Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಇಂಚಲದಲ್ಲಿ 14 ಚಿನ್ನದ ನಾಣ್ಯ ಪತ್ತೆ; ಕಾರ್ಮಿಕರ ಪ್ರಾಮಾಣಿಕತೆಗೆ ಮೆಚ್ಚುಗೆ

By Anu News
September 5, 2026 1 Min Read
0

ಬೆಳಗಾವಿ: ಕೆಲಸ ಮಾಡುತ್ತಿದ್ದ ವೇಳೆ ಕೂಲಿ ಕಾರ್ಮಿಕರಿಗೆ ಗಡಿಗೆಯೊಳಗೆ 14 ಚಿನ್ನದ ನಾಣ್ಯಗಳು ಪತ್ತೆಯಾಗಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ನಡೆದಿದೆ.

ಬಿಸಿಎಂ ಹಾಸ್ಟೆಲ್ ಸಮೀಪ ಕೆಲಸ ಮಾಡುತ್ತಿದ್ದ ವೇಳೆ ಕಾರ್ಮಿಕರಿಗೆ ನಾಣ್ಯಗಳು ಸಿಕ್ಕಿವೆ. ಒಟ್ಟು 54.8 ಗ್ರಾಂ ತೂಕ ಹೊಂದಿರುವ ನಾಣ್ಯಗಳ ಮೌಲ್ಯ ಸುಮಾರು ₹8.27 ಲಕ್ಷ ಎಂದು ಅಂದಾಜಿಸಲಾಗಿದೆ.

ನಾಣ್ಯಗಳು ಸಿಕ್ಕ ಕೂಡಲೇ ಕಾರ್ಮಿಕರು ಅವುಗಳನ್ನು ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಪಿಡಿಒ ಹಾಗೂ ತಾಲೂಕು ಪಂಚಾಯಿತಿ ಸಿಬ್ಬಂದಿ ಸಮ್ಮುಖದಲ್ಲಿ ಸವದತ್ತಿ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರ ಅವರಿಗೆ ನಾಣ್ಯಗಳನ್ನು ಹಸ್ತಾಂತರಿಸಲಾಗಿದ್ದು, ಬಳಿಕ ಖಜಾನೆಗೆ ಒಪ್ಪಿಸಲಾಗಿದೆ.

ಪತ್ತೆಯಾದ ನಾಣ್ಯಗಳ ಮೇಲೆ ಆನೆಯ ಚಿತ್ರವಿದೆ ಎನ್ನಲಾಗಿದ್ದು, ತಲಕಾಡಿನ ಗಂಗರ ರಾಜಲಾಂಛನ ಆನೆಯಾಗಿದ್ದ ಹಿನ್ನೆಲೆಯಲ್ಲಿ ನಾಣ್ಯಗಳು ಗಂಗರ ಕಾಲಕ್ಕೆ ಸೇರಿದವೆಯೇ ಎಂಬ ಕುತೂಹಲ ಮೂಡಿದೆ. ನಾಣ್ಯಗಳು ಕ್ರಿ.ಶ. 10ರಿಂದ 15ನೇ ಶತಮಾನದ ಅವಧಿಗೆ ಸೇರಿದವು ಎಂಬ ಶಂಕೆ ವ್ಯಕ್ತವಾಗಿದೆ.

ಆದರೆ ನಾಣ್ಯಗಳ ನಿಖರ ಕಾಲಘಟ್ಟ, ಮೂಲ ಹಾಗೂ ಐತಿಹಾಸಿಕ ಮಹತ್ವ ಇನ್ನಷ್ಟೇ ದೃಢಪಡಬೇಕಿದೆ. ಪುರಾತತ್ವ ಇಲಾಖೆ ಪರಿಶೀಲನೆ ನಡೆಸಿದ ಬಳಿಕವೇ ಈ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ.

ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ನಾಣ್ಯಗಳು ಸಿಕ್ಕರೂ ಅವುಗಳನ್ನು ಅಧಿಕಾರಿಗಳಿಗೆ ಒಪ್ಪಿಸಿದ ಕಾರ್ಮಿಕರ ಪ್ರಾಮಾಣಿಕತೆಗೆ ತಾಲೂಕು ಆಡಳಿತ ಮೆಚ್ಚುಗೆ ವ್ಯಕ್ತಪಡಿಸಿದೆ.

Author

Anu News

Follow Me
Other Articles
Previous

Trump to host Xi Jinping at White House state dinner on September 24

Next

Ancient gold coins found in Karnataka village; could they date back centuries?

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Sagar hooch tragedy: 12 dead after suspected spurious liquor consumption
    • ನಕಲಿ ಮದ್ಯ ಸೇವಿಸಿ 12 ಮಂದಿ ಸಾವು; ಸಾಗರ್‌ನಲ್ಲಿ 6 ಮದ್ಯದಂಗಡಿಗಳಿಗೆ ಬೀಗ
    • ಬಿಎಂಟಿಸಿ ಬಸ್‌ ನಿಲ್ದಾಣಗಳಲ್ಲಿ ಪ್ರಥಮ ಚಿಕಿತ್ಸೆ ಕಡ್ಡಾಯ; ಉಪ ಲೋಕಾಯುಕ್ತರ ಸೂಚನೆ
    • BMTC bus stands to get first-aid facilities after Lokayukta intervention
    • Bhadra Upper Project: Trial water release begins for Chitradurga branch canal
    Copyright 2026 — ANU News. All rights reserved. Blogsy WordPress Theme