Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಬೆಳಗಾವಿ ವಿಮಾನ ನಿಲ್ದಾಣದ ಟರ್ಮಿನಲ್-2 ಕಾಮಗಾರಿ ನವೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸಲು ಸೂಚನೆ: ಜಗದೀಶ್ ಶೆಟ್ಟರ್

By ANU News
November 19, 2026 1 Min Read
Comments Off on ಬೆಳಗಾವಿ ವಿಮಾನ ನಿಲ್ದಾಣದ ಟರ್ಮಿನಲ್-2 ಕಾಮಗಾರಿ ನವೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸಲು ಸೂಚನೆ: ಜಗದೀಶ್ ಶೆಟ್ಟರ್

ಬೆಳಗಾವಿ: ಬೆಳಗಾವಿ ವಿಮಾನ ನಿಲ್ದಾಣದ ನೂತನ ಟರ್ಮಿನಲ್-2 ಕಾಮಗಾರಿಯನ್ನು ಸಂಸದ ಜಗದೀಶ್ ಶೆಟ್ಟರ್ ಇಂದು ವೀಕ್ಷಿಸಿದರು. ಬಳಿಕ ವಿಮಾನ ನಿಲ್ದಾಣ ಸಲಹಾ ಸಮಿತಿ ಸಭೆ ನಡೆಸಿ ಅಧಿಕಾರಿಗಳೊಂದಿಗೆ ಕಾಮಗಾರಿಗಳ ಪ್ರಗತಿ ಕುರಿತು ಚರ್ಚಿಸಿದರು.

ಡಿಸೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಟರ್ಮಿನಲ್ ಉದ್ಘಾಟನೆಯಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಬಾಕಿ ಕಾಮಗಾರಿಗಳನ್ನು ನವೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಬೆಳಗಾವಿ-ನವದೆಹಲಿ ವಿಮಾನ ಸಂಚಾರವನ್ನು ವಾರದ ಎಲ್ಲ ದಿನಗಳಿಗೂ ವಿಸ್ತರಿಸಲು ಹಾಗೂ ಡಿಸೆಂಬರ್ ಅಧಿವೇಶನದ ಹಿನ್ನೆಲೆಯಲ್ಲಿ ಬೆಳಗಾವಿ-ಬೆಂಗಳೂರು ನಡುವೆ ಪ್ರತಿದಿನ ಏರ್‌ಬಸ್ ಸೇವೆ ಆರಂಭಿಸಲು ನಿರ್ದೇಶನ ನೀಡಲಾಗಿದೆ ಎಂದರು.

ಅಲ್ಲದೆ, ಬೆಳಗಾವಿ ನಗರದಿಂದ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ‘ಪ್ರೀಮಿಯಂ ಬಸ್’ ಸೇವೆ ಒದಗಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

Author

ANU News

Follow Me
Other Articles
Previous

ರೈತರ ಸಂಕಷ್ಟದ ವಿಚಾರದಲ್ಲಿ ರಾಜಕೀಯ ಬೇಡ, ಕೇಂದ್ರ ಪರಿಹಾರ ನೀಡಲಿ: ಡಾ.ಜಿ.ಪರಮೇಶ್ವರ್

Recent Posts

  • ಬೆಳಗಾವಿ ವಿಮಾನ ನಿಲ್ದಾಣದ ಟರ್ಮಿನಲ್-2 ಕಾಮಗಾರಿ ನವೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸಲು ಸೂಚನೆ: ಜಗದೀಶ್ ಶೆಟ್ಟರ್
  • ರೈತರ ಸಂಕಷ್ಟದ ವಿಚಾರದಲ್ಲಿ ರಾಜಕೀಯ ಬೇಡ, ಕೇಂದ್ರ ಪರಿಹಾರ ನೀಡಲಿ: ಡಾ.ಜಿ.ಪರಮೇಶ್ವರ್
  • Karnataka DCM urges Centre to release farmers’ relief, says issue should not be politicised
  • International Cricket Stadium Planned for Tumakuru, Says Deputy CM
  • ಮಿನಿ ಕರ್ನಾಟಕ ಕ್ರೀಡಾಕೂಟ–2026: ಬೆಳ್ಳಿ ಪದಕ ಗಳಿಸಿದ ಕ್ರೀಡಾಪಟುಗಳಿಗೆ ಪರಮೇಶ್ವರ್ ಅಭಿನಂದನೆ
Copyright 2026 — ANU News. All rights reserved. Blogsy WordPress Theme