Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶ

ಮತ್ತೆ ಸಿಎಂ ಕುರ್ಚಿ ಚರ್ಚೆ ಜೋರು; ಸಿದ್ದು ಬೆಂಬಲಿಗ ಶಾಸಕರ ದೆಹಲಿ ಯಾತ್ರೆ?

By ANU News
April 28, 2026 1 Min Read
0

ಕೋಲಾರ: ರಾಜ್ಯ ರಾಜಕೀಯದಲ್ಲಿ ಮತ್ತೆ ಸಿಎಂ ಕುರ್ಚಿ ಚರ್ಚೆ ಜೋರಾಗಿದೆ ಎಂಬ ಆರೋಪ ಕೇಳಿಬಂದಿದೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (H. D. Kumaraswamy), ಮುಖ್ಯಮಂತ್ರಿ ಹುದ್ದೆಗಾಗಿ 40ರಿಂದ 50 ಶಾಸಕರು ದೆಹಲಿಗೆ ತೆರಳಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ರಾಜ್ಯದಲ್ಲಿ ಕುಡಿಯುವ ನೀರು ಸಮಸ್ಯೆ, ತೀವ್ರ ಬಿಸಿಲು – ಜನ ಕಷ್ಟದಲ್ಲಿದ್ದಾರೆ. ಆದರೆ ಸರ್ಕಾರಕ್ಕೆ ಇದರ ಬಗ್ಗೆ ಯಾವುದೇ ಚಿಂತನೆ ಇಲ್ಲ” ಎಂದು ಟೀಕಿಸಿದರು.

ಅಳಂದದ ಹಿರಿಯ ಶಾಸಕ ಬಿ.ಆರ್. ಪಾಟೀಲ್ (B. R. Patil) ಅವರ ಹೇಳಿಕೆಯನ್ನು ಉಲ್ಲೇಖಿಸಿದ ಕುಮಾರಸ್ವಾಮಿ, “ನೀರು ಸಮಸ್ಯೆ ಪರಿಹರಿಸಲು ಹಣವೇ ಇಲ್ಲ, ಪಿಡಿಓಗಳು ಲಭ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಇದೇ ಸರ್ಕಾರದ ಸ್ಥಿತಿ” ಎಂದು ಹೇಳಿದರು.

ಜನಪ್ರತಿನಿಧಿಗಳು ಜನರ ಸಮಸ್ಯೆಗಳ ಕಡೆ ಗಮನ ಹರಿಸುವ ಬದಲು ಅಧಿಕಾರದ ರಾಜಕಾರಣದಲ್ಲಿ ತೊಡಗಿದ್ದಾರೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

Author

ANU News

Follow Me
Other Articles
Previous

ಕೆಎಎಸ್ ಅಧಿಕಾರಿಗಳ ಬಡ್ತಿ ಶೀಘ್ರ: ಸಿಎಂ ಸಿದ್ದರಾಮಯ್ಯ ಭರವಸೆ

Next

‘40-50 MLAs planning Delhi trip for CM post’: Kumaraswamy alleges power tussle

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ದಕ್ಷಿಣ ಏಷ್ಯಾದ ಕರುಳಿನ ಸೂಕ್ಷ್ಮಜೀವಿ ವಿಶಿಷ್ಟ; ಸ್ಥಳೀಯ ಜೀವನಶೈಲಿಗೆ ತಕ್ಕ ಚಿಕಿತ್ಸೆ ಅಗತ್ಯ
    • Parishrama Adalat in Hyderabad Resolves 65 MSE Payment Disputes Worth ₹8.29 Crore
    • No cause for panic: Government monitors seasonal influenza trends
    • South Asian gut microbiome found to be unique; study points to need for tailored lifestyle disease treatment
    • ಎಬಿವಿಪಿ ಕಾರ್ಯಕರ್ತರ ಮೇಲಿನ ದೌರ್ಜನ್ಯ ಬಗ್ಗೆ ನ್ಯಾಯಾಂಗ ತನಿಖೆಗೆ ಸಿ.ಟಿ.ರವಿ ಆಗ್ರಹ
    Copyright 2026 — ANU News. All rights reserved. Blogsy WordPress Theme