Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಸ್ವಚ್ಛ ವಾಯು ಸರ್ವೇಕ್ಷಣ್ 2026: ಬೆಂಗಳೂರಿನ ಕೋರಮಂಗಲ ವಾರ್ಡ್‌ಗೆ ರಾಷ್ಟ್ರೀಯ ಪ್ರಶಸ್ತಿ

By ANU News
November 15, 2026 1 Min Read
Comments Off on ಸ್ವಚ್ಛ ವಾಯು ಸರ್ವೇಕ್ಷಣ್ 2026: ಬೆಂಗಳೂರಿನ ಕೋರಮಂಗಲ ವಾರ್ಡ್‌ಗೆ ರಾಷ್ಟ್ರೀಯ ಪ್ರಶಸ್ತಿ

ಬೆಂಗಳೂರು: ಭಾರತ ಸರ್ಕಾರದ ಸ್ವಚ್ಛ ವಾಯು ಸರ್ವೇಕ್ಷಣ್ 2026ರಲ್ಲಿ ಕರ್ನಾಟಕದ ಮೂರು ವಾರ್ಡ್‌ಗಳು ವಿವಿಧ ಜನಸಂಖ್ಯೆ ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿವೆ. ಬೆಂಗಳೂರಿನ ಕೋರಮಂಗಲ ವಾರ್ಡ್ ನಂ.151 ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿದೆ.

30 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆಯ ವಿಭಾಗದಲ್ಲಿ ಕೋರಮಂಗಲ ವಾರ್ಡ್ ಈ ಗೌರವ ಪಡೆದಿದ್ದು, ಸ್ವಚ್ಛ ವಾಯು ನಿರ್ವಹಣೆ, ಘನತ್ಯಾಜ್ಯ ವಿಲೇವಾರಿ, ಪರಿಸರ ಸಂರಕ್ಷಣೆ ಹಾಗೂ ನಾಗರಿಕರ ಪಾಲ್ಗೊಳ್ಳುವಿಕೆಯಲ್ಲಿ ಕೈಗೊಂಡ ಕ್ರಮಗಳನ್ನು ಗುರುತಿಸಲಾಗಿದೆ.

10 ಸಾವಿರದಿಂದ 30 ಸಾವಿರ ಜನಸಂಖ್ಯೆಯ ವಿಭಾಗದಲ್ಲಿ ದಾವಣಗೆರೆ ನಗರದ ವಾರ್ಡ್ ನಂ.36 ಹಾಗೂ 10 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆಯ ವಿಭಾಗದಲ್ಲಿ ವಾರ್ಡ್ ನಂ.07 ಪ್ರಶಸ್ತಿ ಪಡೆದಿವೆ.

ಭಾರತ ಸರ್ಕಾರದ ಸ್ವಚ್ಛ ವಾಯು ಸರ್ವೇಕ್ಷಣ್ 2026ರಲ್ಲಿ ಕರ್ನಾಟಕದ ಪ್ರಶಸ್ತಿ ವಿಜೇತ ವಾರ್ಡ್‌ಗಳು:

  • ವಿಭಾಗ-1 (30,000 ಕ್ಕಿಂತ ಹೆಚ್ಚು ಜನಸಂಖ್ಯೆ): ಬೆಂಗಳೂರು – ಕೋರಮಂಗಲ ವಾರ್ಡ್-151
  • ವಿಭಾಗ-2 (10,000 ರಿಂದ 30,000 ಜನಸಂಖ್ಯೆ): ದಾವಣಗೆರೆ – ವಾರ್ಡ್-36
  • ವಿಭಾಗ-3 (10,000 ಕ್ಕಿಂತ ಕಡಿಮೆ ಜನಸಂಖ್ಯೆ): ದಾವಣಗೆರೆ – ವಾರ್ಡ್-07

ಈ ಸಾಧನೆಗಳು ಉತ್ತಮ ವಾಯುಗುಣಮಟ್ಟ ಮತ್ತು ಆರೋಗ್ಯಕರ ನಗರ ಪರಿಸರ ನಿರ್ಮಾಣದತ್ತ ಕರ್ನಾಟಕದ ಬದ್ಧತೆಯನ್ನು ಪ್ರತಿಬಿಂಬಿಸಿವೆ. ಸ್ವಚ್ಛ ಮತ್ತು ಹಸಿರು ನಗರಗಳ ನಿರ್ಮಾಣಕ್ಕೆ ಇತರ ಸ್ಥಳೀಯ ಸಂಸ್ಥೆಗಳಿಗೂ ಪ್ರೇರಣೆಯಾಗಲಿವೆ.

ಪ್ರಶಸ್ತಿ ವಿಜೇತ ವಾರ್ಡ್‌ಗಳ ಸಾಧನೆಗೆ ಕಾರಣರಾದ ಅಧಿಕಾರಿಗಳು, ಜನಪ್ರತಿನಿಧಿಗಳು, ಪೌರಕಾರ್ಮಿಕರು ಹಾಗೂ ನಾಗರಿಕರಿಗೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಹಾಗೂ ಬಿ.ಟಿ.ಎಂ. ಕ್ಷೇತ್ರದ ಶಾಸಕ ರಾಮಲಿಂಗಾ ರೆಡ್ಡಿ ಅಭಿನಂದನೆ ಸಲ್ಲಿಸಿದ್ದಾರೆ. ಎಲ್ಲರ ಸಾಮೂಹಿಕ ಪ್ರಯತ್ನದಿಂದ ರಾಜ್ಯಕ್ಕೆ ಈ ಗೌರವ ಲಭಿಸಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

Author

ANU News

Follow Me
Other Articles
Previous

Virender Sehwag’s Son Aryaveer Slams Fifty Against Pakistan in U-19 Asia Cup Final

Next

‘ಸಿನಿ ಸಂವಾದ–2026’ ಕಾರ್ಯಾಗಾರ ಉದ್ಘಾಟನೆ; ‘ಸಿನಿಯಾನ’ ಸಿನಿಮಾ ಆರ್ಕೈವ್ ಪೋರ್ಟಲ್ ಲೋಕಾರ್ಪಣೆ

Recent Posts

  • Bengaluru’s Koramangala Ward Wins National Award in Clean Air Survey
  • ಜನರ ಸಂಕಷ್ಟಕ್ಕಿಂತ ಕಾಂಗ್ರೆಸ್ ಸರ್ಕಾರಕ್ಕೆ ಪ್ರಚಾರವೇ ಮುಖ್ಯ: ಡಾ. ಸಿ.ಟಿ. ರವಿ
  • ನವೆಂಬರ್ 17ರಿಂದ ಬೆಂಗಳೂರಿನಲ್ಲಿ ಮೊದಲ ಕಾಮನ್‌ವೆಲ್ತ್ ಮಹಿಳಾ ಸಂಸದೀಯ ಸಮ್ಮೇಳನ
  • Karnataka Mulls Annual Month-Long Sports Festival: Priyank Kharge
  • ಪ್ರತಿ ವರ್ಷ ಒಂದು ತಿಂಗಳು ಕ್ರೀಡಾ ಹಬ್ಬ ಆಯೋಜನೆಗೆ ಚಿಂತನೆ: ಪ್ರಿಯಾಂಕ್ ಖರ್ಗೆ
Copyright 2026 — ANU News. All rights reserved. Blogsy WordPress Theme