Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ವಿದೇಶ

ಹಾರ್ಮುಜ್ ಜಲಸಂಧಿ ನಿರ್ಬಂಧ: ಭಾರತ ಸೇರಿ ನಾಲ್ಕು ದೇಶಗಳಿಗೆ ಇರಾನ್ ವಿನಾಯಿತಿ

By ANU News
November 5, 2026 1 Min Read
Comments Off on ಹಾರ್ಮುಜ್ ಜಲಸಂಧಿ ನಿರ್ಬಂಧ: ಭಾರತ ಸೇರಿ ನಾಲ್ಕು ದೇಶಗಳಿಗೆ ಇರಾನ್ ವಿನಾಯಿತಿ

ಟೆಹರಾನ್: ಹಾರ್ಮುಜ್ ಜಲಸಂಧಿಯ ಸಂಚಾರ ನಿರ್ಬಂಧದಿಂದ ಭಾರತ ಸೇರಿದಂತೆ ನಾಲ್ಕು ದೇಶಗಳ ವಾಣಿಜ್ಯ ಹಡಗುಗಳಿಗೆ ಇರಾನ್ ವಿನಾಯಿತಿ ನೀಡಿದೆ. ಭಾರತ, ಚೀನಾ, ಇರಾಕ್ ಮತ್ತು ಕತಾರ್ ಹಡಗುಗಳಿಗೆ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಇರಾನ್ ಸಂಸದೀಯ ಸಮಿತಿ ಉಪಾಧ್ಯಕ್ಷ ಅಮೀರ್ ಹಯಾತ್ ಮೊಗದಮ್ ತಿಳಿಸಿದ್ದಾರೆ.

ಭಾರತಕ್ಕೆ ಅಗತ್ಯ ಔಷಧ ಮತ್ತು ವೈದ್ಯಕೀಯ ಸಾಮಗ್ರಿಗಳ ಪೂರೈಕೆ ಸುಗಮಗೊಳಿಸುವುದು ಈ ನಿರ್ಧಾರದ ಉದ್ದೇಶವಾಗಿದೆ. ಚೀನಾದ ರಾಜತಾಂತ್ರಿಕ ಬೆಂಬಲ ಹಾಗೂ ನೆರೆಯ ರಾಷ್ಟ್ರಗಳೊಂದಿಗಿನ ಸಂಬಂಧ ಬಲಪಡಿಸುವ ಉದ್ದೇಶವೂ ಇದೆ ಎಂದು ಅವರು ಹೇಳಿದ್ದಾರೆ.

ಭಾರತ ಮತ್ತು ಚೀನಾದ ಹಡಗುಗಳು ಸಂಚಾರ ಶುಲ್ಕ ಪಾವತಿಸಬೇಕು. ಕತಾರ್‌ನ ಹಡಗುಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಹಡಗಿನ ಗುರುತು, ಸರಕು ಮತ್ತು ಗಮ್ಯಸ್ಥಾನದ ವಿವರ ಸಲ್ಲಿಸಿ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ಜಲಸಂಧಿಯ ಸಂಚಾರವನ್ನು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ನೌಕಾಪಡೆ ನಿಯಂತ್ರಿಸುತ್ತಿದೆ.

Author

ANU News

Follow Me
Other Articles
Previous

ಚಂಡಮಾರುತ ಪರಿಸ್ಥಿತಿ ನಿಭಾಯಿಸುವಲ್ಲಿ 45,000ಕ್ಕೂ ಹೆಚ್ಚು ಅಧಿಕಾರಿಗಳ ಸಾಥ್; ಚಂದ್ರಬಾಬು ನಾಯ್ಡು ಮೆಚ್ಚುಗೆ

Next

Iran Allows Indian Ships to Transit Strait of Hormuz Amid Restrictions

Recent Posts

  • ‘ಚುನಾವಣಾ ಆಯೋಗದ ವಿರುದ್ಧ ಅಪಪ್ರಚಾರ ಬೇಡ, SIR ಅಕ್ರಮ ಸಾಬೀತುಪಡಿಸಿ’: ಕಾಂಗ್ರೆಸ್‌ಗೆ ಡಾ.ರವಿ ಸಿ.ಟಿ. ಸವಾಲು
  • Diwali 2026: K’taka minister Ramalinga Reddy Appeals to Public to Use Only Green Crackers
  • ಪರಿಸರ ಸ್ನೇಹಿ ದೀಪಾವಳಿ ಆಚರಿಸಿ; ಹಸಿರು ಪಟಾಕಿಗಳಿಗೆ ಮಾತ್ರ ಅವಕಾಶ: ಸಚಿವ ರಾಮಲಿಂಗಾ ರೆಡ್ಡಿ ಕಿವಿಮಾತು
  • PM Modi’s Karnataka Visit on November 13: Pink Metro, Planetarium Among Key Events
  • ನವೆಂಬರ್ 13ರಂದು ಬೆಂಗಳೂರಿನ ಪಿಂಕ್ ಮೆಟ್ರೋ ಮಾರ್ಗ ಉದ್ಘಾಟಿಸಲಿರುವ ಪ್ರಧಾನಿ ಮೋದಿ
Copyright 2026 — ANU News. All rights reserved. Blogsy WordPress Theme