Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಸಾಮಾಜಿಕ ಭದ್ರತಾ ಪಿಂಚಣಿ: ಆದಾಯ ಮಿತಿ ₹1.20 ಲಕ್ಷಕ್ಕೆ ಹೆಚ್ಚಳ

By ANU News
August 20, 2026 1 Min Read
0

ಬೆಂಗಳೂರು: ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಸಿಹಿಸುದ್ದಿ ನೀಡಿರುವ ಸರ್ಕಾರ, ವಾರ್ಷಿಕ ಆದಾಯ ಮಿತಿಯನ್ನು ₹32,000ದಿಂದ ₹1.20 ಲಕ್ಷಕ್ಕೆ ಹೆಚ್ಚಿಸಿದೆ. ಈ ಪರಿಷ್ಕೃತ ಮಿತಿಯೊಳಗೆ ಬರುವ ಅರ್ಹ ಫಲಾನುಭವಿಗಳ ಪಿಂಚಣಿಯನ್ನು ಮುಂದುವರಿಸುವಂತೆ ಆದೇಶ ಹೊರಡಿಸಲಾಗಿದೆ ಎಂದು ಕಂದಾಯ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ.

ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲರ ವೇತನ ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಿಗೆ ಈವರೆಗೆ ₹32,000 ವಾರ್ಷಿಕ ಆದಾಯ ಮಿತಿ ನಿಗದಿಯಾಗಿತ್ತು. ಇದರಿಂದ ಹಲವು ವರ್ಷಗಳಿಂದ ಲಕ್ಷಾಂತರ ಮಂದಿ ಪಿಂಚಣಿ ಸೌಲಭ್ಯದಿಂದ ವಂಚಿತರಾಗಿದ್ದರು. ಇದೀಗ ಆದಾಯ ಮಿತಿಯನ್ನು ₹1.20 ಲಕ್ಷಕ್ಕೆ ಹೆಚ್ಚಿಸುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

18.06 ಲಕ್ಷ ಪಿಂಚಣಿಗಳು ತಾತ್ಕಾಲಿಕ ಸ್ಥಗಿತ

ಕುಟುಂಬ ದತ್ತಾಂಶ ಹಾಗೂ ಪಿಂಚಣಿ ಫಲಾನುಭವಿಗಳ ಮಾಹಿತಿಯನ್ನು ಸಂಯೋಜಿಸಿದಾಗ 23,14,544 ಫಲಾನುಭವಿಗಳು ಸಂದೇಹಾಸ್ಪದ ಎಂದು ಗುರುತಿಸಲಾಗಿತ್ತು. ಇವರ ಭೌತಿಕ ಪರಿಶೀಲನೆಗಾಗಿ ‘ಸಂಯೋಜನೆ’ ಮೊಬೈಲ್‌ ಆ್ಯಪ್ ಮೂಲಕ ಪರಿಶೀಲನೆ ನಡೆಸಲಾಯಿತು.

ಈ ವೇಳೆ ಅಗತ್ಯ ದಾಖಲೆ ಸಲ್ಲಿಸದ, ನೀಡಿದ್ದ ವಿಳಾಸದಲ್ಲಿ ವಾಸವಿಲ್ಲದ ಹಾಗೂ ಆದಾಯ ಪ್ರಮಾಣಪತ್ರ ನೀಡದ 18,06,032 ಮಂದಿಯ ಪಿಂಚಣಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಪರಿಶೀಲನೆಯ ಬಳಿಕ ₹32,000ಕ್ಕಿಂತ ಹೆಚ್ಚು ಹಾಗೂ ₹1.20 ಲಕ್ಷದೊಳಗಿನ ವಾರ್ಷಿಕ ಆದಾಯ ಹೊಂದಿರುವ ಅರ್ಹ ಫಲಾನುಭವಿಗಳ ಪಿಂಚಣಿಯನ್ನು ಮುಂದುವರಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವರು ತಿಳಿಸಿದ್ದಾರೆ.

Author

ANU News

Follow Me
Other Articles
Previous

Central Africa gold mine collapse: 100 feared dead, rescue operations underway

Next

Social Security Pension income limit raised to ₹1.20 lakh in Karnataka

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಸಿಜೆಐ ಭೇಟಿಗೆ ಪ್ರತ್ಯೇಕ ಸಮಯ ಕೇಳಿದ್ದೇಕೆ? ಕಾಂಗ್ರೆಸ್‌ಗೆ ಕುಮಾರಸ್ವಾಮಿ ಪ್ರಶ್ನೆ
    • ಏಷ್ಯನ್ ಗೇಮ್ಸ್‌ನಲ್ಲಿ ಸೇನಾ ಕ್ರೀಡಾಪಟುಗಳ 20 ಪದಕಗಳ ಸಾಧನೆಗೆ ಸೇನಾ ಮುಖ್ಯಸ್ಥರ ಮೆಚ್ಚುಗೆ
    • Chandrababu Naidu Reviews Departmental Performance, Calls for Faster Grievance Redressal
    • Congress a threat to constitutional institutions, alleges BJP’s Sudhanshu Trivedi
    • Why seek separate meeting with CJI? Kumaraswamy questions Congress leaders
    Copyright 2026 — ANU News. All rights reserved. Blogsy WordPress Theme