Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಕಬ್ಬಿನ ಎಫ್‌ಆರ್‌ಪಿ ದರ ಟನ್‌ಗೆ ₹4,500ಕ್ಕೆ ಏರಿಸಲು ಆಗ್ರಹ: ಕುರುಬೂರು ಶಾಂತಕುಮಾರ್

By ANU News
November 17, 2026 1 Min Read
Comments Off on ಕಬ್ಬಿನ ಎಫ್‌ಆರ್‌ಪಿ ದರ ಟನ್‌ಗೆ ₹4,500ಕ್ಕೆ ಏರಿಸಲು ಆಗ್ರಹ: ಕುರುಬೂರು ಶಾಂತಕುಮಾರ್

ಬೆಂಗಳೂರು: ಕಬ್ಬಿನ ಎಫ್‌ಆರ್‌ಪಿ ದರವನ್ನು ಪ್ರಸ್ತುತ ಇರುವುದಕ್ಕಿಂತ ಹೆಚ್ಚಿಸಿ ಟನ್‌ಗೆ ₹4,500 ನಿಗದಿಪಡಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದರು.

ಕಬ್ಬು ಬೆಳೆಗಾರರ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನ ಶೇ.10.25 ಸಕ್ಕರೆ ಇಳುವರಿಗೆ ನಿಗದಿಪಡಿಸಿರುವ ₹3,650 ಎಫ್‌ಆರ್‌ಪಿ ದರ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆಯಾಗಿದೆ ಎಂದರು. ರಾಜ್ಯದ 82 ಸಕ್ಕರೆ ಕಾರ್ಖಾನೆಗಳಿಗೆ ವರ್ಷಕ್ಕೆ ಕನಿಷ್ಠ 10 ಕೋಟಿ ಟನ್ ಕಬ್ಬು ಅಗತ್ಯವಿದ್ದರೂ, ಬರಗಾಲದಿಂದ ಈ ವರ್ಷ ರೈತರು 5 ಕೋಟಿ ಟನ್ ಮಾತ್ರ ಬೆಳೆದಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಟನ್‌ಗೆ ₹3,400ರಿಂದ ₹4,200ರವರೆಗೆ ದರ ಘೋಷಿಸಲಾಗಿದೆ ಎಂದು ತಿಳಿಸಿದರು.

ಎಫ್‌ಆರ್‌ಪಿ ದರವನ್ನು ರೈತರ ಹೊಲದಲ್ಲಿನ ದರವಾಗಿ ನಿಗದಿಪಡಿಸಬೇಕು. ಸಕ್ಕರೆ ಇಳುವರಿ ಮಾನದಂಡವನ್ನು ಶೇ.10.25ರಿಂದ ಮತ್ತೆ ಶೇ.8.5ಕ್ಕೆ ಇಳಿಸಬೇಕು. ಕಟಾವು ಮತ್ತು ಸಾಗಣೆ ವೆಚ್ಚದಲ್ಲಿ ರೈತರ ಶೋಷಣೆ ತಪ್ಪಿಸಬೇಕು ಎಂದು ಒತ್ತಾಯಿಸಿದರು. ಉಪ ಉತ್ಪನ್ನಗಳ ಲಾಭದಲ್ಲಿ ರೈತರಿಗೆ ಶೇ.70ರಷ್ಟು ಪಾಲು ನೀಡುವ ಕಾನೂನು ಜಾರಿಗೊಳಿಸಬೇಕು ಎಂದರು.

ಮಹಾರಾಷ್ಟ್ರದ ಕೃಷಿರತ್ನ ಡಾ. ಸಂಜೀವ್ ಮಾನೆ, ಹರಿಯಾಣದ ಅಭಿಮನ್ಯು ಕೋಹರ್, ಉತ್ತರ ಪ್ರದೇಶದ ರಜುವೀರ್ ಸಿಂಗ್ ಸೇರಿದಂತೆ ಹಲವು ರೈತ ಮುಖಂಡರು ಮಾತನಾಡಿದರು. ವಿಚಾರ ಸಂಕಿರಣದಲ್ಲಿ ವಿವಿಧ ಜಿಲ್ಲೆಗಳ ನೂರಕ್ಕೂ ಹೆಚ್ಚು ಪದಾಧಿಕಾರಿಗಳು ಭಾಗವಹಿಸಿದ್ದರು.

Author

ANU News

Follow Me
Other Articles
Previous

ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಎರಡನೇ ಅವಧಿಗೆ ಅವಿರೋಧ ಮರು ಆಯ್ಕೆ

Next

ಬೆಂಗಳೂರಿನ ಭಾರತಿನಗರದಲ್ಲಿ ಅತ್ಯಾಧುನಿಕ ಕ್ರೀಡಾ ಸಂಕೀರ್ಣ ಉದ್ಘಾಟನೆ

Recent Posts

  • ಬೆಂಗಳೂರಿನ ಭಾರತಿನಗರದಲ್ಲಿ ಅತ್ಯಾಧುನಿಕ ಕ್ರೀಡಾ ಸಂಕೀರ್ಣ ಉದ್ಘಾಟನೆ
  • ಕಬ್ಬಿನ ಎಫ್‌ಆರ್‌ಪಿ ದರ ಟನ್‌ಗೆ ₹4,500ಕ್ಕೆ ಏರಿಸಲು ಆಗ್ರಹ: ಕುರುಬೂರು ಶಾಂತಕುಮಾರ್
  • ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಎರಡನೇ ಅವಧಿಗೆ ಅವಿರೋಧ ಮರು ಆಯ್ಕೆ
  • Jay Shah gets second term as ICC chairman, reappointed unopposed
  • ಭದ್ರಾ ಅಚ್ಚುಕಟ್ಟು ರೈತರ ನೆರವಿಗೆ ಸರ್ಕಾರ: ಬೇಸಿಗೆ ಭತ್ತದ ಬೆಳೆಗೆ 1 ಟಿಎಂಸಿ ನೀರು ಬಿಡುಗಡೆಗೆ ಆದೇಶ
Copyright 2026 — ANU News. All rights reserved. Blogsy WordPress Theme