Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಪ್ರತಿಪಕ್ಷ ನಾಯಕನ ಮನೆಗೆ ಬ್ಲಿಂಕಿಟ್ ಮೂಲಕ ಮಾರಕಾಸ್ತ್ರ ರವಾನೆ; ವಿಜಯೇಂದ್ರ ಆಕ್ರೋಶ

By ANU News
November 8, 2026 1 Min Read
Comments Off on ಪ್ರತಿಪಕ್ಷ ನಾಯಕನ ಮನೆಗೆ ಬ್ಲಿಂಕಿಟ್ ಮೂಲಕ ಮಾರಕಾಸ್ತ್ರ ರವಾನೆ; ವಿಜಯೇಂದ್ರ ಆಕ್ರೋಶ

ಬೆಂಗಳೂರು: ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರ ಮನೆಗೆ ಆನ್‌ಲೈನ್ ವಿತರಣಾ ವೇದಿಕೆ ಬ್ಲಿಂಕಿಟ್ ಮೂಲಕ ಚಾಕು ಸೇರಿದಂತೆ ಮಾರಕಾಸ್ತ್ರಗಳನ್ನು ಕಳುಹಿಸಿ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಘಟನೆಯನ್ನು ಖಂಡಿಸಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಈ ಸಂಬಂಧ ಬಿಜೆಪಿ ಪ್ರಮುಖರ ನಿಯೋಗದೊಂದಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ ವಿಜಯೇಂದ್ರ, ದೂರು ಸಲ್ಲಿಸಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಈ ಕೃತ್ಯದ ಹಿಂದೆ ಕಾಂಗ್ರೆಸ್‌ನ ಎನ್‌ಎಸ್‌ಯುಐ ಘಟಕದ ಕೈವಾಡವಿದೆ ಎಂದು ಆರೋಪಿಸಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಬೆದರಿಕೆ ಮತ್ತು ಗೂಂಡಾಗಿರಿ ಹೆಚ್ಚುತ್ತಿದೆ ಎಂದು ಟೀಕಿಸಿದರು. ಈ ಘಟನೆಯ ಹಿಂದೆ ಮುಖ್ಯಮಂತ್ರಿ, ಗೃಹ ಸಚಿವರು ಹಾಗೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಕುಮ್ಮಕ್ಕು ಇರಬಹುದೆಂಬ ಅನುಮಾನವನ್ನೂ ವ್ಯಕ್ತಪಡಿಸಿದರು.

ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಿಗೇ ಇಂತಹ ಬೆದರಿಕೆ ಎದುರಾದರೆ ಸಾಮಾನ್ಯ ಜನರ ಸುರಕ್ಷತೆಯ ಸ್ಥಿತಿ ಏನು ಎಂದು ಪ್ರಶ್ನಿಸಿದ ವಿಜಯೇಂದ್ರ, ಪೊಲೀಸ್ ಇಲಾಖೆ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಆನ್‌ಲೈನ್ ವಿತರಣಾ ವೇದಿಕೆಗಳನ್ನು ದುರ್ಬಳಕೆ ಮಾಡಿಕೊಂಡು ಜನಪ್ರತಿನಿಧಿಗಳ ಮನೆಗಳ ಸುತ್ತ ಭಯದ ವಾತಾವರಣ ಸೃಷ್ಟಿಸುವ ಪ್ರಯತ್ನ ಪ್ರಜಾಪ್ರಭುತ್ವ ಮತ್ತು ರಾಜ್ಯದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುತ್ತದೆ ಎಂದರು.

ಈ ಸಂದರ್ಭದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಶಾಸಕರಾದ ಎಸ್.ಆರ್. ವಿಶ್ವನಾಥ್, ಎಂ. ಕೃಷ್ಣಪ್ಪ, ಕೆ. ಗೋಪಾಲಯ್ಯ, ಬೈರತಿ ಬಸವರಾಜ್, ಮುನಿರತ್ನ ಮತ್ತು ಸಿ.ಕೆ. ರಾಮಮೂರ್ತಿ ಉಪಸ್ಥಿತರಿದ್ದರು.

ಸರ್ಕಾರದ ಬೆದರಿಕೆ ಮತ್ತು ಕುತಂತ್ರಗಳಿಗೆ ಬಿಜೆಪಿ ಜಗ್ಗುವುದಿಲ್ಲ. ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಜನರ ಸುರಕ್ಷತೆಗಾಗಿ ಹೋರಾಟ ಮುಂದುವರಿಯಲಿದೆ ಎಂದು ವಿಜಯೇಂದ್ರ ತಿಳಿಸಿದ್ದಾರೆ.

Author

ANU News

Follow Me
Other Articles
Previous

ಹಾರಿಜಾನ್ ಯುರೋಪ್ ಕಾರ್ಯಕ್ರಮದ ಸಹಯೋಗಕ್ಕೆ ಭಾರತ–EU ಮಾತುಕತೆ ಪೂರ್ಣ

Next

K’taka BJP Seeks Impartial Probe Into Alleged Delivery of Weapons to Opposition Leader’s Home

Recent Posts

  • LK Advani Enters 100th Year; PM Modi Hails Veteran BJP Leader’s Political Legacy
  • ಎಲ್.ಕೆ. ಅಡ್ವಾಣಿ 100ನೇ ವರ್ಷಕ್ಕೆ ಪಾದಾರ್ಪಣೆ; ರಾಜಕೀಯ ಗುರುವಿನ ರಾಜಕೀಯ ಕೊಡುಗೆ, ರಾಷ್ಟ್ರಸೇವೆ ಮತ್ತು ಸೈದ್ಧಾಂತಿಕ ಬದ್ಧತೆ ಸ್ಮರಿಸಿದ ಪ್ರಧಾನಿ
  • ‘ರಾಶಿ’; ಆದಿತ್ಯ ಶಶಿಕುಮಾರ್, ಸಮೀಕ್ಷಾ ಮುಖ್ಯಭೂಮಿಕೆಯಲ್ಲಿ
  • ‘Rashi’ Trailer Out; Aditya Shashikumar, Samikshaa Headline Kannada Film
  • Nithiin Reveals Young Krishna Look in ‘Alias Rukmini’
Copyright 2026 — ANU News. All rights reserved. Blogsy WordPress Theme