Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ವಿದೇಶ

ಲೆಬನಾನ್‌ ಮೇಲಿನ ದಾಳಿಗೆ ಬ್ರೇಕ್; ಕದನ ವಿರಾಮಕ್ಕೆ ಇಸ್ರೇಲ್ ನಿರ್ಧಾರ

By ANU News
June 21, 2026 1 Min Read
Comments Off on ಲೆಬನಾನ್‌ ಮೇಲಿನ ದಾಳಿಗೆ ಬ್ರೇಕ್; ಕದನ ವಿರಾಮಕ್ಕೆ ಇಸ್ರೇಲ್ ನಿರ್ಧಾರ

ಜೆರುಸಲೆಮ್: ಲೆಬನಾನ್‌ನಲ್ಲಿ ನಡೆಯುತ್ತಿರುವ ಗುಂಡಿನ ಚಕಮಕಿಯನ್ನು ನಿಲ್ಲಿಸುವಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಗೂ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಸೇನೆಗೆ ಸೂಚನೆ ನೀಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ ದಕ್ಷಿಣ ಲೆಬನಾನ್‌ನಲ್ಲಿನ ತನ್ನ ನಿಯಂತ್ರಣ ಪ್ರದೇಶಗಳಿಂದ ಇಸ್ರೇಲ್ ಸೇನೆ ಹಿಂದೆ ಸರಿದಿಲ್ಲ ಎನ್ನಲಾಗಿದೆ.

ಇದರ ನಡುವೆ, ಅಮೆರಿಕ ಮತ್ತು ಇಸ್ರೇಲ್ ಯುದ್ಧಾನಂತರದ ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸುತ್ತಿವೆ ಎಂದು ಆರೋಪಿಸಿರುವ ಇರಾನ್, ಹಾರ್ಮುಜ್ ಜಲಸಂಧಿಯನ್ನು ಮತ್ತೆ ಮುಚ್ಚುವುದಾಗಿ ಎಚ್ಚರಿಕೆ ನೀಡಿದೆ.

ಇರಾನ್‌ನ ಖತಮ್ ಅಲ್-ಅನ್ಬಿಯಾ ಕೇಂದ್ರ ಕಚೇರಿ, ಲೆಬನಾನ್‌ನಲ್ಲಿ ಕದನ ವಿರಾಮ ಉಲ್ಲಂಘನೆಯಾಗುತ್ತಿದೆ ಮತ್ತು ಅಮೆರಿಕ ತನ್ನ ಬದ್ಧತೆಗಳನ್ನು ಪಾಲಿಸುತ್ತಿಲ್ಲ ಎಂದು ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರಕ್ಕೆ ನಿರ್ಬಂಧ ಹೇರಲು ನಿರ್ಧರಿಸಲಾಗಿದೆ ಎಂದು ತಿಳಿಸಿದೆ.

ಜೂನ್ 18ರಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಡಿಜಿಟಲ್ ಮೂಲಕ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಅದರ ಪ್ರಕಾರ ಮಿಲಿಟರಿ ಕಾರ್ಯಾಚರಣೆಗಳನ್ನು ಅಂತ್ಯಗೊಳಿಸುವುದಾಗಿ ಒಪ್ಪಿಗೆ ನೀಡಲಾಗಿತ್ತು.

Author

ANU News

Follow Me
Other Articles
Previous

ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಆಗಸ್ಟ್ 26ಕ್ಕೆ ರಿಲೀಸ್

Next

ಹಾರ್ಮುಜ್ ಜಲಸಂಧಿ ದಾಟಿದ ಭಾರತೀಯ ತೈಲ ಟ್ಯಾಂಕರ್‌ಗಳು

Recent Posts

  • ಆಂಥೋನಿ ಚೆನ್‌ರ ‘ವೀ ಆರ್ ಆಲ್ ಸ್ಟ್ರೇಂಜರ್ಸ್’ ಚಿತ್ರದೊಂದಿಗೆ 57ನೇ IFFI ಸಮಾರೋಪ
  • ಬೊಮ್ಮನಹಳ್ಳಿ ಗಾರ್ಮೆಂಟ್ ಕಾರ್ಮಿಕರ ಹೋರಾಟದಿಂದ EPFO ಹಿಂಪಡೆಯುವಿಕೆ ನಿಯಮಗಳಲ್ಲಿ ಬದಲಾವಣೆ: ತೇಜಸ್ವಿ ಸೂರ್ಯ
  • Karnataka: Bommanahalli Garment Workers’ Grievance Triggers Major EPFO Withdrawal Reforms
  • Karnataka ASHA Workers’ Protest for ₹15,000 Honorarium Enters Fourth Day
  • ₹15 ಸಾವಿರ ಗೌರವಧನಕ್ಕೆ ಪಟ್ಟು: ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಹೋರಾಟ ಮುಂದುವರಿಕೆ
Copyright 2026 — ANU News. All rights reserved. Blogsy WordPress Theme