Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಕ್ರೀಡೆ

ಒಂದೂ ಪಂದ್ಯವನ್ನೂ ಗೆಲ್ಲಲಾಗದ ಟೀಂ ಇಂಡಿಯಾ; ಇಂಗ್ಲೆಂಡ್ ವಿರುದ್ಧ ಸರಣಿ ಸೋಲು

By ANU News
July 12, 2026 1 Min Read
Comments Off on ಒಂದೂ ಪಂದ್ಯವನ್ನೂ ಗೆಲ್ಲಲಾಗದ ಟೀಂ ಇಂಡಿಯಾ; ಇಂಗ್ಲೆಂಡ್ ವಿರುದ್ಧ ಸರಣಿ ಸೋಲು

ಲಂಡನ್: ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡವು ಇಂಗ್ಲೆಂಡ್ ವಿರುದ್ಧ 4-0 ಅಂತರದಿಂದ ಹೀನಾಯ ಸೋಲು ಅನುಭವಿಸಿದೆ. ಕೊನೆಯ ಪಂದ್ಯದಲ್ಲಿ 56 ರನ್‌ಗಳಿಂದ ಸೋತ ಭಾರತ, ಸರಣಿಯಲ್ಲಿ ಒಂದೂ ಪಂದ್ಯ ಗೆಲ್ಲದೆ ನಿರಾಸೆಯ ಪ್ರದರ್ಶನ ನೀಡಿತು.

ಅಂತಿಮ ಟಿ20ಯಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 257 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. 258 ರನ್‌ಗಳ ಗುರಿ ಬೆನ್ನಟ್ಟಿದ ಭಾರತ 201 ರನ್‌ಗಳಿಗೆ ಸೀಮಿತವಾಗಿ 56 ರನ್‌ಗಳ ಸೋಲು ಕಂಡಿತು.

ಈ ಸರಣಿಯಲ್ಲಿ ಭಾರತ ಒಂದೂ ಗೆಲುವು ದಾಖಲಿಸದ ಹಿನ್ನೆಲೆಯಲ್ಲಿ ನಾಯಕ ಶ್ರೇಯಸ್ ಅಯ್ಯರ್‌ಗೆ ಬೇಡದ ದಾಖಲೆ ಸೇರಿದೆ. ಇಂಗ್ಲೆಂಡ್ ವಿರುದ್ಧದ ನಾಲ್ಕು ಸೋಲುಗಳ ಜೊತೆಗೆ, ಇದಕ್ಕೂ ಮುನ್ನ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ ಟಿ20 ಸರಣಿಯಲ್ಲೂ ಭಾರತ ಸೋತಿದ್ದರಿಂದ, ಅಯ್ಯರ್ ನಾಯಕತ್ವದಲ್ಲಿ ತಂಡ ಸತತ ಆರು ಟಿ20 ಪಂದ್ಯಗಳಲ್ಲಿ ಸೋಲು ಅನುಭವಿಸಿದಂತಾಗಿದೆ.

ಸರಣಿಯುದ್ದಕ್ಕೂ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾದ ಭಾರತ, ನಿರಾಸೆಯೊಂದಿಗೆ ಪ್ರವಾಸ ಮುಗಿಸಿದೆ. ಇತ್ತ ಇಂಗ್ಲೆಂಡ್ ಎಲ್ಲ ವಿಭಾಗಗಳಲ್ಲೂ ಮೇಲುಗೈ ಸಾಧಿಸಿ ಸರಣಿಯನ್ನು 4-0 ಅಂತರದಲ್ಲಿ ತನ್ನದಾಗಿಸಿಕೊಂಡಿದೆ.

Author

ANU News

Follow Me
Other Articles
Previous

Indian music world is a great talent.. S. Janaki, who sang more than 48 thousand songs in more than 20 languages

Next

England Whitewash India 4-0 in T20 Series; Tour Ends Without a Single Victory

Recent Posts

  • SAFF Championship: Young India Squad to Begin Title Defence Against Pakistan
  • ನವೆಂಬರ್ 5ರಿಂದ ಢಾಕಾದಲ್ಲಿ ಸಾಫ್ ಚಾಂಪಿಯನ್‌ಶಿಪ್‌ ಟೂರ್ನಿ; ಸತತ 10ನೇ ಪ್ರಶಸ್ತಿಯ ಮೇಲೆ ಹಾಲಿ ಚಾಂಪಿಯನ್ ಕಣ್ಣು
  • Global Energy, Food Supply Disruptions Require Unified G20 Action: Marco Rubio
  • ಜಾಗತಿಕ ಇಂಧನ, ಆಹಾರ ಪೂರೈಕೆಗೆ ಬಿಕ್ಕಟ್ಟು; ಒಗ್ಗಟ್ಟಿನ ಕ್ರಮ ಕೈಗೊಳ್ಳಲು ಜಿ20 ರಾಷ್ಟ್ರಗಳಿಗೆ ಕರೆ
  • Military Action Cannot Resolve Global Conflicts, Diplomacy Must Be Given Space: Jaishankar at G20
Copyright 2026 — ANU News. All rights reserved. Blogsy WordPress Theme