Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

‘ನೀವು ಆರಂಭಿಸಿದ್ದೀರಿ, ನಾನು ಮುಗಿಸುತ್ತೇನೆ’: ಪ್ರಿಯಾಂಕ್ ವಿರುದ್ಧ ಕುಮಾರಸ್ವಾಮಿ ಗುಡುಗು

By ANU News
October 30, 2026 1 Min Read
Comments Off on ‘ನೀವು ಆರಂಭಿಸಿದ್ದೀರಿ, ನಾನು ಮುಗಿಸುತ್ತೇನೆ’: ಪ್ರಿಯಾಂಕ್ ವಿರುದ್ಧ ಕುಮಾರಸ್ವಾಮಿ ಗುಡುಗು

ಬೆಂಗಳೂರು: ರಾಜ್ಯದ ಗೃಹ ಇಲಾಖೆಯ ಕಾರ್ಯವೈಖರಿಯನ್ನು ಟೀಕಿಸಿರುವ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಗೃಹ ಸಚಿವರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸರಣಿ ಆರೋಪಗಳನ್ನು ಮಾಡಿದ್ದಾರೆ.

“ಮಂಗನ ಕೈಗೆ ಮಾಣಿಕ್ಯ ಸಿಕ್ಕಿದರೆ ಏನಾಗುತ್ತದೆ? ಗೃಹ ಇಲಾಖೆಯ ದುಸ್ಥಿತಿಯೂ ಹಾಗಾಗಿದೆ. ತುಘಲಕ್ ಕೈಗೆ ಸಿಕ್ಕಿ ಪೊಲೀಸರು ಹೈರಾಣಾಗಿದ್ದಾರೆ” ಎಂದು ಅವರು ವ್ಯಂಗ್ಯವಾಡಿದ್ದಾರೆ.

ವಿಷಯಾಂತರ ಮಾಡುವುದು ಕಿಡಿಗೇಡಿಗಳ ಲಕ್ಷಣ ಎಂದು ಟೀಕಿಸಿರುವ ಕುಮಾರಸ್ವಾಮಿ, ನೇರವಾಗಿ ಹೋರಾಟ ನಡೆಸುವ ಬದಲು ಪಲಾಯನ ಏಕೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ಪ್ರಕರಣದ ದಿಕ್ಕು ತಪ್ಪಿಸಲು ಹಲವು ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ.

“ನೀವು ಏನೇನು ಮಾಡುತ್ತಿದ್ದೀರಿ? ಪ್ರಕರಣದ ದಿಕ್ಕು ತಪ್ಪಿಸಲು ಎಷ್ಟೊಂದು ಪ್ರಯತ್ನ ಮಾಡುತ್ತಿದ್ದೀರಿ? ನಿಮ್ಮ ಕುತಂತ್ರಕ್ಕೆ ಬಲಿಯಾದವರಿಗೇ ಕ್ಲೀನ್‌ಚಿಟ್ ನೀಡಲಾಗಿದೆ. ಆದರೆ, ಕ್ಲೀನ್‌ಚಿಟ್ ನಿಮ್ಮ ಪಾಪಕ್ಕೆ ಪ್ರಾಯಶ್ಚಿತ್ತವಲ್ಲ” ಎಂದು ಪೋಸ್ಟ್‌ನಲ್ಲಿ ಕಿಡಿಕಾರಿದ್ದಾರೆ.

ತನಿಖೆಯೇ ಸ್ಟಿಂಗ್ ಆಗುತ್ತಿದೆಯೇ ಎಂಬ ಅನುಮಾನ ವ್ಯಕ್ತಪಡಿಸಿರುವ ಅವರು, ತನಿಖೆಗೆ ಸಂಬಂಧಿಸಿದ ಮಾಹಿತಿ ಸೋರಿಕೆಯಾಗುತ್ತಿರುವುದನ್ನು ಉಲ್ಲೇಖಿಸಿ, ಲೀಕ್ ಆಗುತ್ತಿರುವ ಸುದ್ದಿಗಳು ತಮ್ಮ ಅನುಮಾನಕ್ಕೆ ಪುಷ್ಟಿ ನೀಡುತ್ತಿವೆ ಎಂದು ಹೇಳಿದ್ದಾರೆ.

ಪೋಸ್ಟ್‌ನ ಕೊನೆಯಲ್ಲಿ, “ನೀವು ಆರಂಭ ಮಾಡಿದ್ದೀರಿ, ನಾನು ಮುಗಿಸುತ್ತೇನೆ” ಎಂದು ಎಚ್ಚರಿಕೆಯ ಧಾಟಿಯಲ್ಲಿ ಬರೆದುಕೊಂಡಿದ್ದಾರೆ.

ಮಂಗನ ಕೈಗೆ ಮಾಣಿಕ್ಯ ಸಿಕ್ಕಿದರೆ ಏನಾಗುತ್ತದೆ? ಗೃಹ ಇಲಾಖೆ ದುಸ್ಥಿತಿ ಹಂಗಾಗಿದೆ. ತುಘಲಕ್ ಕೈಗೆ ಸಿಕ್ಕಿ ಪೊಲೀಸರು ಹೈರಾಣ ಆಗಿದ್ದಾರೆ.

ಮಿಸ್ಟರ್ ತುಘಲಕ್..
ವಿಷಯಾಂತರ ಕಿಡಿಗೇಡಿಗಳ ಲಕ್ಷಣ. ವಿಷಯ ಬಿಟ್ಟು ಮಿಕ್ಕಿದ್ದೆಲ್ಲಾ ಏಕೆ? ನೇರವಾಗಿ ಯುದ್ಧ ಮಾಡಿ. ಪಲಾಯನ ಏಕೆ? ಪಡಿಪಾಟಲು ಯಾಕೆ?

ಸುಳ್ಳುಸುದ್ದಿ ಶೂರ..
ನೀವು ಏನೇನು ಮಾಡುತ್ತಿದ್ದೀರಿ? ಪ್ರಕರಣದ ದಿಕ್ಕು ತಪ್ಪಿಸಲು ಎಷ್ಟೊಂದು ಬಸ್ಕಿ ಹೊಡೆಯುತ್ತಿದ್ದೀರಿ? ನೀವು, ನಿಮ್ಮಪ್ಪ, ನಿಮ್ಮ ಸಿಎಂ ಹೊಸೆದ ಕುತಂತ್ರಕ್ಕೆ ಬಲಿಯಾದವರಿಗೇ ಕ್ಲೀನ್ ಚಿಟ್!! ಕ್ಲೀನ್ ಚಿಟ್ ನಿಮ್ಮ ಪಾಪಕ್ಕೆ ಪ್ರಾಯಶ್ಚಿತ್ತವಲ್ಲ. ಅರೆರೆ.. ಎಂಥಾ ಐನಾತಿ ಐಡಿಯಾ? ಅತಿಜಾಣ ಗ್ರಹಣ ಮಂತ್ರಿ!!

ನನ್ನ ಅನುಮಾನ ಏನೆಂದರೆ, ನಿಮ್ಮ ತನಿಖೆಯೇ ಸ್ಟಿಂಗ್ ಆಗುತ್ತಿದೆ! ಲೀಕ್ ಆಗುತ್ತಿರುವ ಸುದ್ದಿಗಳು ಅದಕ್ಕೆ ರೇಖಿ ಹಿಡಿಯುತ್ತಿವೆ.

ರೀ ತುಘಲಕ್..
ನೀವು ಆರಂಭ ಮಾಡಿದ್ದೀರಿ, ನಾನು ಮುಗಿಸುತ್ತೇನೆ.

#KarnatakaStingSarkar
#StingSamrat
#Stingpin
#Stingprotector

@JanataDal_S

— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) October 30, 2026

Author

ANU News

Follow Me
Other Articles
Previous

Pawan Kalyan Seeks Swift Compensation for Fishermen, Weavers Hit by Cyclone Arnab

Next

Karnataka to Move SC Review Petition Over Cauvery Water Release Orders

Recent Posts

  • ಮಾತಿಗಿಂತ ಕೃತಿಯೇ ದೊಡ್ಡದು: ತಾಯಿ ಆನೆಯ ನೀತಿ ಪಾಠಕ್ಕೆ ನೆಟ್ಟಿಗರು ಫಿದಾ!
  • UP Police’s AI elephant video delivers a big lesson on honesty through a tiny banana theft
  • Black box, flight data under scanner in Joshimath helicopter crash
  • ಜೋಶಿಮಠ ಹೆಲಿಕಾಪ್ಟರ್ ದುರಂತ: 5 ಕನ್ನಡಿಗರ ಸಾವು ಪ್ರಕರಣದ ತನಿಖೆ ಆರಂಭ
  • ISRO Launches 2,250-Kg NVS-03 Satellite to Strengthen India’s NavIC System
Copyright 2026 — ANU News. All rights reserved. Blogsy WordPress Theme