Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಸಿನಿಮಾ

‘ಮಹಾತ್ಮೆ ಕುದ್ಮುಲ್’ ತುಳು ನಾಟಕ ಕೃತಿ ಬಿಡುಗಡೆ

By ANU News
November 22, 2026 1 Min Read
Comments Off on ‘ಮಹಾತ್ಮೆ ಕುದ್ಮುಲ್’ ತುಳು ನಾಟಕ ಕೃತಿ ಬಿಡುಗಡೆ

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿಸಿರುವ ಹಿರಿಯ ರಂಗ ನಿರ್ದೇಶಕ ಜಗನ್ ಪವಾರ್ ಬೇಕಲ್ ರಚನೆಯ ‘ಮಹಾತ್ಮೆ ಕುದ್ಮುಲ್’ ತುಳು ನಾಟಕ ಕೃತಿಯನ್ನು ಶುಕ್ರವಾರ ತುಳು ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.

ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯ ಲಕ್ಷ್ಮೀಶ ಗಬ್ಲಡ್ಕ ಕೃತಿ ಬಿಡುಗಡೆಗೊಳಿಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಬಳಿಕ, ವಿದ್ದು ಉಚ್ಚಿಲ್ ನಿರ್ದೇಶನದಲ್ಲಿ ಜರ್ನಿ ಥಿಯೇಟರ್ ಗ್ರೂಪ್ ಪ್ರಸ್ತುತಪಡಿಸಿದ ನಾಟಕದ ಪ್ರಥಮ ರಂಗಪ್ರದರ್ಶನ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ನಗರ ಅಧ್ಯಕ್ಷೆ ಎಸ್. ಅಪ್ಪಿ ಪ್ರದರ್ಶನಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ., ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ. ಕೃಷ್ಣಪ್ಪ ಕೊಂಚಾಡಿ, ಅತ್ತಾವರ ಕೋರ್ದಬ್ಬು ದೈವಸ್ಥಾನದ ಗುರಿಕಾರ ಟಿ. ಹೊನ್ನಯ್ಯ, ಬಾಬುಗುಡ್ಡೆ, ದಕ್ಷಿಣ ಕನ್ನಡ ಜಿಲ್ಲಾ ಕೊರಗ ಸಂಘದ ಅಧ್ಯಕ್ಷ ಸುಂದರ ಕೊರಗ ಬೆಳುವಾಯಿ, ಗೋವಿಂದದಾಸ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ, ನಿರ್ದೇಶಕ ವಿದ್ದು ಉಚ್ಚಿಲ್, ಅಕಾಡೆಮಿ ಸದಸ್ಯ ಉದ್ಯಾವರ ನಾಗೇಶ್ ಕುಮಾರ್ ಮತ್ತು ಪಾಂಗಾಳ ಬಾಬು ಕೊರಗ ಉಪಸ್ಥಿತರಿದ್ದರು.

ಅಕಾಡೆಮಿ ಸದಸ್ಯ ಸಂತೋಷ್ ಶೆಟ್ಟಿ ಹಿರಿಯಡ್ಕ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Author

ANU News

Follow Me
Other Articles
Previous

‘ಚಲನಚಿತ್ರಗಳು ಮನಸ್ಸುಗಳನ್ನು ತೆರೆಯುತ್ತವೆ, ಸಂವಾದಕ್ಕೆ ಪ್ರೇರೇಪಿಸುತ್ತವೆ’: IFFIಯಲ್ಲಿ ನಿರ್ಮಾಪಕಿ ಇವಾ ಪುಸ್ಜಿನ್ಸ್ಕ

Next

Fit India’s 99th Sundays on Cycle Held at 26,000 Locations

Recent Posts

  • ಫಿಟ್ ಇಂಡಿಯಾ’: ದೇಶಾದ್ಯಂತ 26 ಸಾವಿರ ಕಡೆ 99ನೇ ‘ಸಂಡೇಸ್ ಆನ್ ಸೈಕಲ್’ ಕಾರ್ಯಕ್ರಮ
  • Fit India’s 99th Sundays on Cycle Held at 26,000 Locations
  • ‘ಮಹಾತ್ಮೆ ಕುದ್ಮುಲ್’ ತುಳು ನಾಟಕ ಕೃತಿ ಬಿಡುಗಡೆ
  • ‘ಚಲನಚಿತ್ರಗಳು ಮನಸ್ಸುಗಳನ್ನು ತೆರೆಯುತ್ತವೆ, ಸಂವಾದಕ್ಕೆ ಪ್ರೇರೇಪಿಸುತ್ತವೆ’: IFFIಯಲ್ಲಿ ನಿರ್ಮಾಪಕಿ ಇವಾ ಪುಸ್ಜಿನ್ಸ್ಕ
  • ‘Films Can Open Minds and Encourage Dialogue’: Fatherland Producer at IFFI
Copyright 2026 — ANU News. All rights reserved. Blogsy WordPress Theme