Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
Regional

ಪಾಕ್ ಹೈಕಮಿಷನ್ ಹೊರಗಿನ ಅತಿಕ್ರಮಣ ತೆರವು: ದೆಹಲಿಯಲ್ಲಿ ಭಾರತದ ಕಠಿಣ ಕ್ರಮ

By Anu News
August 20, 2026 1 Min Read
0

ನವದೆಹಲಿ, ಆಗಸ್ಟ್ 20: ನವದೆಹಲಿಯ ಚಾಣಕ್ಯಪುರಿ ರಾಜತಾಂತ್ರಿಕ ವಲಯದಲ್ಲಿರುವ ಪಾಕಿಸ್ತಾನ ಹೈಕಮಿಷನ್ ಕಚೇರಿ ಹೊರಭಾಗದಲ್ಲಿ ಅನುಮೋದಿತ ಗಡಿ ವ್ಯಾಪ್ತಿಯನ್ನು ಮೀರಿ ನಿರ್ಮಿಸಲಾಗಿದ್ದ ಅನಧಿಕೃತ ರಚನೆಗಳ ವಿರುದ್ಧ ಭಾರತೀಯ ಅಧಿಕಾರಿಗಳು ಗುರುವಾರ ಕಾರ್ಯಾಚರಣೆ ನಡೆಸಿದ್ದಾರೆ.

ಬುಲ್ಡೋಜರ್ ಮೂಲಕ ನಡೆದ ಕಾರ್ಯಾಚರಣೆಯಲ್ಲಿ ಹೈಕಮಿಷನ್‌ನ ವೀಸಾ ವಿಭಾಗದ ಹೊರಭಾಗದಲ್ಲಿದ್ದ ಟ್ರಾಫಿಕ್ ಬೊಲ್ಲಾರ್ಡ್‌ಗಳು, ಭದ್ರತಾ ಬ್ಯಾರಿಕೇಡ್‌ಗಳು, ಲೋಹದ ಬೇಲಿಗಳು, ಕ್ಯೂ ಮ್ಯಾನೇಜ್‌ಮೆಂಟ್ ವ್ಯವಸ್ಥೆಗಳು ಹಾಗೂ ಕಾಂಕ್ರೀಟ್ ರಚನೆಗಳನ್ನು ತೆರವುಗೊಳಿಸಲಾಯಿತು.

ಅಧಿಕಾರಿಗಳ ಪ್ರಕಾರ, ಅನುಮೋದಿತ ಗಡಿ ವ್ಯಾಪ್ತಿಯನ್ನು ಮೀರಿ ಈ ರಚನೆಗಳನ್ನು ನಿರ್ಮಿಸಲಾಗಿತ್ತು. ಕಾರ್ಯಾಚರಣೆ ಬಳಿಕ ಸರ್ವಿಸ್ ರಸ್ತೆಯಲ್ಲಿ ಸಿಮೆಂಟ್ ಹಾಗೂ ಕಬ್ಬಿಣದ ಅವಶೇಷಗಳು ಕಂಡುಬಂದವು. ವೀಸಾ ಅರ್ಜಿ ಸ್ವೀಕರಿಸುವ ಕಿಟಕಿಗಳ ಸಮೀಪದ ಕೆಲವು ತಾತ್ಕಾಲಿಕ ಶೀಟ್‌ಗಳು ಮತ್ತು ಗೋಡೆಗಳಿಗೂ ಹಾನಿಯಾಗಿದೆ.

ಆದರೆ, ಪಾಕಿಸ್ತಾನ ಹೈಕಮಿಷನ್‌ನ ಮುಖ್ಯ ಕಟ್ಟಡ, ಅದರ ಹೊರಗೋಡೆಗಳು ಹಾಗೂ ರಾಷ್ಟ್ರೀಯ ಲಾಂಛನವಿರುವ ಮುಖ್ಯ ಪ್ರವೇಶ ದ್ವಾರಕ್ಕೆ ಯಾವುದೇ ಹಾನಿ ಮಾಡಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕ್ರಮವು ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿ ಹೊರಭಾಗದಲ್ಲಿ ಪಾಕಿಸ್ತಾನಿ ಅಧಿಕಾರಿಗಳು ಭದ್ರತಾ ಬ್ಯಾರಿಕೇಡ್‌ಗಳು ಮತ್ತು ಪಾರ್ಕಿಂಗ್ ಕಂಬಗಳನ್ನು ತೆರವುಗೊಳಿಸಿದ ಮೂರು ದಿನಗಳ ಬಳಿಕ ನಡೆದಿದೆ.

ಭಾರತೀಯ ಹೈಕಮಿಷನ್ ಕಚೇರಿ ಹೊರಭಾಗದಲ್ಲಿ ಪಾಕಿಸ್ತಾನಿ ಅಧಿಕಾರಿಗಳ ಕ್ರಮಕ್ಕೆಭಾರತೀಯ ರಾಜತಾಂತ್ರಿಕರು ವಿರೋಧ ವ್ಯಕ್ತಪಡಿಸಿದ್ದರೂ ಪಾಕಿಸ್ತಾನ ಅದನ್ನು ನಿರ್ಲಕ್ಷಿಸಿತ್ತು. ಇದೀಗ ದೆಹಲಿಯಲ್ಲಿ ನಡೆದ ಕಾರ್ಯಾಚರಣೆಯು ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಉದ್ವಿಗ್ನತೆಯ ನಡುವೆ ಮಹತ್ವ ಪಡೆದುಕೊಂಡಿದೆ.

ಇತ್ತೀಚೆಗೆ ಶ್ರೀನಗರಕ್ಕೆ ಭೇಟಿ ನೀಡಿದ್ದ ಭಾರತದಲ್ಲಿನ ಅಮೆರಿಕ ರಾಯಭಾರಿ ಸೆರ್ಗಿಯೊ ಗೋರ್ ಅವರು ಕಾಶ್ಮೀರ ಭಾರತದ ಭಾಗ ಎಂಬ ಹೇಳಿಕೆ ನೀಡಿದ್ದರು. ಇದಕ್ಕೆ ಪಾಕಿಸ್ತಾನ ತೀವ್ರ ವಿರೋಧ ವ್ಯಕ್ತಪಡಿಸಿ ಅಮೆರಿಕ ರಾಯಭಾರಿಗೆ ಸಮನ್ಸ್ ನೀಡಿತ್ತು. ಈ ಬೆಳವಣಿಗೆಗಳ ಬೆನ್ನಲ್ಲೇ ಭಾರತ-ಪಾಕಿಸ್ತಾನ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ.

Author

Anu News

Follow Me
Other Articles
Previous

ರಾಜೀವ್ ಗಾಂಧಿ ಜನ್ಮದಿನ: ಪ್ರಧಾನಿ ಮೋದಿ ಗೌರವ ನಮನ

Next

Delhi clears structures outside Pak High Commission in tit-for-tat move

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಇಂದಿರಾ ಗಾಂಧಿ ಹೆಸರಿನ ಪಿಂಚಣಿ ಯೋಜನೆಗಳಿಗೆ ಮರುನಾಮಕರಣ!
    • Centre Renames Indira Gandhi Pension Schemes, Approves Rs 53,428 Crore for Five Years
    • Imran Khan Asked to Leave India by October 28 After Mumbai Protest: Reports
    • ಭಾರತ ತೊರೆಯುವಂತೆ ನಟ ಇಮ್ರಾನ್ ಖಾನ್‌ಗೆ ನೋಟಿಸ್‌!
    • 19-year-old arrested over alleged plot to attack Hindu temple near Chicago
    Copyright 2026 — ANU News. All rights reserved. Blogsy WordPress Theme