Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ವಿದೇಶ

ಅಮೆರಿಕದಲ್ಲಿ ಜನನ ಪ್ರವಾಸೋದ್ಯಮಕ್ಕೆ ಕಡಿವಾಣ; 600ಕ್ಕೂ ಹೆಚ್ಚು ವೀಸಾ ರದ್ದು

By ANU News
August 13, 2026 1 Min Read
0

ವಾಷಿಂಗ್ಟನ್: ಅಮೆರಿಕದಲ್ಲಿ ಹೆರಿಗೆಗಾಗಿ ಪ್ರಯಾಣಿಸುವ ‘ಜನನ ಪ್ರವಾಸೋದ್ಯಮ’ಕ್ಕೆ ಕಡಿವಾಣ ಹಾಕುವ ಹೊಸ ಕ್ರಮದ ಭಾಗವಾಗಿ 600ಕ್ಕೂ ಹೆಚ್ಚು ವಿದೇಶಿ ಪ್ರಜೆಗಳ ವೀಸಾಗಳನ್ನು ರದ್ದುಗೊಳಿಸಲಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಬುಧವಾರ ತಿಳಿಸಿದೆ.

ಜನನ ಪ್ರವಾಸೋದ್ಯಮದ ಮೂಲಕ ಅಮೆರಿಕಕ್ಕೆ ಆಗಮಿಸುವವರು ಹಾಗೂ ಇಂತಹ ಪ್ರಯಾಣಗಳಿಗೆ ನೆರವು ನೀಡುವವರನ್ನು ಪತ್ತೆಹಚ್ಚಲು ವಿಶೇಷ ಕಾರ್ಯಪಡೆಯನ್ನು ರಚಿಸಲಾಗಿದೆ. ವೀಸಾ ಹೊಂದಿರುವವರ ಪ್ರಯಾಣ ದಾಖಲೆಗಳು ಸೇರಿದಂತೆ ಗೃಹ ಭದ್ರತಾ ಇಲಾಖೆ ಮತ್ತು ಇತರ ಫೆಡರಲ್ ಸಂಸ್ಥೆಗಳಿಂದ ಲಭ್ಯವಾಗುವ ಮಾಹಿತಿಯನ್ನು ಕಾರ್ಯಪಡೆ ಪರಿಶೀಲಿಸುತ್ತಿದೆ.

ಜನನ ಪ್ರವಾಸೋದ್ಯಮದ ಹೆಸರಿನಲ್ಲಿ ಕಾರ್ಯನಿರ್ವಹಿಸುವ ಜಾಲಗಳನ್ನು ಪತ್ತೆಹಚ್ಚುವುದು, ವೀಸಾಗಳನ್ನು ರದ್ದುಪಡಿಸುವುದು ಮತ್ತು ಇಂತಹ ಪ್ರಯಾಣದಿಂದ ಲಾಭ ಪಡೆಯುವ ಮಧ್ಯವರ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಕಾರ್ಯಪಡೆಯ ಪ್ರಮುಖ ಉದ್ದೇಶವಾಗಿದೆ ಎಂದು ಇಲಾಖೆ ತಿಳಿಸಿದೆ.

ಟ್ರಂಪ್ ಆದೇಶದ ಬೆನ್ನಲ್ಲೇ ಕ್ರಮ

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಸ್ಟ್ 6ರಂದು ಹೊರಡಿಸಿದ ಕಾರ್ಯಕಾರಿ ಆದೇಶದ ಬಳಿಕ ಈ ಕ್ರಮ ವೇಗ ಪಡೆದುಕೊಂಡಿದೆ. ಅಮೆರಿಕದಲ್ಲಿ ಮಗುವಿಗೆ ಜನ್ಮ ನೀಡುವುದನ್ನೇ ಪ್ರಮುಖ ಉದ್ದೇಶವನ್ನಾಗಿ ಮಾಡಿಕೊಂಡು ವಲಸೆಯೇತರ ವೀಸಾದಲ್ಲಿ ದೇಶಕ್ಕೆ ಪ್ರಯಾಣಿಸುವುದನ್ನು ‘ಜನನ ಪ್ರವಾಸೋದ್ಯಮ’ ಎಂದು ಆದೇಶದಲ್ಲಿ ವ್ಯಾಖ್ಯಾನಿಸಲಾಗಿದೆ.

ಇಂತಹ ಉದ್ದೇಶವನ್ನು ಹೊಂದಿರುವವರ ವೀಸಾ ನಿರಾಕರಿಸುವುದು ಅಥವಾ ರದ್ದುಪಡಿಸುವುದು ಹಾಗೂ ದೇಶ ಪ್ರವೇಶವನ್ನು ತಡೆಯಲು ಅಧಿಕಾರಿಗಳಿಗೆ ಅವಕಾಶ ನೀಡಲಾಗಿದೆ. ಕೆಲವು ಸಂಸ್ಥೆಗಳು ವೀಸಾ ಸಲಹೆ, ಆಸ್ಪತ್ರೆ ವ್ಯವಸ್ಥೆ ಮತ್ತು ಇತರ ಸೇವೆಗಳನ್ನು ಪ್ಯಾಕೇಜ್ ರೂಪದಲ್ಲಿ ನೀಡುತ್ತಿವೆ ಎಂದು ವಿದೇಶಾಂಗ ಇಲಾಖೆ ಆರೋಪಿಸಿದೆ.

ಹೊಸ ವಲಸೆ ನಿಯಮದ ವಿರುದ್ಧ ಡೆಮೋಕ್ರಾಟ್‌ಗಳ ಹೋರಾಟ

ಇದೇ ವೇಳೆ, ಟ್ರಂಪ್ ಆಡಳಿತದ ಪ್ರತ್ಯೇಕ ‘ಪಬ್ಲಿಕ್ ಚಾರ್ಜ್’ ವಲಸೆ ನಿಯಮವನ್ನು ಜಾರಿಗೆ ತರಲು ಫೆಡರಲ್ ನಿಧಿ ಬಳಸದಂತೆ ತಡೆಯುವ ಮಸೂದೆಯನ್ನು ಡೆಮೋಕ್ರಾಟ್ ಶಾಸಕರು ಪರಿಚಯಿಸಿದ್ದಾರೆ.

ಸೆನೆಟರ್‌ಗಳಾದ ಮೈಕೆಲ್ ಬೆನೆಟ್ ಮತ್ತು ಮಾಜಿ ಹಿರೊನೊ ಹಾಗೂ ಕಾಂಗ್ರೆಸ್ ಸದಸ್ಯೆ ಜೂಡಿ ಚು ಪರಿಚಯಿಸಿರುವ ‘Protect American Values Act’ ಸೆಪ್ಟೆಂಬರ್ 18ರಿಂದ ಜಾರಿಗೆ ಬರಲಿರುವ ನಿಯಮವನ್ನು ಗುರಿಯಾಗಿಸಿಕೊಂಡಿದೆ. ಈ ನಿಯಮವು ಕೆಲವು ಸರ್ಕಾರಿ ಸೌಲಭ್ಯಗಳನ್ನು ಪಡೆಯುವ ವಲಸಿಗರಿಗೆ ಗ್ರೀನ್ ಕಾರ್ಡ್ ಪಡೆಯುವುದನ್ನು ಕಷ್ಟಕರವಾಗಿಸಬಹುದು ಎಂದು ಡೆಮೋಕ್ರಾಟ್‌ಗಳು ಆರೋಪಿಸಿದ್ದಾರೆ.

Author

ANU News

Follow Me
Other Articles
Previous

US cancels 600 visas over birth tourism as Democrats move to block new immigration rule

Next

India, Southern Africa move closer to trade deal; negotiations to cover 8 key areas

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • SC Stays Madras HC Order Scrapping TN Govt Jobs for Karur Stampede Victims’ Kin
    • ಕರೂರ್ ಕಾಲ್ತುಳಿತ: ಮೃತರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗ; ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ
    • 17 Karnataka Police Personnel Receive President’s Police Medals on Independence Day
    • ಸ್ವಾತಂತ್ರ್ಯ ದಿನಾಚರಣೆ: ಕರ್ನಾಟಕದ 17 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ರಾಷ್ಟ್ರಪತಿ ಪದಕ
    • ಶ್ರಾವಣ ಸಂಭ್ರಮ; ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಕುಂಭಾಭಿಷೇಕ
    Copyright 2026 — ANU News. All rights reserved. Blogsy WordPress Theme