Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಸೋನಿಯಾ ಗಾಂಧಿ ವಿರುದ್ಧ ಕುಮಾರಸ್ವಾಮಿ ಹೇಳಿಕೆ ಖಂಡಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಪ್ರತಿಭಟನೆ

By ANU News
August 19, 2026 1 Min Read
0

ಬೆಂಗಳೂರು: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಕುರಿತು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ನೀಡಿರುವ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಎಸ್. ಮನೋಹರ್, ರಾಜಕೀಯ ಭಿನ್ನಾಭಿಪ್ರಾಯಗಳನ್ನು ರಾಜಕೀಯವಾಗಿಯೇ ಟೀಕಿಸಬೇಕು. ಆದರೆ ಮಹಿಳೆಯೊಬ್ಬರ ವೈಯಕ್ತಿಕ ಹಿನ್ನೆಲೆ, ಕುಟುಂಬ ಹಾಗೂ ಮೂಲವನ್ನು ಪ್ರಶ್ನಿಸುವ ರೀತಿಯಲ್ಲಿ ಮಾತನಾಡುವುದು ಕೀಳುಮಟ್ಟದ ರಾಜಕೀಯ ಎಂದು ಟೀಕಿಸಿದರು.

ಸೋನಿಯಾ ಗಾಂಧಿ ಅವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪತ್ನಿ ಮಾತ್ರವಲ್ಲದೆ, ದಶಕಗಳ ಕಾಲ ದೇಶದ ಸಾರ್ವಜನಿಕ ಜೀವನದಲ್ಲಿ ಸೇವೆ ಸಲ್ಲಿಸಿರುವ ಹಿರಿಯ ನಾಯಕಿಯಾಗಿದ್ದಾರೆ. ಅವರ ವಿರುದ್ಧ ವೈಯಕ್ತಿಕ ದಾಳಿ ನಡೆಸಿರುವುದು ಖಂಡನೀಯ ಎಂದು ಹೇಳಿದರು.

ಕುಮಾರಸ್ವಾಮಿ ಅವರು ಈ ಹಿಂದೆ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಿದ್ದರೂ, ಇದೀಗ ಅದೇ ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ. ತಮ್ಮ ರಾಜಕೀಯ ನಿಲುವಿನ ಬದಲಾವಣೆಗೆ ಮೊದಲು ಜನರಿಗೆ ಸ್ಪಷ್ಟನೆ ನೀಡಲಿ ಎಂದು ಮನೋಹರ್ ತಿರುಗೇಟು ನೀಡಿದರು.

ಪ್ರತಿಭಟನಾಕಾರರು “ಸೋನಿಯಾ ಗಾಂಧಿ ವಿರುದ್ಧದ ಹೇಳಿಕೆ ಹಿಂಪಡೆಯಿರಿ”, “ಕುಮಾರಸ್ವಾಮಿ ಕ್ಷಮೆಯಾಚಿಸಬೇಕು” ಹಾಗೂ “ಮಹಿಳೆಯರ ಗೌರವ ಕಾಪಾಡಿ” ಎಂಬ ಘೋಷಣೆಗಳನ್ನು ಕೂಗಿದರು.

ಕುಮಾರಸ್ವಾಮಿ ಅವರು ಹೇಳಿಕೆಯನ್ನು ಕೂಡಲೇ ಹಿಂಪಡೆದು ಸೋನಿಯಾ ಗಾಂಧಿ ಅವರಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಹೋರಾಟ ಮುಂದುವರಿಸಲಾಗುವುದು ಎಂದು ಮನೋಹರ್ ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಎ. ಆನಂದ್, ಪ್ರಕಾಶ್, ಆದಿತ್ಯ, ರಾಮಕೃಷ್ಣ, ಹೇಮರಾಜ್, ಮುರಳಿ, ಪುಟ್ಟರಾಜು, ಲಕ್ಷ್ಮಿನಾರಾಯಣ್, ಉಮೇಶ್, ರಂಜಿತ್, ಪ್ರವೀಣ್ ರಾವ್, ಕಿಶೋರ್, ಓಬಳೇಶ್, ನವೀನ್ ಸಾಯಿ, ಪವನ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Author

ANU News

Follow Me
Other Articles
Previous

PM CARES ನಿಧಿ ಬಳಕೆ ಬಗ್ಗೆ ಪ್ರಿಯಾಂಕ್ ಖರ್ಗೆ ಪ್ರಶ್ನೆ

Next

ಕೋಲ್ಕತ್ತಾ ಹೋಟೆಲ್‌ ಅಗ್ನಿ ಅವಘಡದಲ್ಲಿ 9 ಮಂದಿ ಸಾವು, ಪ್ರಧಾನಿ ಮೋದಿ ಸಂತಾಪ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಸಿಜೆಐ ಭೇಟಿಗೆ ಪ್ರತ್ಯೇಕ ಸಮಯ ಕೇಳಿದ್ದೇಕೆ? ಕಾಂಗ್ರೆಸ್‌ಗೆ ಕುಮಾರಸ್ವಾಮಿ ಪ್ರಶ್ನೆ
    • ಏಷ್ಯನ್ ಗೇಮ್ಸ್‌ನಲ್ಲಿ ಸೇನಾ ಕ್ರೀಡಾಪಟುಗಳ 20 ಪದಕಗಳ ಸಾಧನೆಗೆ ಸೇನಾ ಮುಖ್ಯಸ್ಥರ ಮೆಚ್ಚುಗೆ
    • Chandrababu Naidu Reviews Departmental Performance, Calls for Faster Grievance Redressal
    • Congress a threat to constitutional institutions, alleges BJP’s Sudhanshu Trivedi
    • Why seek separate meeting with CJI? Kumaraswamy questions Congress leaders
    Copyright 2026 — ANU News. All rights reserved. Blogsy WordPress Theme