Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ವಿದೇಶ

‘ಯಾವಾಗ ಬೇಕಾದರೂ ಇರಾನ್ ಸ್ಥಬ್ಧ ಆಗಬಹುದು; ಪರಮಾಣು ಅಸ್ತ್ರ ಹೊಂದಲು ಅವಕಾಶ ನೀಡಲ್ಲ ಎಂದ ಟ್ರಂಪ್

By ANU News
November 2, 2026 1 Min Read
Comments Off on ‘ಯಾವಾಗ ಬೇಕಾದರೂ ಇರಾನ್ ಸ್ಥಬ್ಧ ಆಗಬಹುದು; ಪರಮಾಣು ಅಸ್ತ್ರ ಹೊಂದಲು ಅವಕಾಶ ನೀಡಲ್ಲ ಎಂದ ಟ್ರಂಪ್

ವಾಷಿಂಗ್ಟನ್: ಇರಾನ್ ವಿರುದ್ಧ ಅಮೆರಿಕ ಮೇಲುಗೈ ಸಾಧಿಸಿದ್ದು, ಅಗತ್ಯಬಿದ್ದರೆ ಆ ದೇಶವನ್ನು ಯಾವಾಗ ಬೇಕಾದರೂ ಸಂಪೂರ್ಣವಾಗಿ ಬಂದ್ ಮಾಡಬಹುದು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.

ಕಾನ್ಸಾಸ್‌ನ ಸಲಿನಾದಲ್ಲಿ ನಡೆದ ಮಧ್ಯಂತರ ಚುನಾವಣಾ ಪ್ರಚಾರದ ಕೊನೆಯ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಇರಾನ್‌ಗೆ ಪರಮಾಣು ಅಸ್ತ್ರ ಹೊಂದಲು ಎಂದಿಗೂ ಅವಕಾಶ ನೀಡುವುದಿಲ್ಲ ಎಂದರು. ಸದ್ಯಕ್ಕೆ ಅಮೆರಿಕ ಸಂಯಮದಿಂದ ವರ್ತಿಸುತ್ತಿದೆ ಎಂದು ತಿಳಿಸಿದರು.

ಒಬಾಮಾ ಆಡಳಿತದ 2015ರ ಇರಾನ್ ಪರಮಾಣು ಒಪ್ಪಂದವನ್ನು ಟೀಕಿಸಿದ ಟ್ರಂಪ್, ಅಮೆರಿಕದಲ್ಲಿ ತೈಲ ಬೆಲೆ ಹಿಂದಿನ ಆಡಳಿತಗಳಿಗಿಂತ ಕಡಿಮೆಯಿದೆ ಎಂದು ಪ್ರತಿಪಾದಿಸಿದರು. ದಕ್ಷಿಣ ಗಡಿಯಲ್ಲಿ ಅಕ್ರಮ ವಲಸೆ ನಿಯಂತ್ರಣಕ್ಕೆ ಬಂದಿದೆ ಎಂದೂ ಹೇಳಿಕೊಂಡರು.

ಡೆಮಾಕ್ರಟಿಕ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ರಿಪಬ್ಲಿಕನ್ ಅಭ್ಯರ್ಥಿಗಳ ಪರ ಮತಯಾಚಿಸಿದರು. ಅಂಚೆ ಮತದಾನದ ಬದಲು ಮಂಗಳವಾರ ನೇರವಾಗಿ ಮತಗಟ್ಟೆಗೆ ತೆರಳಿ ಮತ ಚಲಾಯಿಸುವಂತೆ ಬೆಂಬಲಿಗರಿಗೆ ಕರೆ ನೀಡಿದರು.

Author

ANU News

Follow Me
Other Articles
Previous

Shah Rukh Khan Releases First Song ‘Tu Mil Jaye’ from ‘King’

Next

US Could ‘Shut Down’ Iran at Any Moment, Says Trump

Recent Posts

  • NCP Factional Tensions Surface After Amit Shah Meeting; Sunetra Pawar Calls Key MLA Meet
  • ಎನ್‌ಸಿಪಿಯಲ್ಲಿ ಭಿನ್ನಮತ ಸ್ಫೋಟ? ಅಮಿತ್ ಶಾ ಭೇಟಿಯ ಬೆನ್ನಲ್ಲೇ ಸುನೇತ್ರಾ ಪವಾರ್ ತುರ್ತು ಸಭೆ
  • Netanyahu Pushes Trump For Fresh Iran Strikes As Diplomatic Talks Continue
  • ಇರಾನ್‌ನ ಕೇಶ್ಮ್ ದ್ವೀಪದ ಮೇಲೆ ಅಮೆರಿಕ ವೈಮಾನಿಕ ದಾಳಿ: ಮತ್ತೆ ಯುದ್ಧದ ಆತಂಕ!
  • Andhra Coast On Alert As Cyclone Murasu Crosses Coast Near Ongole; Flooding Risk In Low-Lying Areas
Copyright 2026 — ANU News. All rights reserved. Blogsy WordPress Theme