Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ನಿಗಮ-ಮಂಡಳಿ ಅಧ್ಯಕ್ಷರ ನೇಮಕ: 18 ಕಾಂಗ್ರೆಸ್ ನಾಯಕರಿಗೆ ಹುದ್ದೆ

By ANU News
November 21, 2026 2 Min Read
Comments Off on ನಿಗಮ-ಮಂಡಳಿ ಅಧ್ಯಕ್ಷರ ನೇಮಕ: 18 ಕಾಂಗ್ರೆಸ್ ನಾಯಕರಿಗೆ ಹುದ್ದೆ

ಬೆಂಗಳೂರು: ರಾಜ್ಯದ ವಿವಿಧ ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳಿಗೆ 428 ನಿರ್ದೇಶಕರು ಮತ್ತು ಸದಸ್ಯರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ, ಇದೀಗ ಪ್ರಮುಖ ನಿಗಮ-ಮಂಡಳಿಗಳ ಅಧ್ಯಕ್ಷರು ಹಾಗೂ ರಾಜಕೀಯ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ 18 ನಾಯಕರ ಪಟ್ಟಿ ಪ್ರಕಟಿಸಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರ ಅಧಿಕೃತ ಲೆಟರ್‌ಹೆಡ್‌ನಲ್ಲಿ ಪ್ರಕಟವಾಗಿರುವ ಪಟ್ಟಿಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ವಿಧಾನಸಭೆ ಮತ್ತು ವಿಧಾನಪರಿಷತ್‌ನ ಸರ್ಕಾರಿ ಮುಖ್ಯ ಸಚೇತಕರು ಸೇರಿದಂತೆ ವಿವಿಧ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ.

18 ನಾಯಕರಿಗೆ ಹುದ್ದೆಗಳ ಹಂಚಿಕೆ

  1. ತನ್ವೀರ್ ಸೇಠ್ – ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ
  2. ಬೇಲೂರು ಗೋಪಾಲಕೃಷ್ಣ – ವಿಧಾನಸಭೆ ಸರ್ಕಾರಿ ಮುಖ್ಯ ಸಚೇತಕ
  3. ಮಂಜುನಾಥ ಭಂಡಾರಿ – ವಿಧಾನಪರಿಷತ್ ಸರ್ಕಾರಿ ಮುಖ್ಯ ಸಚೇತಕ
  4. ಬಿ. ಶಿವಣ್ಣ – ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಅಧ್ಯಕ್ಷ
  5. ಕೆ. ಷಡಕ್ಷರಿ – ಕರ್ನಾಟಕ ರಾಜ್ಯ ಖನಿಜ ನಿಗಮದ ಅಧ್ಯಕ್ಷ
  6. ಪಿ.ಎಂ. ಅಶೋಕ್ – ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಅಧ್ಯಕ್ಷ
  7. ಎ.ಆರ್. ಕೃಷ್ಣಮೂರ್ತಿ – ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಅಧ್ಯಕ್ಷ
  8. ಹಂಪನಗೌಡ ಬಾದರ್ಲಿ – ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ
  9. ಡಿ.ಜಿ. ಶಾಂತನಗೌಡ – ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಸಂಸ್ಥೆ ಅಧ್ಯಕ್ಷ
  10. ಜಿ.ಎಚ್. ಶ್ರೀನಿವಾಸ್ – ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಅಧ್ಯಕ್ಷ
  11. ಮಹಾಂತೇಶ ಕೌಜಲಗಿ – ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (KRDCL) ಅಧ್ಯಕ್ಷ
  12. ಎಸ್.ಎನ್. ಸುಬ್ಬಾರೆಡ್ಡಿ – ಮೈಸೂರು ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್ (MSIL) ಅಧ್ಯಕ್ಷ
  13. ಎನ್.ಎಚ್. ಕೋನರಡ್ಡಿ – ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ
  14. ಬಸನಗೌಡ ದದ್ದಲ್ – ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (KKRDB) ಅಧ್ಯಕ್ಷ
  15. ಅಲ್ಲಮಪ್ರಭು ಪಾಟೀಲ್ – ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ (KSSIDC) ಅಧ್ಯಕ್ಷ
  16. ಶ್ಯಾಮ್ ನಾಟೇಕರ್ – ಕರ್ನಾಟಕ ಸಾಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ಅಧ್ಯಕ್ಷ
  17. ಎಚ್.ಸಿ. ಲಲಿತ್ ರಾಘವ್ – ಕರ್ನಾಟಕ ವಿದ್ಯುತ್ ಕಾರ್ಖಾನೆ (KAVIKA) ಅಧ್ಯಕ್ಷ
  18. ಸುಭಾಷ್ ರಾಠೋಡ್ – ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ

ಈ ನೇಮಕಾತಿಗಳೊಂದಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನಗಳು ಹಾಗೂ ಪ್ರಮುಖ ರಾಜಕೀಯ ಹುದ್ದೆಗಳ ಹಂಚಿಕೆ ಪ್ರಕ್ರಿಯೆ ಮತ್ತೊಂದು ಹಂತ ತಲುಪಿದೆ.

Author

ANU News

Follow Me
Other Articles
Previous

ಭಾರತ ಶೇ.7ರಷ್ಟು ಬೆಳೆಯುವಾಗ ಅಮೆರಿಕ ಏಕೆ ಸಾಧ್ಯವಿಲ್ಲ? ಫೆಡ್ ವಿರುದ್ಧ ಟ್ರಂಪ್ ವಾಗ್ದಾಳಿ

Next

ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಶಾಶ್ವತ ಪರಿಹಾರ: ಡಿಕೆಶಿ ಭರವಸೆ

Recent Posts

  • Karnataka CM Shivakumar assures permanent solution to ASHA workers’ demands, urges them to call off protest
  • ಆಶಾ ಕಾರ್ಯಕರ್ತೆಯರ ಬೇಡಿಕೆಗಳಿಗೆ ಶಾಶ್ವತ ಪರಿಹಾರ: ಡಿಕೆಶಿ ಭರವಸೆ
  • ನಿಗಮ-ಮಂಡಳಿ ಅಧ್ಯಕ್ಷರ ನೇಮಕ: 18 ಕಾಂಗ್ರೆಸ್ ನಾಯಕರಿಗೆ ಹುದ್ದೆ
  • ಭಾರತ ಶೇ.7ರಷ್ಟು ಬೆಳೆಯುವಾಗ ಅಮೆರಿಕ ಏಕೆ ಸಾಧ್ಯವಿಲ್ಲ? ಫೆಡ್ ವಿರುದ್ಧ ಟ್ರಂಪ್ ವಾಗ್ದಾಳಿ
  • 50 crore people lifted out of poverty in 12-13 years: PM Modi
Copyright 2026 — ANU News. All rights reserved. Blogsy WordPress Theme