Skip to content
ANU News
ANU News
  • Home
  • Home
ANU News
ANU News
  • Home
  • Home
ಪ್ರಾದೇಶಿಕ

ಆಗಸ್ಟ್‌ 8ರೊಳಗೆ ಎಸ್‌ಐಆರ್‌ ಫಾರ್ಮ್ ಸಲ್ಲಿಸಿ: ಮತದಾರರಿಗೆ ಚುನಾವಣಾ ಆಯೋಗ ಮನವಿ

By ANU News
July 23, 2026 1 Min Read
0

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಅಂತಿಮ ಹಂತ ತಲುಪಿದ್ದು, ಆಗಸ್ಟ್‌ 8ರೊಳಗೆ ಎಸ್‌ಐಆರ್‌ ಫಾರ್ಮ್‌ಗಳನ್ನು ಕಡ್ಡಾಯವಾಗಿ ಸಲ್ಲಿಸುವಂತೆ ರಾಜ್ಯ ಚುನಾವಣಾ ಆಯೋಗ ಮತದಾರರಿಗೆ ಮನವಿ ಮಾಡಿದೆ.

ರಾಜ್ಯಾದ್ಯಂತ ವಿತರಿಸಲಾದ 5.53 ಕೋಟಿ ಫಾರ್ಮ್‌ಗಳಲ್ಲಿ ಇದುವರೆಗೆ 3.67 ಕೋಟಿ (ಶೇ.66.35) ಫಾರ್ಮ್‌ಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. 1.56 ಕೋಟಿ ಮತದಾರರ ಸ್ವಯಂ ಮ್ಯಾಪಿಂಗ್ ಹಾಗೂ 1.93 ಕೋಟಿ ಮತದಾರರ ವಂಶಾವಳಿ ಮ್ಯಾಪಿಂಗ್ ಪೂರ್ಣಗೊಂಡಿದೆ. ಆದರೆ, 17.19 ಲಕ್ಷ ಫಾರ್ಮ್‌ಗಳು ಮ್ಯಾಪಿಂಗ್ ಮಾಹಿತಿಯಿಲ್ಲದೆ ಸಲ್ಲಿಕೆಯಾಗಿವೆ.

ಮ್ಯಾಪಿಂಗ್ ವಿವರಗಳು ಇಲ್ಲದಿದ್ದರೂ ಫಾರ್ಮ್‌ಗಳನ್ನು ಆಗಸ್ಟ್‌ 8ರೊಳಗೆ ಬಿಎಲ್‌ಒಗಳಿಗೆ ಸಲ್ಲಿಸಬೇಕು. ಕುಟುಂಬದ ಯಾವುದೇ ವಯಸ್ಕ ಸದಸ್ಯರು ಫಾರ್ಮ್ ಸಲ್ಲಿಸಬಹುದಾಗಿದೆ. ಈ ಅವಧಿಯಲ್ಲಿ ಸಲ್ಲಿಕೆಯಾದ ಎಲ್ಲ ಅರ್ಜಿದಾರರ ಹೆಸರುಗಳನ್ನು ಆಗಸ್ಟ್‌ 17ರಂದು ಪ್ರಕಟವಾಗಲಿರುವ ಕರಡು ಮತದಾರರ ಪಟ್ಟಿಯಲ್ಲಿ ಸೇರಿಸಲಾಗುವುದು ಎಂದು ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದ್ದಾರೆ.

ರಾಜ್ಯದಲ್ಲಿ ಎಎಸ್‌ಡಿಡಿಒ (ಗೈರುಹಾಜರಿ, ಸ್ಥಳಾಂತರ, ಮೃತಪಟ್ಟವರು, ನಕಲಿ ಹಾಗೂ ಇತರೆ) ವಿಭಾಗದಲ್ಲಿ 44.84 ಲಕ್ಷ ಮತದಾರರನ್ನು ಗುರುತಿಸಲಾಗಿದೆ. ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯಲ್ಲೇ 23.86 ಲಕ್ಷ ಪ್ರಕರಣಗಳು ದಾಖಲಾಗಿದ್ದು, ಇಲ್ಲಿ ಡಿಜಿಟಲೀಕರಣ ಪ್ರಕ್ರಿಯೆ ಕೇವಲ ಶೇ.30ರಷ್ಟೇ ಪೂರ್ಣಗೊಂಡಿದೆ.

Author

ANU News

Follow Me
Other Articles
Previous

Congress will stand with Rahul Gandhi to protect democracy, says Padmaraj Poojary

Next

EC Urges Voters in Karnataka to Submit SIR Forms by August 8

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ನೀಟ್ ವಿವಾದ: ಹೋರಾಟಕ್ಕೆ ರಾಜಕೀಯ ಬಣ್ಣ ಬೇಡ ಎಂದ ನಟ ಸಲ್ಮಾನ್ ಖಾನ್
    • Salman Khan Backs Students’ Peaceful Protest Against NEET Paper Leak
    • PM Modi Announces Fast-Track Courts for Exam Paper Leak Cases
    • ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಪ್ರಧಾನಿ ಮೋದಿ ಘೋಷಣೆ
    • EC Urges Voters in Karnataka to Submit SIR Forms by August 8
    Copyright 2026 — ANU News. All rights reserved. Blogsy WordPress Theme