Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಚಿಕ್ಕಮಗಳೂರು: ದೇವರ ಕಾರೇಹಳ್ಳಿಯಲ್ಲಿ ಶ್ರೀ ಕಾಳಿಕಾಂಬದೇವಿ ನೂತನ ವಿಗ್ರಹ ದೃಷ್ಟಿ ಯಪೂಜೆ, ರಾಜಗೋಪುರ ಲೋಕಾರ್ಪಣೆ

By ANU News
November 23, 2026 1 Min Read
Comments Off on ಚಿಕ್ಕಮಗಳೂರು: ದೇವರ ಕಾರೇಹಳ್ಳಿಯಲ್ಲಿ ಶ್ರೀ ಕಾಳಿಕಾಂಬದೇವಿ ನೂತನ ವಿಗ್ರಹ ದೃಷ್ಟಿ ಯಪೂಜೆ, ರಾಜಗೋಪುರ ಲೋಕಾರ್ಪಣೆ

ಚಿಕ್ಕಮಗಳೂರು: “ಧರ್ಮೋ ರಕ್ಷತಿ ರಕ್ಷಿತಃ” ಎಂದರೆ ಧರ್ಮವನ್ನು ರಕ್ಷಿಸುವವರನ್ನು ಧರ್ಮವೂ ರಕ್ಷಿಸುತ್ತದೆ ಎಂದರ್ಥ. ಬಸವಣ್ಣನವರು “ದಯೆಯೇ ಧರ್ಮದ ಮೂಲವಯ್ಯ” ಎಂದು ಧರ್ಮದ ಅರ್ಥವನ್ನು ಸಾರಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ. ಹೇಳಿದರು.

ಕಡೂರು ತಾಲ್ಲೂಕಿನ ಸಖರಾಯಪಟ್ಟಣ ಹೋಬಳಿಯ ದೇವರ ಕಾರೇಹಳ್ಳಿಯಲ್ಲಿ ಶ್ರೀ ಕಾಳಿಕಾಂಬದೇವಿಯ ನೂತನ ವಿಗ್ರಹ ದೃಷ್ಟಿ ಪೂಜೆ, ರಾಜಗೋಪುರ ಲೋಕಾರ್ಪಣೆ ಹಾಗೂ ಮಹಾದ್ವಾರ ಕಳಸಾರೋಹಣ ಕುಂಭಾಭಿಷೇಕದ ಅಂಗವಾಗಿ ಆಯೋಜಿಸಿದ್ದ ಧಾರ್ಮಿಕ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಸವಣ್ಣನವರ “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ…” ಎಂಬ ವಚನದ ಆಶಯವನ್ನು ವಿವರಿಸಿದ ಅವರು, ಬೇರೆಯವರನ್ನೂ ನಮ್ಮಂತೆಯೇ ಕಂಡರೆ ಅದೇ ಕೈಲಾಸ ಎಂದರು.

ನಾವು ಇತರರಿಗೆ ಒಳಿತು ಮಾಡಿದರೆ ನಮಗೂ ಒಳಿತಾಗುತ್ತದೆ ಎಂಬುದು ಹಿರಿಯರ ನಂಬಿಕೆ. ಬೇವಿನ ಬೀಜ ಬಿತ್ತಿ ಮಾವಿನ ಹಣ್ಣು ನಿರೀಕ್ಷಿಸಲು ಸಾಧ್ಯವಿಲ್ಲ. ಒಳ್ಳೆಯ ಕಾರ್ಯ ಮಾಡಿದಾಗ ಮಾತ್ರ ಒಳ್ಳೆಯ ಫಲ ಸಿಗುತ್ತದೆ. ಆದ್ದರಿಂದ ಸಾಧ್ಯವಾದಷ್ಟೂ ಎಲ್ಲರಿಗೂ ಒಳಿತು ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

Author

ANU News

Follow Me
Other Articles
Previous

Hyderabad Police Step Up Security After LeT Threat Email

Next

Chikkamagaluru: Sri Kalikamba Devi Temple Celebrates Rajagopura Inauguration at Devara Karehalli

Recent Posts

  • Chikkamagaluru: Sri Kalikamba Devi Temple Celebrates Rajagopura Inauguration at Devara Karehalli
  • ಚಿಕ್ಕಮಗಳೂರು: ದೇವರ ಕಾರೇಹಳ್ಳಿಯಲ್ಲಿ ಶ್ರೀ ಕಾಳಿಕಾಂಬದೇವಿ ನೂತನ ವಿಗ್ರಹ ದೃಷ್ಟಿ ಯಪೂಜೆ, ರಾಜಗೋಪುರ ಲೋಕಾರ್ಪಣೆ
  • Hyderabad Police Step Up Security After LeT Threat Email
  • ಹೈದರಾಬಾದ್‌ನಲ್ಲಿ ಉಗ್ರರ ದಾಳಿ ಬೆದರಿಕೆ; ಭದ್ರತೆ ಹೆಚ್ಚಳ
  • ₹15,000 ಕನಿಷ್ಠ ಗೌರವಧನಕ್ಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಧರಣಿ: 7ನೇ ದಿನ ‘ಆಶಾ ಸರಪಳಿ’ ನಿರ್ಮಿಸಿ ವಿನೂತನ ಪ್ರತಿಭಟನೆ ಹೋರಾಟ
Copyright 2026 — ANU News. All rights reserved. Blogsy WordPress Theme