Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಜನಸೇನಾ ಪಕ್ಷದಿಂದ ಈಶ್ವರಪ್ಪ ಆಹ್ವಾನ, ಆದರೆ, ಬಿಜೆಪಿಗೆ ಮರಳುತ್ತಾರ ನಾಯಕ

By ANU News
October 7, 2026 1 Min Read
Comments Off on ಜನಸೇನಾ ಪಕ್ಷದಿಂದ ಈಶ್ವರಪ್ಪ ಆಹ್ವಾನ, ಆದರೆ, ಬಿಜೆಪಿಗೆ ಮರಳುತ್ತಾರ ನಾಯಕ

ಶಿವಮೊಗ್ಗ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ತನ್ನ ರಾಜಕೀಯ ಜೀವನಕ್ಕೆ ಮಾರ್ಗದರ್ಶನ ನೀಡಿದ ಸಂಸ್ಥೆಯಾಗಿದ್ದು, ಆರ್‌ಎಸ್‌ಎಸ್ ಪರಿವಾರದ ಪ್ರಮುಖರು ತಮ್ಮನ್ನು ಭೇಟಿ ಮಾಡಿ ಬಿಜೆಪಿಗೆ ಮರಳುವಂತೆ ಸಲಹೆ ನೀಡಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.

ಬಿಜೆಪಿಗೆ ಮರಳುವ ಸಾಧ್ಯತೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ನಗರದ ಪ್ರಮುಖರು, ನಗರ ಪದಾಧಿಕಾರಿಗಳು ಹಾಗೂ ತಮ್ಮನ್ನು ಬೆಂಬಲಿಸಿದ ವಿವಿಧ ಸಮಾಜಗಳ ಹಿತೈಷಿಗಳೊಂದಿಗೆ ಮೂರು ಹಂತಗಳಲ್ಲಿ ಸಭೆ ನಡೆಸಿ ಚರ್ಚಿಸಲಾಗಿದೆ ಎಂದರು.

ಪಕ್ಷದ ರಾಷ್ಟ್ರೀಯ ನಾಯಕರು ಅಥವಾ ಪರಿವಾರದ ಹಿರಿಯರು ನೇರವಾಗಿ ಭರವಸೆ ನೀಡಿದ ಬಳಿಕವೇ ಬಿಜೆಪಿಗೆ ಮರಳುವ ಕುರಿತು ತೀರ್ಮಾನ ಕೈಗೊಳ್ಳುವಂತೆ ತಮ್ಮ ಬೆಂಬಲಿಗರು ಸಲಹೆ ನೀಡಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷದಿಂದಲೂ ರಾಜಕೀಯವಾಗಿ ಸೇರಲು ಆಹ್ವಾನ ಬಂದಿದೆ. ಆದರೆ ತಮ್ಮ ರಾಜಕೀಯ ಜೀವನ ಬಿಜೆಪಿಯಿಂದಲೇ ಆರಂಭವಾಗಿರುವುದರಿಂದ ಕೊನೆಯುಸಿರಿನವರೆಗೂ ಬಿಜೆಪಿಯಲ್ಲೇ ಇರುವುದಾಗಿ ಅವರು ಸ್ಪಷ್ಟಪಡಿಸಿದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಾನಾಗಲಿ ಅಥವಾ ತಮ್ಮ ಪುತ್ರ ಕಾಂತೇಶ್ ಆಗಲಿ ಸ್ಪರ್ಧಿಸುವುದು “ನೂರಕ್ಕೆ ನೂರು ಖಚಿತ” ಎಂದು ಈಶ್ವರಪ್ಪ ತಿಳಿಸಿದ್ದಾರೆ.

Author

ANU News

Follow Me
Other Articles
Previous

Stop water wastage at Markandeya reservoir, Cheluvarayaswamy tells officials

Next

ಭಾರತ -ನ್ಯೂಜಿಲೆಂಡ್ ಟಿ20 ಸರಣಿ: ಅಕ್ಟೋಬರ್ 22ರಿಂದ ಸರಣಿ ಆರಂಭ

Recent Posts

  • ಫಿಟ್ ಇಂಡಿಯಾ’: ದೇಶಾದ್ಯಂತ 26 ಸಾವಿರ ಕಡೆ 99ನೇ ‘ಸಂಡೇಸ್ ಆನ್ ಸೈಕಲ್’ ಕಾರ್ಯಕ್ರಮ
  • Fit India’s 99th Sundays on Cycle Held at 26,000 Locations
  • ‘ಮಹಾತ್ಮೆ ಕುದ್ಮುಲ್’ ತುಳು ನಾಟಕ ಕೃತಿ ಬಿಡುಗಡೆ
  • ‘ಚಲನಚಿತ್ರಗಳು ಮನಸ್ಸುಗಳನ್ನು ತೆರೆಯುತ್ತವೆ, ಸಂವಾದಕ್ಕೆ ಪ್ರೇರೇಪಿಸುತ್ತವೆ’: IFFIಯಲ್ಲಿ ನಿರ್ಮಾಪಕಿ ಇವಾ ಪುಸ್ಜಿನ್ಸ್ಕ
  • ‘Films Can Open Minds and Encourage Dialogue’: Fatherland Producer at IFFI
Copyright 2026 — ANU News. All rights reserved. Blogsy WordPress Theme