Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಇರಾನ್ ರಾಯಭಾರಿ ಡಾ. ಮೊಹಮ್ಮದ್ ಫತ್ಹಾಲಿ ಅವರಿಂದ ಮುಖ್ಯಮಂತ್ರಿ ಭೇಟಿ; ಹೂಡಿಕೆ, ವ್ಯಾಪಾರ ಸಹಕಾರ ಕುರಿತು ಚರ್ಚೆ

By ANU News
November 19, 2026 1 Min Read
Comments Off on ಇರಾನ್ ರಾಯಭಾರಿ ಡಾ. ಮೊಹಮ್ಮದ್ ಫತ್ಹಾಲಿ ಅವರಿಂದ ಮುಖ್ಯಮಂತ್ರಿ ಭೇಟಿ; ಹೂಡಿಕೆ, ವ್ಯಾಪಾರ ಸಹಕಾರ ಕುರಿತು ಚರ್ಚೆ

ಬೆಂಗಳೂರು: ಭಾರತದಲ್ಲಿನ ಇರಾನ್ ರಾಯಭಾರಿ ಡಾ. ಮೊಹಮ್ಮದ್ ಫತ್ಹಾಲಿ ಅವರು ಇಂದು ಕರ್ನಾಟಕದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಉಭಯ ಕಡೆಯವರ ಪರಸ್ಪರ ಆಸಕ್ತಿಯ ವಿಷಯಗಳ ಕುರಿತು ಚರ್ಚಿಸಿದರು.

ಸಭೆಯಲ್ಲಿ ಕರ್ನಾಟಕ ಮತ್ತು ಇರಾನ್ ನಡುವಿನ ದ್ವಿಪಕ್ಷೀಯ ಸಂಬಂಧ ಬಲಪಡಿಸುವುದು, ಕೈಗಾರಿಕಾ ಹೂಡಿಕೆ ಆಕರ್ಷಿಸುವುದು, ವ್ಯಾಪಾರ ಮತ್ತು ಆರ್ಥಿಕ ಸಹಕಾರ ವೃದ್ಧಿಸುವುದು ಹಾಗೂ ತಂತ್ರಜ್ಞಾನ ವಿನಿಮಯದ ಅವಕಾಶಗಳ ಕುರಿತು ಸಮಾಲೋಚನೆ ನಡೆಯಿತು.

ಕರ್ನಾಟಕದಲ್ಲಿ ಇರಾನ್‌ನ ಹೂಡಿಕೆ ಹೆಚ್ಚಿಸುವುದು, ಕೈಗಾರಿಕಾ ಸಹಭಾಗಿತ್ವಕ್ಕೆ ಉತ್ತೇಜನ ನೀಡುವುದು ಮತ್ತು ಶೈಕ್ಷಣಿಕ, ವೈಜ್ಞಾನಿಕ ಹಾಗೂ ತಾಂತ್ರಿಕ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುವ ಬಗ್ಗೆ ಒತ್ತು ನೀಡಲಾಯಿತು. ಮುಂದಿನ ದಿನಗಳಲ್ಲಿ ಪರಸ್ಪರ ಸಂಪರ್ಕ ಮತ್ತು ಸಹಭಾಗಿತ್ವ ಬಲಪಡಿಸುವ ಬಗ್ಗೆಯೂ ಚರ್ಚಿಸಲಾಯಿತು.

ಸಭೆಯಲ್ಲಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಎಸ್.ಈ. ಸುಧೀಂದ್ರ, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್, ತುಷಾರ್ ಗಿರಿನಾಥ್, ಸೆಲ್ವಕುಮಾರ್ ಎಸ್. ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಇರಾನ್ ಪ್ರತಿನಿಧಿಗಳು ಉಪಸ್ಥಿತರಿದ್ದರು.

Author

ANU News

Follow Me
Other Articles
Previous

ಜನಪರ ಹೋರಾಟದ ಮೂಲಕವೇ ನಿಜವಾದ ಜನನಾಯಕನಾಗಲು ಸಾಧ್ಯ: ಡಾ. ರವಿ ಸಿ.ಟಿ.

Next

Iranian ambassador meets Karnataka CM, explores investment and trade opportunities

Recent Posts

  • Shiv Sena protests Savarkar remarks in Sonia Gandhi’s book, tears pages
  • ಸಾವರ್ಕರ್ ಕುರಿತ ಬರಹಕ್ಕೆ ಆಕ್ಷೇಪ; ಸೋನಿಯಾ ಗಾಂಧಿ ಪುಸ್ತಕ ಹರಿದು ಶಿವಸೇನೆ ಪ್ರತಿಭಟನೆ
  • Dr. Ravi C.T. Urges BJP Workers to Take Leadership Role at Grassroots Level
  • Iranian ambassador meets Karnataka CM, explores investment and trade opportunities
  • ಇರಾನ್ ರಾಯಭಾರಿ ಡಾ. ಮೊಹಮ್ಮದ್ ಫತ್ಹಾಲಿ ಅವರಿಂದ ಮುಖ್ಯಮಂತ್ರಿ ಭೇಟಿ; ಹೂಡಿಕೆ, ವ್ಯಾಪಾರ ಸಹಕಾರ ಕುರಿತು ಚರ್ಚೆ
Copyright 2026 — ANU News. All rights reserved. Blogsy WordPress Theme