ದಕ್ಷಿಣ ಕೊರಿಯಾ ವಿರುದ್ಧ 8-1 ಭರ್ಜರಿ ಜಯ; ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಫೈನಲ್‌ಗೆ ಭಾರತ
ಮೊಹಾಲಿ: ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯ ಸೆಮಿಫೈನಲ್‌ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ 8-1 ಗೋಲುಗಳ ಭರ್ಜರಿ ಜಯ ಸಾಧಿಸಿದ ಭಾರತ ಫೈನಲ್‌ಗೆ ಲಗ್ಗೆ ಇಟ್ಟಿದೆ.
ಶಿಲಾನಂದ್ ಲಾಕ್ರಾ (4, 13ನೇ ನಿಮಿಷ) ಮತ್ತು ದಿಲ್ಪ್ರೀತ್ ಸಿಂಗ್ (21, 25ನೇ ನಿಮಿಷ) ತಲಾ ಎರಡು ಗೋಲು ಗಳಿಸಿದರು. ಹರ್ಮನ್‌ಪ್ರೀತ್ ಸಿಂಗ್, ಸುಖ್‌ಜೀತ್ ಸಿಂಗ್, ಅಂಗದ್ ಬೀರ್ ಸಿಂಗ್ ಹಾಗೂ ವಿವೇಕ್ ಸಾಗರ್ ಪ್ರಸಾದ್ ತಲಾ ಒಂದು ಗೋಲು ಬಾರಿಸಿದರು. ದಕ್ಷಿಣ ಕೊರಿಯಾ ಪರ ಸಾಂಗ್‌ಜುನ್ ಹಾನ್ ಏಕೈಕ ಗೋಲು ದಾಖಲಿಸಿದರು.

ಗುರುವಾರ ನಡೆಯುವ ಫೈನಲ್‌ನಲ್ಲಿ ಭಾರತ ಜಪಾನ್ ತಂಡವನ್ನು ಎದುರಿಸಲಿದೆ. ಮತ್ತೊಂದು ಸೆಮಿಫೈನಲ್‌ನಲ್ಲಿ ಜಪಾನ್ ಮಲೇಷ್ಯಾವನ್ನು ಸೋಲಿಸಿ ಫೈನಲ್ ಪ್ರವೇಶಿಸಿದೆ. ಐದನೇ ಬಾರಿ ಪ್ರಶಸ್ತಿ ಗೆದ್ದಿರುವ ಭಾರತ, ಆರನೇ ಬಾರಿ ಟ್ರೋಫಿ ಎತ್ತಿಹಿಡಿಯುವ ಗುರಿ ಹೊಂದಿದೆ.