ಕರ್ನಾಟಕದಲ್ಲಿ ಎಥೆನಾಲ್ ಮಿಶ್ರಣದ ಅಕ್ರಮದ ಆರೋಪಕ್ಕೆ ಪರೀಕ್ಷೆಗಳಲ್ಲಿ ಪುರಾವೆ ಇಲ್ಲ: ಇಂಡಿಯನ್ ಆಯಿಲ್
ನವದೆಹಲಿ: ಕರ್ನಾಟಕದ ಕೆಲವು ಇಂಧನ ಮಳಿಗೆಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಣ ಮಾಡಲಾಗಿದೆ ಎಂಬ ಆರೋಪಗಳನ್ನು ನಿಗದಿತ ಕಾರ್ಯವಿಧಾನದಡಿ ನಡೆಸಿದ ಪರೀಕ್ಷೆಗಳು ಬೆಂಬಲಿಸುವುದಿಲ್ಲ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ತಿಳಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಕಂಪನಿ, ಕರ್ನಾಟಕದ 56 ಮಾದರಿಗಳು ಸೇರಿದಂತೆ 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸಂಗ್ರಹಿಸಿದ ಒಟ್ಟು 893 ಇಂಧನ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಎಲ್ಲ ಮಾದರಿಗಳಲ್ಲೂ ಎಥೆನಾಲ್ ಪ್ರಮಾಣ ಶೇ.19ರಿಂದ 21ರ ನಿಗದಿತ ವ್ಯಾಪ್ತಿಯಲ್ಲಿರುವುದು ದೃಢಪಟ್ಟಿದೆ ಎಂದು ಹೇಳಿದೆ.

ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (ಎಚ್ಪಿಸಿಎಲ್) ಸಂಸ್ಥೆಗಳು ವಾಸ್ತವಾಂಶಗಳನ್ನು ಸ್ಪಷ್ಟಪಡಿಸಲು ಕರ್ನಾಟಕ ಸರ್ಕಾರದೊಂದಿಗೆ ಜಂಟಿ ಹಾಗೂ ಪಾರದರ್ಶಕ ಪರೀಕ್ಷೆ ನಡೆಸುವಂತೆ ಮನವಿ ಮಾಡಿವೆ.
ಇಂಧನದ ಗುಣಮಟ್ಟ ಮತ್ತು ಪಾರದರ್ಶಕತೆಗೆ ಬದ್ಧವಾಗಿರುವುದಾಗಿ ತಿಳಿಸಿರುವ ಇಂಡಿಯನ್ ಆಯಿಲ್, ಗ್ರಾಹಕರು ಅಧಿಕೃತ ಮೂಲಗಳಿಂದ ಪರಿಶೀಲಿಸಲಾದ ಮಾಹಿತಿಯನ್ನೇ ಅವಲಂಬಿಸುವಂತೆ ಮನವಿ ಮಾಡಿದೆ.
Recent claims of excessive ethanol blending at certain retail outlets in Karnataka are not supported by testing conducted through prescribed procedures.
All 893 samples tested across 27 States and UTs, including 56 from Karnataka, were found to be within the prescribed 19–21% ethanol range.
IndianOil, along with BPCL and HPCL, has sought joint, transparent testing with the State Government to establish the facts.
IndianOil remains steadfast in its commitment to fuel quality, transparency and customer trust.
We urge customers to rely on verified information from official sources.
#IndianOil #E20
@HardeepSPuri @PetroleumMin @Secretary_MoPNG @neerajmittalias @ChairmanIOCL @sahneyas
— Indian Oil Corp Ltd (@IndianOilcl) November 6, 2026