Skip to content
ANU News
ANU News
  • Home
  • Home
ANU News
ANU News
  • Home
  • Home
ಪ್ರಾದೇಶಿಕವಿದೇಶ

ಆನೇಕಲ್‌ನಲ್ಲಿ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣದ ಹಿಂದೆ ಕಮಿಶನ್‌ ರಾಜಕೀಯ?

By ANU News
May 24, 2026 1 Min Read
0

ಬೆಂಗಳೂರು: ಆನೇಕಲ್‌ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣದ ಯೋಜನೆಯ ಹಿಂದೆ ಜಮೀನಿನ ಬೆಲೆ ಹೆಚ್ಚಿಸಿ ಕಮಿಶನ್‌ ಪಡೆಯುವ ಉದ್ದೇಶವಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ (R. Ashoka) ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಹಾಗೂ ಪರಿಸರವಾದಿಗಳ ವಿರೋಧದ ನಡುವೆಯೂ ಸರ್ಕಾರ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿರುವುದನ್ನು ಪ್ರಶ್ನಿಸಿದರು.

“ಬೆಂಗಳೂರು ನಗರದ ಎಂ. ಚಿನ್ನಸ್ವಾಮಿ ಸ್ಟೇಡಿಯಂ (M. Chinnaswamy Stadium) ವರ್ಷಕ್ಕೆ ಕೇವಲ ನಾಲ್ಕೈದು ಬಾರಿ ಮಾತ್ರ ಬಳಕೆಯಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೊಂದು ಅಂತಾರಾಷ್ಟ್ರೀಯ ಕ್ರೀಡಾಂಗಣ ನಿರ್ಮಾಣದ ಅಗತ್ಯವೇನು?” ಎಂದು ಅಶೋಕ್ ಪ್ರಶ್ನಿಸಿದರು.

ಕ್ರೀಡಾಂಗಣದ ಸುತ್ತಮುತ್ತ ಜಮೀನಿನ ಬೆಲೆ ಹೆಚ್ಚಿಸಿ ಮಾರಾಟ ಮಾಡುವ ಉದ್ದೇಶದಿಂದಲೇ ಈ ಯೋಜನೆ ರೂಪಿಸಲಾಗಿದೆ. ಆನೇಕಲ್‌ನ ಯಾವುದೇ ಕ್ರೀಡಾಪಟು ಸರ್ಕಾರದ ಬಳಿ ಮನವಿ ಮಾಡಿಲ್ಲ. ಏಕಾಏಕಿ ಯೋಜನೆ ಘೋಷಿಸಿರುವುದು ಹಣ ಸಂಪಾದನೆಗಾಗಿ ಎಂಬ ಅನುಮಾನಕ್ಕೆ ಕಾರಣವಾಗಿದೆ ಎಂದು ಅವರು ಆರೋಪಿಸಿದರು.

ಚಿನ್ನಸ್ವಾಮಿ ಕ್ರೀಡಾಂಗಣವನ್ನು ಯುವ ಪ್ರತಿಭೆಗಳಿಗೆ ತರಬೇತಿ ನೀಡುವ ಉದ್ದೇಶದಿಂದ ನಿರ್ಮಿಸಲಾಗಿತ್ತು. ಆದರೆ ಈಗ ಅಲ್ಲಿ ಹೊಸಬರಿಗೆ ಅವಕಾಶವಿಲ್ಲ, ಕೋಟ್ಯಂತರ ರೂಪಾಯಿ ಆದಾಯ ತರುವ ಐಪಿಎಲ್ ಪಂದ್ಯಗಳಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ ಎಂದು ಟೀಕಿಸಿದರು.

ಇದೇ ವೇಳೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಕುರಿತು ಮಾತನಾಡಿದ ಅಶೋಕ್, ಕೇಂದ್ರ ಸರ್ಕಾರಕ್ಕೆ ಇದರಿಂದ ಹೆಚ್ಚುವರಿ ತೆರಿಗೆ ಆದಾಯ ಬರುವುದಿಲ್ಲ. ಆದರೆ ರಾಜ್ಯ ಸರ್ಕಾರಕ್ಕೆ ವಾರ್ಷಿಕ ಸುಮಾರು 7 ಸಾವಿರ ಕೋಟಿ ರೂಪಾಯಿ ಆದಾಯ ಬರಲಿದೆ ಎಂದು ಹೇಳಿದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ದರ ಏರಿಕೆಯಾಗಿರುವುದರಿಂದ ತೈಲ ಕಂಪನಿಗಳು ದರ ಹೆಚ್ಚಳ ಮಾಡಿವೆ. ಯುದ್ಧ ಪರಿಸ್ಥಿತಿಯಿಂದ ಅನೇಕ ದೇಶಗಳಲ್ಲಿ ಇಂಧನ ದರ ಏರಿಕೆಯಾಗಿದೆ. ಜನರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಕಾಂಗ್ರೆಸ್ ಸರ್ಕಾರ ತನ್ನ ಪಾಲಿನ ತೆರಿಗೆಯಲ್ಲಿ ಕಡಿತ ಮಾಡಲಿ ಎಂದು ಆಗ್ರಹಿಸಿದರು.

ಚಿತ್ರನಟ ಕಮಲ್ ಹಾಸನ್ (Kamal Haasan) ದೇಶದ ಕಷ್ಟಕಾಲದಲ್ಲಿ ಸಹಕಾರ ನೀಡಬೇಕೆಂದು ಹೇಳಿರುವುದನ್ನು ಉಲ್ಲೇಖಿಸಿದ ಅಶೋಕ್, “ಡಿಎಂಕೆ ಪಕ್ಷಕ್ಕೆ ಬುದ್ಧಿ ಬಂದರೂ ಕಾಂಗ್ರೆಸ್‌ಗೆ ಇನ್ನೂ ಬಂದಿಲ್ಲ” ಎಂದು ವಾಗ್ದಾಳಿ ನಡೆಸಿದರು.

Author

ANU News

Follow Me
Other Articles
Previous

ಕೋಮುಗಲಭೆ ಆರೋಪಿಗಳ ಕೇಸ್ ವಾಪಸ್‌; ಸರ್ಕಾರದ ನಿರ್ಧಾರದಿಂದ ರಾಜ್ಯದ ಭದ್ರತೆಗೆ ಅಪಾಯ

Next

ಕೇಂದ್ರ ಸರ್ಕಾರದಲ್ಲಿ ಪ್ರಲ್ಹಾದ್ ಜೋಶಿ ಅವರ ಇಲಾಖೆಯ ಸಾಧನೆಯೇ ಶ್ರೇಷ್ಠ !

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Citizenship for Deserving Refugees Under CAA to Be Granted Soon: Amit Shah
    • ಧಾರ್ಮಿಕ ಕಿರುಕುಳದಿಂದ ಭಾರತಕ್ಕೆ ಬಂದಿರುವ ಅರ್ಹ ನಿರಾಶ್ರಿತರಿಗೆ ಶೀಘ್ರವೇ ಪೌರತ್ವ; ಅಮಿತ್ ಶಾ
    • Indian Organisations Must Work Together to Promote Cultural Diversity: Deputy Ambassador Sandeep Kumar
    • Vanamahotsava Held in Kammaje; Villagers Resolve to Protect Environment Through Tree Plantation
    • ಕಮ್ಮಾಜೆಯಲ್ಲಿ ವನಮಹೋತ್ಸವ: ಪರಿಸರ ಸಂರಕ್ಷಣೆಗೆ ಸಸಿ ನೆಡುವ ಸಂಕಲ್ಪ
    Copyright 2026 — ANU News. All rights reserved. Blogsy WordPress Theme