Skip to content
ANU News
ANU News
  • Home
  • Home
ANU News
ANU News
  • Home
  • Home
ಕ್ರೀಡೆದೇಶ

ಮುಂಬೈ ವಿರುದ್ಧ ಕೆಕೆಆರ್‌ಗೆ ರೋಚಕ ಗೆಲುವು; ಆದರೂ ಪ್ಲೇಆಫ್ ಹಂತಕ್ಕೇರಲು ಸರ್ಕಸ್

By ANU News
May 21, 2026 1 Min Read
0

ಕೋಲ್ಕತಾ: ಐಪಿಎಲ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 4 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿದೆ. ಕೋಲ್ಕತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಕೆಕೆಆರ್ 18.5 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿ ಜಯ ಸಾಧಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿ 148 ರನ್‌ಗಳಿಗೆ ಸೀಮಿತವಾಯಿತು. ಸಾಧಾರಣ ಗುರಿ ಬೆನ್ನಟ್ಟಿದ ಕೆಕೆಆರ್ ಆರಂಭದಲ್ಲಿ ಕೆಲವು ವಿಕೆಟ್ ಕಳೆದುಕೊಂಡರೂ, ಕನ್ನಡಿಗ ಮನೀಶ್ ಪಾಂಡೆ ಸಮಯೋಚಿತ ಬ್ಯಾಟಿಂಗ್ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ಈ ಜಯದೊಂದಿಗೆ ಕೋಲ್ಕತಾ ತಂಡಕ್ಕೆ ಮಹತ್ವದ 2 ಅಂಕಗಳು ಲಭಿಸಿದ್ದು, ಪ್ಲೇಆಫ್ ಪ್ರವೇಶದ ನಿರೀಕ್ಷೆಯನ್ನು ಜೀವಂತವಾಗಿರಿಸಿಕೊಂಡಿದೆ. ಈಗಾಗಲೇ ಆರ್‌ಸಿಬಿ, ಗುಜರಾತ್ ಟೈಟನ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಪ್ಲೇಆಫ್ ಪ್ರವೇಶ ಖಚಿತಪಡಿಸಿಕೊಂಡಿವೆ.

ಉಳಿದಿರುವ ಒಂದು ಸ್ಥಾನಕ್ಕಾಗಿ ಐದು ತಂಡಗಳ ನಡುವೆ ತೀವ್ರ ಪೈಪೋಟಿ ಮುಂದುವರೆದಿದೆ. ಕೆಕೆಆರ್‌ಗೆ ಇನ್ನೂ ಒಂದು ಲೀಗ್ ಪಂದ್ಯ ಬಾಕಿಯಿದ್ದು, ಪ್ರಸ್ತುತ 13 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.

Author

ANU News

Follow Me
Other Articles
Previous

ಹಣದುಬ್ಬರ, ನಿರುದ್ಯೋಗ ವಿಚಾರದಲ್ಲಿ ಮೋದಿ ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ

Next

ಜೂನ್ 1ರಂದು ಶಿವಮೊಗ್ಗದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಯೋಜನೆಗೆ ಚಾಲನೆ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಮೊಬೈಲ್ ಟಾರ್ಚ್‌ ಬೆಳಕಿನಲ್ಲಿ KSRTC ಬಸ್ ಸಂಚಾರ; ಇದು ಕಾಂಗ್ರೆಸ್ ಸರ್ಕಾರದ ‘ಗ್ಯಾರಂಟಿ’ ದುಸ್ಥಿತಿ ಎಂದ ಜೆಡಿಎಸ್
    • BJP Alleges Irregularities in Voter List Revision, Targets Congress Over SIR Process
    • ಅಕ್ರಮ ವಲಸಿಗರು, ನುಸುಳುಕೋರರಿಗೆ ಮಣೆಹಾಕುತ್ತಿರುವ ಕಾಂಗ್ರೆಸ್‌ ಗೆ ಜನರಿಂದ ತಕ್ಕ ಪಾಠ; ಬಿಜೆಪಿ
    • Eight Killed in Separate Accidents in Andhra Pradesh and Telangana
    • ಆಂಧ್ರ, ತೆಲಂಗಾಣದಲ್ಲಿ ಭೀಕರ ಅಪಘಾತಗಳು; ಒಟ್ಟು 8 ಮಂದಿ ದುರ್ಮರಣ
    Copyright 2026 — ANU News. All rights reserved. Blogsy WordPress Theme