Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಬಡವರ ಹೆಸರಲ್ಲಿ ನಕಲಿ ಖಾತೆ ತೆರೆದು ಅಕ್ರಮ ವ್ಯವಹಾರ; ಸಿಬಿಐ, ಇ.ಡಿ ತನಿಖೆಗೆ ಸಿ.ಟಿ.ರವಿ ಆಗ್ರಹ

By ANU News
July 15, 2026 1 Min Read
0

ಬೆಂಗಳೂರು: ಚಿಕ್ಕಮಗಳೂರು, ಶಿವಮೊಗ್ಗ, ಹುಬ್ಬಳ್ಳಿಯಲ್ಲಿ ಬಡಜನರ ಹೆಸರಲ್ಲಿ ನಕಲಿ ಖಾತೆಗಳನ್ನು ತೆರೆದು ಅಕ್ರಮವಾಗಿ ಹಣ ವರ್ಗಾವಣೆ ಮಾಡಿ ವಂಚಿಸಿರುವ ಪ್ರಕರಣವನ್ನು ಸಿಬಿಐ ಹಾಗೂ ಇ.ಡಿ ತನಿಖೆಗೆ ವಹಿಸಲು ಗೌರವಾನ್ವಿತ ರಾಜ್ಯಪಾಲರಿಗೆ ಮನವಿ ಮಾಡಿದ್ದೇವೆ ಎಂದು ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಹೇಳಿದ್ದಾರೆ.

ಮಾನ್ಯ ರಾಜ್ಯಪಾಲರಿಗೆ ಇಂದು ಮನವಿ ಸಲ್ಲಿಸಿದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಡಜನರ ಆಧಾರ್ ಕಾರ್ಡ್ ಪಡೆದು ಅವರ ಹೆಸರಲ್ಲಿ ಹೊಸ ಸಿಮ್ ಖರೀದಿಸಿ, ಜನರಿಗೆ ಯಾವುದೇ ದಾಖಲೆ ನೀಡದೆ ಬ್ಯಾಂಕ್ ಅಧಿಕಾರಿಗಳ ಜೊತೆ ಶಾಮೀಲಾಗಿ ಅವರ ಹೆಸರಲ್ಲಿ ಕೋಟ್ಯಂತರ ರೂ. ವ್ಯವಹಾರ ಮಾಡಿದ್ದರ ಬಗ್ಗೆ ದೂರುಗಳು ಹುಬ್ಬಳ್ಳಿ, ಶಿವಮೊಗ್ಗದಲ್ಲಿ ದಾಖಲಾಗಿವೆ. ̇ರೂ. 87 ಕೋಟಿ ವಹಿವಾಟು ನಡೆದಿರುವುದು ದೃಢಪಡಿಸಲಾಗಿದೆ ಎಂದರು.

ಈ ಪ್ರಕರಣದಲ್ಲಿ ಮೂವರ ಬಂಧನವಾಗಿದೆ. ಚಿಕ್ಕಮಗಳೂರಿನಲ್ಲಿ ಪೌರ ಕಾರ್ಮಿಕರು, ಹಮಾಲರು, ಪೇಂಟರ್‍ಗಳು ಹಾಗೂ ಕೂಲಿಯಾಳುಗಳ ಹೆಸರಲ್ಲಿ ಖಾತೆ ತೆರೆದು ಅವರಿಗೆ ತಿಳಿಯದಂತೆ ಲಕ್ಷಾಂತರ ರೂ. ವ್ಯವಹಾರ ಮಾಡಿದ್ದಾರೆ. ಆ ಹಣದ ಮೂಲ ಯಾವುದು ಎಂಬುದು ಪತ್ತೆಯಾಗಬೇಕು. ಇದು ತೆರಿಗೆ ವಂಚನೆ, ಆನ್‍ಲೈನ್ ಬೆಟ್ಟಿಂಗ್ ಹಾಗೂ ಡಿಜಿಟಲ್ ಅರೆಸ್ಟ್ ಮೂಲಕ ಖಾತೆಯಿಂದ ಅಕ್ರಮವಾಗಿ ವರ್ಗಾವಣೆ ಮಾಡಿದ ಹಣ ಎನ್ನಲಾಗಿದೆ ಎಂದು ವಿವರಿಸಿದರು.

ಈ ಅಕ್ರಮದ ಕಿಂಗ್‍ಪಿನ್‍ಗಳು ದುಬೈನಲ್ಲಿ ಕುಳಿತು ಎಲ್ಲವನ್ನೂ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಇದನ್ನು ಮುಚ್ಚಿ ಹಾಕುವ ಷಡ್ಯಂತ್ರ ಇದೆ. ಈ ವ್ಯವಹಾರ ಅಂತರ ರಾಜ್ಯ, ಅಂತರ ಜಿಲ್ಲೆ ಹಾಗೂ ಅಂತರರಾಷ್ಟ್ರಕ್ಕೆ ಸೇರಿದೆ. ಈ ಪ್ರಕರಣ ಸಂಬಂಧ ತೆಲಂಗಾಣ ಮತ್ತು ಛತ್ತೀಸಗಡದಲ್ಲಿ ಪ್ರಕರಣ ದಾಖಲಾಗಿದೆ. ಬಹರೇನ್‍ನಿಂದ ದೂರು ದಾಖಲಾಗಿದೆ. ಆದ್ದರಿಂದ ಇದನ್ನು ಜಾರಿ ನಿರ್ದೇಶನಾಲಯ (ಇಡಿ) ಹಾಗೂ ಸಿಬಿಐ ಮೂಲಕ ತನಿಖೆ ಮಾಡಬೇಕು. ಇದರ ಹಿಂದಿರುವ ಕಿಂಗ್ ಪಿನ್ ಅವರ ಬಂಧನವಾಗಬೇಕು ಎಂದು ಆಗ್ರಹಿಸಿರುವುದಾಗಿ ತಿಳಿಸಿದರು.

Author

ANU News

Follow Me
Other Articles
Previous

ದೇಶೀಯ ಯೂರಿಯಾ ಉತ್ಪಾದನೆ ಹೆಚ್ಚಿಸಲು NIPU-2026ಗೆ ಕೇಂದ್ರ ಸಂಪುಟ ಅನುಮೋದನೆ

Next

ಏಳು ತಿಂಗಳ ಹೋರಾಟದ ಬಳಿಕ, ಜುಲೈ 23ಕ್ಕೆ ‘ಜನ ನಾಯಗನ್’ ರಿಲೀಸ್

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಗೌರಿ-ಗಣೇಶ ಹಬ್ಬಕ್ಕೆ ಕೆಎಸ್‌ಆರ್‌ಟಿಸಿಯ ಭರ್ಜರಿ ಸಿದ್ಧತೆ; ಬೆಂಗಳೂರಿನಿಂದ 2,400 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ
    • Gowri-Ganesha festival: KSRTC to operate 2,400 extra buses from Bengaluru
    • Mekedatu project: Karnataka steps up land process, officials told to fast-track work
    • ಮೇಕೆದಾಟು ಯೋಜನೆ ತ್ವರಿತ ಜಾರಿಗೆ ಕಸರತ್ತು; ಅಧಿಕಾರಿಗಳಿಗೆ ಸಚಿವರ ಖಡಕ್ ಸೂಚನೆ
    • Karnataka steps up crackdown on PoP Ganesh idols; 872 seized across 9 districts
    Copyright 2026 — ANU News. All rights reserved. Blogsy WordPress Theme