Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ವಿದೇಶ

ಯೆಮೆನ್‌ನ ತೈಜ್ ಮಾರುಕಟ್ಟೆ ಮೇಲೆ ವೈಮಾನಿಕ ದಾಳಿ: 30 ಮಂದಿ ಸಾವು

By ANU News
November 7, 2026 1 Min Read
Comments Off on ಯೆಮೆನ್‌ನ ತೈಜ್ ಮಾರುಕಟ್ಟೆ ಮೇಲೆ ವೈಮಾನಿಕ ದಾಳಿ: 30 ಮಂದಿ ಸಾವು

ಸನಾ: ಯೆಮೆನ್‌ನ ತೈಜ್ ಪ್ರಾಂತ್ಯದ ಅಲ್-ವಾಜಿಯಾಹ್ ಪ್ರದೇಶದಲ್ಲಿರುವ ಅಲ್-ಹದಾರಾ ಮಾರುಕಟ್ಟೆ ಮೇಲೆ ನಡೆದ ವೈಮಾನಿಕ ದಾಳಿಯಲ್ಲಿ ಕನಿಷ್ಠ 30 ಮಂದಿ ಮೃತಪಟ್ಟಿದ್ದು, ಎಂಟು ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ ವ್ಯಕ್ತವಾಗಿದೆ.

ಶುಕ್ರವಾರ ಮಾರುಕಟ್ಟೆ ಮೇಲೆ ಮೂರು ವೈಮಾನಿಕ ದಾಳಿಗಳು ನಡೆದಿವೆ ಎಂದು ಹೌತಿ ಸೇನಾ ವಕ್ತಾರರು ತಿಳಿಸಿದ್ದಾರೆ. ದಾಳಿಗೆ ಸೌದಿ ಅರೇಬಿಯಾ ಹೊಣೆ ಎಂದು ಹೌತಿ ಬಂಡುಕೋರರು ಆರೋಪಿಸಿದ್ದಾರೆ. ಕಟ್ಟಡಗಳು ಮತ್ತು ವಾಹನಗಳಿಗೆ ಹಾನಿಯಾಗಿದ್ದು, ಘಟನಾ ಸ್ಥಳದಲ್ಲಿ ಅವಶೇಷಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ಯೆಮೆನ್‌ನಲ್ಲಿ ಹೌತಿ ಬಂಡುಕೋರರು ಮತ್ತು ಸರ್ಕಾರಿ ಪಡೆಗಳ ನಡುವಿನ ಸಂಘರ್ಷ ಮುಂದುವರಿದಿದೆ. ದಕ್ಷಿಣ ಯೆಮೆನ್‌ಗೆ ಸಂಪರ್ಕ ಕಲ್ಪಿಸುವ ಆಯಕಟ್ಟಿನ ಪ್ರದೇಶವಾಗಿರುವ ತೈಜ್ ನಗರದ ನಿಯಂತ್ರಣಕ್ಕಾಗಿ ಹೋರಾಟ ನಡೆಯುತ್ತಿದೆ. ಸಂಘರ್ಷದಿಂದಾಗಿ ಸ್ಥಳೀಯರು ಸಂಕಷ್ಟ ಅನುಭವಿಸುತ್ತಿದ್ದಾರೆ.

Author

ANU News

Follow Me
Other Articles
Previous

Diwali 2026: K’taka minister Ramalinga Reddy Appeals to Public to Use Only Green Crackers

Next

Yemen: 30 Killed, 8 Injured in Airstrikes on Taiz Market

Recent Posts

  • ಜಪಾನ್‌ನಲ್ಲಿ 5.7 ತೀವ್ರತೆಯ ಭೂಕಂಪ; ಹಲವು ನಗರಗಳಲ್ಲಿ ಆತಂಕ
  • India Edge New Zealand by Four Runs in Rain-Affected Match
  • ಮಳೆಯಿಂದ ಪಂದ್ಯ ಸ್ಥಗಿತ; ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 4 ರನ್‌ಗಳ ಜಯ
  • ಬಾಬ್ರಿ ಕಟ್ಟಡ ಧ್ವಂಸ ವಿಚಾರ: ರಾಮಮಂದಿರ ವಿಷಯದಲ್ಲಿ ಕಾಂಗ್ರೆಸ್ ದ್ವಂದ್ವ ನಿಲುವು ಎಂದು ಬಿಜೆಪಿ ಆರೋಪ
  • ‘White Jersey Will Always Be Special’: Shami’s Message After Test Retirement
Copyright 2026 — ANU News. All rights reserved. Blogsy WordPress Theme