Online Darshan Passes to 2,000, Advance Booking Extended to 90 Days
    • ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ: ತನಿಖೆ ಬಗ್ಗೆ ಡಿಸಿಪಿ ಮೋಹಿತ್ ಗರ್ಗ್ ಮಾಹಿತಿ
    • ಪ್ರತಿಭಟನೆ ಕೈಬಿಡುವಂತೆ ಕಬ್ಬು ಬೆಳೆಗಾರರಿಗೆ ಡಿಕೆಶಿ ಮನವಿ; ಪ್ರಧಾನಿ ಮೋದಿ ಭೇಟಿಗೆ ಸಮಯ ಕೋರಿದ ಸಿಎಂ
    Copyright 2026 — ANU News. All rights reserved. Blogsy WordPress Theme