Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಬಾಂಗ್ಲಾದೇಶದ ಪ್ರಜೆ ಸೇರಿ ಐವರ ವಿಚಾರಣೆ: ದಾಖಲೆ ಪರಿಶೀಲನೆ ಬಳಿಕ ಬಿಡುಗಡೆ

By ANU News
November 23, 2026 1 Min Read
Comments Off on ಬಾಂಗ್ಲಾದೇಶದ ಪ್ರಜೆ ಸೇರಿ ಐವರ ವಿಚಾರಣೆ: ದಾಖಲೆ ಪರಿಶೀಲನೆ ಬಳಿಕ ಬಿಡುಗಡೆ

ಬೆಂಗಳೂರು: ವೈಟ್‌ಫೀಲ್ಡ್ ವಿಭಾಗದ ವ್ಯಾಪ್ತಿಯಲ್ಲಿ ಅನುಮಾನಾಸ್ಪದವಾಗಿ ಕಂಡುಬಂದ ಐವರನ್ನು ವಿಚಾರಣೆ ನಡೆಸಿದಾಗ, ಅವರಲ್ಲಿ ಒಬ್ಬರು ಮಾತ್ರ ಬಾಂಗ್ಲಾದೇಶದ ಪ್ರಜೆಯಾಗಿರುವುದು ದೃಢಪಟ್ಟಿದೆ. ಅಗತ್ಯ ದಾಖಲೆಗಳ ಪರಿಶೀಲನೆ ಬಳಿಕ ಐವರನ್ನೂ ಕಾನೂನುಬದ್ಧವಾಗಿ ಬಿಡುಗಡೆ ಮಾಡಲಾಗಿದೆ ಎಂದು ವೈಟ್‌ಫೀಲ್ಡ್ ವಿಭಾಗದ ಉಪ ಪೊಲೀಸ್ ಆಯುಕ್ತ ಶ್ರೀಹರಿ ಬಾಬು ತಿಳಿಸಿದ್ದಾರೆ.

ನವೆಂಬರ್ 19, 2026ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ವರ್ತೂರು ಪೊಲೀಸ್ ಠಾಣೆಯ ಹೊಯ್ಸಳ-225 ವಾಹನಕ್ಕೆ 112 ಸಹಾಯವಾಣಿ ಮೂಲಕ ದೂರು ಸಂಖ್ಯೆ 95429 ಸ್ವೀಕೃತವಾಗಿತ್ತು. ದೂರಿನ ಮೇರೆಗೆ ಕರ್ತವ್ಯದಲ್ಲಿದ್ದ ಎಎಸ್‌ಐ ನಂಜುಂಡೇಶ್ವರ ಅವರು ಬಾಗಲೂರು ಗ್ರಾಮದ ಶೋಭಾ ಡ್ರೀಮ್ ಏಕರ್ಸ್ ಅಪಾರ್ಟ್‌ಮೆಂಟ್ ಸಮೀಪದ ಖಾಲಿ ಜಾಗದಲ್ಲಿರುವ ಕಾರ್ಮಿಕರ ಶೆಡ್‌ಗಳ ಬಳಿ ತೆರಳಿ, ಅನುಮಾನಾಸ್ಪದವಾಗಿ ಕಂಡ ಐವರನ್ನು ವಿಚಾರಣೆಗಾಗಿ ಠಾಣೆಗೆ ಕರೆತಂದಿದ್ದರು.

ವಿಚಾರಣೆ ವೇಳೆ ಮೊಹಮ್ಮದ್ ಬಾಬುಲ್ ಶೇಕ್ ಎಂಬ ವ್ಯಕ್ತಿ ಬಾಂಗ್ಲಾದೇಶದ ಪ್ರಜೆಯಾಗಿರುವುದು ತಿಳಿದುಬಂದಿದೆ. ಅವರ ಪಾಸ್‌ಪೋರ್ಟ್ ಮತ್ತು ವೀಸಾ ದಾಖಲೆಗಳನ್ನು ಪರಿಶೀಲಿಸಿ, ಸಂಬಂಧಪಟ್ಟ ಪ್ರಾಧಿಕಾರದಿಂದ ಅವುಗಳ ನೈಜತೆಯನ್ನು ದೃಢಪಡಿಸಿಕೊಂಡ ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ಶ್ರೀಹರಿ ಬಾಬು ತಿಳಿಸಿದ್ದಾರೆ.

ಉಳಿದ ನಾಲ್ವರು ಅಸ್ಸಾಂನ ಬಾರ್ಪೇಟಾ ಮತ್ತು ಮೋರಿಗಾಂವ್ ಜಿಲ್ಲೆಗಳ ನಿವಾಸಿಗಳಾಗಿದ್ದು, ಅವರ ದಾಖಲೆಗಳನ್ನು ಸಂಬಂಧಪಟ್ಟ ಸ್ಥಳೀಯ ಪೊಲೀಸ್ ಠಾಣೆಗಳಿಗೆ ಕಳುಹಿಸಿ ಪರಿಶೀಲಿಸಲಾಗಿದೆ. ಇ-ಮೇಲ್ ಮೂಲಕ ವರದಿ ಪಡೆದ ಬಳಿಕ ಅವರನ್ನೂ ಬಿಡುಗಡೆಗೊಳಿಸಲಾಗಿದೆ.

ಈ ಘಟನೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿನ ಅಂಶಗಳು ವಾಸ್ತವಾಂಶಗಳಿಗೆ ದೂರವಾಗಿವೆ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ. ಅಕ್ರಮ ವಲಸಿಗರ ಬಗ್ಗೆ ನಿರಂತರ ನಿಗಾ ಇರಿಸಿ, ಕಾನೂನುಬದ್ಧವಾಗಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದೆ.

Author

ANU News

Follow Me
Other Articles
Previous

Bangladeshi National Among Five Questioned in Whitefield, All Released

Next

ಅಶೋಕ್ ಜನಮನ–2026: ‘ರಾಜಕಾರಣವೆಂದರೆ ಜನಸಾಮಾನ್ಯರ ಬದುಕು ಕಟ್ಟಿಕೊಡುವ ಸೇವೆ’ ಎಂದ ಬಿ.ಕೆ. ಹರಿಪ್ರಸಾದ್

Recent Posts

  • ಅಶೋಕ್ ಜನಮನ–2026: ‘ರಾಜಕಾರಣವೆಂದರೆ ಜನಸಾಮಾನ್ಯರ ಬದುಕು ಕಟ್ಟಿಕೊಡುವ ಸೇವೆ’ ಎಂದ ಬಿ.ಕೆ. ಹರಿಪ್ರಸಾದ್
  • ಬಾಂಗ್ಲಾದೇಶದ ಪ್ರಜೆ ಸೇರಿ ಐವರ ವಿಚಾರಣೆ: ದಾಖಲೆ ಪರಿಶೀಲನೆ ಬಳಿಕ ಬಿಡುಗಡೆ
  • Bangladeshi National Among Five Questioned in Whitefield, All Released
  • ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಪ್ರಮೋದ್ ಮಧ್ವರಾಜ್; ವರಿಷ್ಠರಿಗೆ ಕೃತಜ್ಞತೆ
  • Karnatka ASHA Workers to Form Human Chain Around Freedom Park on Seventh Day of Protest
Copyright 2026 — ANU News. All rights reserved. Blogsy WordPress Theme