Skip to content
ANU News
ANU News
  • Home
  • Home
ANU News
ANU News
  • Home
  • Home
ದೇಶರಾಜಕೀಯ

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಅಂತಿಮ ಫಲಿತಾಂಶ ಹೀಗಿದೆ

By ANU News
May 5, 2026 2 Min Read
0

ನವದೆಹಲಿ: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದೆ. ಅಸ್ಸಾಮ್ ಪುದುಚೆರಿಯಲ್ಲಿ ಬಿಜೆಪಿ ನೇತೃತ್ವದ NDA ಮಿತ್ರಕೂಟ ಅಧಿಕಾರವನ್ನು ಉಳಿಸಿಕೊಂಡಿದೆ. ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ UDF ಜಯಭೇರಿ ಭಾರಿಸಿದ್ದು, ತಮಿಳುನಾಡಿನಲ್ಲಿ ನೇತೃತ್ವದ ಹೊಸ ಪಕ್ಷ TVK ವಿಜಯ ಪತಾಕೆ ಹಾರಿಸಿದೆ. ಆದರೆ, ತಮಿಳುನಾಡಿನಲ್ಲಿ ಸರ್ಕಾರ ರಚಿಸಲು TVK ಯು ಇತರ ಪಕ್ಷಗಳ ಬೆಂಬಲ ಪಡೆಯುವ ಅನಿವಾರ್ಯತೆ ನಿರ್ಮಾಣವಾಗಿದೆ.

ಪಶ್ಚಿಮ ಬಂಗಾಳ:

ಬಂಗಾಳದ ರಣಕಣದಲ್ಲಿ ಮೋದಿ-ಶಾ ಜೋಡಿಯ ತಂತ್ರಗಾರಿಕೆಗೆ ಮಮತಾ ಬ್ಯಾನರ್ಜಿ ಸೋತು ಸುಣ್ಣವಾಗಿದ್ದಾರೆ. ಒಟ್ಟು 293 ಸ್ಥಾನಗಳಲ್ಲಿ ಬಿಜೆಪಿ 206 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ದ್ವಿಶತಕ ಬಾರಿಸಿದೆ. ಆಡಳಿತಾರೂಢ ಟಿಎಂಸಿ ಕೇವಲ 81 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳುವ ಮೂಲಕ ಅಧಿಕಾರ ಕಳೆದುಕೊಂಡಿದೆ.

  • ಒಟ್ಟು ಸ್ಥಾನಗಳು: 293
  • ಬಿಜೆಪಿ: 206 ಸ್ಥಾನಗಳು (ಸ್ಪಷ್ಟ ಬಹುಮತ)
  • ಟಿಎಂಸಿ: 81 ಸ್ಥಾನಗಳು
  • ಕಾಂಗ್ರೆಸ್: 02 ಸ್ಥಾನಗಳು
  • ಇತರೆ: 03 ಸ್ಥಾನಗಳು

ತಮಿಳುನಾಡು:

ತಮಿಳುನಾಡಿನಲ್ಲಿ ಹೊಸ ಬೆಳವಣಿಗೆ ನಡೆದಿದೆ. ಅಚ್ಚರಿಯ ಫಲಿತಾಂಶದಲ್ಲಿ ದ್ರಾವಿಡ ನಾಡಿನಲ್ಲಿ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪ್ರಾಬಲ್ಯ ಮೆರೆದಿದೆ. 234 ಕ್ಷೇತ್ರಗಳ ತಮಿಳುನಾಡಿನಲ್ಲಿ ಸರ್ಕಾರ ರಚಿಸಲು 118 ಸ್ಥಾನಗಳ ಅಗತ್ಯವಿದೆ. ಈ ಪೈಕಿ ಟಿವಿಕೆ 107 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಸರ್ಕಾರ ರಚನೆಯಾಗಬೇಕಾದರೆ TVKಗೆ ಇತರರ ಬೆಂಬಲ ಅಗತ್ಯವಿದೆ.

  • ಒಟ್ಟು ಸ್ಥಾನಗಳು: 234
  • ಟಿವಿಕೆ (ವಿಜಯ್): 107 ಸ್ಥಾನಗಳು
  • ಡಿಎಂಕೆ: 59 ಸ್ಥಾನಗಳು
  • AIADMK: 47 ಸ್ಥಾನಗಳು
  • ಕಾಂಗ್ರೆಸ್: 05 ಸ್ಥಾನಗಳು
  • PMK : 04 ಸ್ಥಾನಗಳು

ಕೇರಳ:

ಕೇರಳದಲ್ಲಿ ಕಾಂಗ್ರೆಸ್‌ ನೇತೃತ್ವದ UDF ಭರ್ಜರಿ ಜಯಗಳಿಸಿದೆ. ಆಡಳಿತಾರೂಢ ಎಲ್​ಡಿಎಫ್​ನ 21 ಸಚಿವರು ಸೋಲುಂಡಿದ್ದಲ್ಲದೆ, ಎಡಪಕ್ಷಗಳು 35 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳುವಂತಾಗಿದೆ. ಕಾಂಗ್ರೆಸ್ ಏಕಾಂಗಿಯಾಗಿ 63 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ 102 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಸಾಧಿಸಿದೆ.

  • ಒಟ್ಟು ಸ್ಥಾನಗಳು: 140
  • ಯುಡಿಎಫ್ : 102 ಸ್ಥಾನಗಳು
  • ಎಲ್​ಡಿಎಫ್: 35 ಸ್ಥಾನಗಳು
  • ಎನ್​ಡಿಎ : 03 ಸ್ಥಾನಗಳು

ಅಸ್ಸಾಂ:

ಅಸ್ಸಾಂನಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವು ಸಾಧಿಸಿದೆ. 126 ಕ್ಷೇತ್ರಗಳ ಅಸ್ಸಾಮ್ ವಿಧಾನಸಭೆಯಲ್ಲಿ ಬಿಜೆಪಿ 82 ಸ್ಥಾನಗಳನ್ನು ಹೊಂದುವಂತಾಗಿದ್ದು, ಮತ್ತೊಮ್ಮೆ ಸರ್ಕಾರ ರಚಿಸಲಿದೆ.

  • ಒಟ್ಟು ಸ್ಥಾನಗಳು: 126
  • ಬಿಜೆಪಿ: 82 ಸ್ಥಾನಗಳು
  • ಕಾಂಗ್ರೆಸ್: 19 ಸ್ಥಾನಗಳು
  • AGP: 10
  • AIUDF: 2

ಪುದುಚೇರಿ:

ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲೂ ಬಿಜೆಪಿ ಸಹಭಾಗಿತ್ವದ ಎನ್​ಡಿಎಗೆ ಮತ್ತೆ ಅಧಿಕಾರಕ್ಕೇರಿದೆ. ಎನ್​ಡಿಎ ಮಿತ್ರಕೂಟ 16 ಸ್ಥಾನಗಳನ್ನೂ ಗೆದ್ದಿದೆ. 30 ಸ್ಥಾನಗಳ ಪುದುಚೆರಿಯಲ್ಲಿ ಡಿಎಂಕೆ 5 ಸ್ಥಾನಗಳನ್ನು, ಕಾಂಗ್ರೆಸ್: 3 ಸ್ಥಾನಗಳನ್ನು, ಟಿವಿಕೆ 2 ಸ್ಥಾನಗಳನ್ನು ಗೆದ್ದಿವೆ. ಪಕ್ಷಗಳ ಬಲಾಬಲ ಗಮನಿಸಿದರೆ.

  • ಒಟ್ಟು ಸ್ಥಾನಗಳು: 30
  • AINRC – 12,
  • DMK- 5
  • BJP- 4
  • IND- 3
  • TVK- 2
Author

ANU News

Follow Me
Other Articles
Previous

WhatsApp Shock for Older Android Phones? Support May End from September

Next

Five-State Verdict 2026: BJP Storms Bengal, UDF Sweeps Kerala, TVK Emerges Kingmaker in Tamil Nadu

No Comment! Be the first one.

Leave a Reply Cancel reply

Your email address will not be published. Required fields are marked *

Recent Posts

  • IOS SAGAR ಕಾರ್ಯಾಚರಣೆ ಯಶಸ್ವಿ; ಕೊಚ್ಚಿಗೆ ಮರಳಿದ ಐಎನ್‌ಎಸ್ ಸುನಯನ
  • (no title)
  • ಭಾರತ-ಇಟಲಿ ನಡುವೆ ‘ವಿಶೇಷ ಕಾರ್ಯತಂತ್ರದ ಪಾಲುದಾರಿಕೆ’ ಘೋಷಣೆ
  • ಜೂನ್ 1ರಂದು ಶಿವಮೊಗ್ಗದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಯೋಜನೆಗೆ ಚಾಲನೆ
  • ಹಣದುಬ್ಬರ, ನಿರುದ್ಯೋಗ ವಿಚಾರದಲ್ಲಿ ಮೋದಿ ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ
Copyright 2026 — ANU News. All rights reserved. Blogsy WordPress Theme