Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ಕಳಸಾಪುರದ ಯುವಕರ ಪಡೆ; ಪಕ್ಷದ ಬಾವುಟ ನೀಡಿ ಬರಮಾಡಿಕೊಂಡ ಡಾ.ರವಿ ಸಿ.ಟಿ.

By ANU News
November 4, 2026 1 Min Read
Comments Off on ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ಕಳಸಾಪುರದ ಯುವಕರ ಪಡೆ; ಪಕ್ಷದ ಬಾವುಟ ನೀಡಿ ಬರಮಾಡಿಕೊಂಡ ಡಾ.ರವಿ ಸಿ.ಟಿ.

ಚಿಕ್ಕಮಗಳೂರು: ದೇಶಾಭಿಮಾನ, ಆತ್ಮಾಭಿಮಾನ ಹಾಗೂ ಬಿಜೆಪಿಯ ಸಿದ್ಧಾಂತ ಮತ್ತು ರಾಷ್ಟ್ರೀಯ ವಿಚಾರಧಾರೆಗಳನ್ನು ಮೆಚ್ಚಿ ಕಳಸಾಪುರದ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದರು.

ಡಾ. ರವಿ ಸಿ.ಟಿ. ಅವರ ನಿವಾಸದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿರಣ್, ದೇವರಾಜ್ ಮತ್ತು ಯತೀಶ್ ಅವರ ನೇತೃತ್ವದಲ್ಲಿ ಪವನ್, ಚಂದನ್, ಉಮೇಶ್ ಕೆ.ಎಂ., ಜೀವನ್, ಸುನಿಲ್, ಪ್ರೀತಮ್ ಸೇರಿದಂತೆ ಹತ್ತಕ್ಕೂ ಹೆಚ್ಚು ಯುವಕರು ಬಿಜೆಪಿಗೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಡಾ. ರವಿ ಸಿ.ಟಿ. ಅವರು ಪಕ್ಷದ ಬಾವುಟ ನೀಡಿ ನೂತನ ಕಾರ್ಯಕರ್ತರನ್ನು ಬರಮಾಡಿಕೊಂಡರು.

ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ, ಭ್ರಷ್ಟಾಚಾರ ಹಾಗೂ ರಾಷ್ಟ್ರೀಯ ವಿಚಾರಗಳಿಗೆ ಸಂಬಂಧಿಸಿದ ಪಕ್ಷದ ನಿಲುವುಗಳಿಂದ ಬೇಸತ್ತು ಬಿಜೆಪಿ ಸೇರುತ್ತಿರುವುದಾಗಿ ಯುವಕರು ತಿಳಿಸಿದರು. ಬಿಜೆಪಿಯ ಸಿದ್ಧಾಂತ ಮತ್ತು ದೇಶದ ಹಿತಾಸಕ್ತಿಗೆ ಆದ್ಯತೆ ನೀಡುವ ಪಕ್ಷದ ಕಾರ್ಯವೈಖರಿ ತಮ್ಮನ್ನು ಆಕರ್ಷಿಸಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ರವಿ ಸಿ.ಟಿ., ಯುವಕರು ದೇಶದ ಭವಿಷ್ಯದ ಶಕ್ತಿಯಾಗಿದ್ದಾರೆ. ರಾಷ್ಟ್ರದ ಅಭಿವೃದ್ಧಿ, ಸಂಸ್ಕೃತಿ ಮತ್ತು ರಾಷ್ಟ್ರೀಯ ವಿಚಾರಧಾರೆಗಳ ಬಗ್ಗೆ ಬದ್ಧತೆ ಹೊಂದಿರುವ ಯುವಕರನ್ನು ಪಕ್ಷಕ್ಕೆ ಸದಾ ಸ್ವಾಗತಿಸಲಾಗುವುದು ಎಂದು ತಿಳಿಸಿದರು.

Author

ANU News

Follow Me
Other Articles
Previous

Leopard to Be Trapped After Fatal Attack in Chitradurga, Minister Directs Forest Officials

Next

Kerala Panel Submits Draft Report on Labour Codes, Recommends Changes to Wage Rules

Recent Posts

  • Karnataka Sugarcane Farmers Reject ₹3,600 Price, Seek Higher State-Advised Rate
  • Belagavi Bans Liquor Sales as Sugarcane Farmers’ Protests Intensify
  • ಕಬ್ಬು ಬೆಳೆಗಾರರ ಪ್ರತಿಭಟನೆ ಹಿನ್ನೆಲೆ; ಬೆಳಗಾವಿ ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧ
  • ಕಬ್ಬಿಗೆ ₹3,600 ದರ ನಿಗದಿ ರೈತರಿಗೆ ಮಾಡಿದ ದ್ರೋಹ: ಕರ್ನಾಟಕ ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಕುರುಬೂರು ಶಾಂತಕುಮಾರ್
  • India-Origin Couple Accused of Helping Iran Bypass Oil Sanctions; US Imposes Curbs
Copyright 2026 — ANU News. All rights reserved. Blogsy WordPress Theme