Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಸಿನಿಮಾ

ಶ್ರೀರಂಗಪಟ್ಟಣ ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ರವಿಚಂದ್ರನ್ ಚಾಲನೆ; ಅಂಬಿ, ವಿಷ್ಣು ನೆನೆದು ಭಾವುಕರಾದ ಸಚಿವ

By ANU News
October 16, 2026 1 Min Read
0

ಶ್ರೀರಂಗಪಟ್ಟಣ: 1610ರಲ್ಲಿ ಆರಂಭವಾದ ಶ್ರೀರಂಗಪಟ್ಟಣದ ದಸರಾ ಬಳಿಕ ಮೈಸೂರಿಗೂ ವಿಸ್ತರಿಸಿತು. ಈ ಬಾರಿ ಹಿರಿಯ ನಟ ಹಾಗೂ ನಿರ್ದೇಶಕ ವಿ. ರವಿಚಂದ್ರನ್ ಅವರು ದಸರಾ ಉದ್ಘಾಟಿಸಿರುವುದು ವಿಶೇಷ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೇರುನಟ ಡಾ. ರಾಜ್‌ಕುಮಾರ್ ಅವರನ್ನು ದೂರದಿಂದಲೇ ಕೈಮುಗಿದು ನೋಡುತ್ತಿದ್ದೆವು. ನಟರಾದ ಅಂಬರೀಶ್, ವಿಷ್ಣುವರ್ಧನ್ ಮತ್ತು ರವಿಚಂದ್ರನ್ ಅವರು ನನಗೆ ಕುಟುಂಬದ ಸ್ನೇಹಿತರಿದ್ದಂತೆ. ಆದರೆ, ಅಂಬರೀಶ್ ಮತ್ತು ವಿಷ್ಣುವರ್ಧನ್ ಅವರು ನಮ್ಮನ್ನು ಅಗಲಿರುವುದು ತೀವ್ರ ನೋವು ತಂದಿದೆ ಎಂದು ಭಾವುಕರಾಗಿ ಸ್ಮರಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸಚಿವರು ಅಭಿನಂದಿಸಿದರು. ಬಳಿಕ ವೇದಿಕೆಯ ಮುಂಭಾಗದಲ್ಲಿ ಕುಳಿತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು.

ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯುತ್ತಿದ್ದಂತೆ ಮಳೆ ಸುರಿಯಲಾರಂಭಿಸಿತು. ಒಂದೆಡೆ ಸಂಗೀತ ಕಾರ್ಯಕ್ರಮಗಳ ರಸದೌತಣ, ಮತ್ತೊಂದೆಡೆ ಮಳೆಯ ಸದ್ದು ವಾತಾವರಣಕ್ಕೆ ಹೊಸ ಮೆರುಗು ನೀಡಿತು.

ಕನಿಷ್ಠ ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಾದರೂ ಮಳೆಯಾಗಲಿ ಎಂಬ ಪ್ರಾರ್ಥನೆಯೊಂದಿಗೆ ದಸರಾ ಉದ್ಘಾಟಿಸಲಾಗಿದೆ ಎಂದು ಸಚಿವರು ಹೇಳುತ್ತಿದ್ದಂತೆಯೇ ಮಳೆ ಮತ್ತಷ್ಟು ಬಿರುಸುಗೊಂಡಿತು. ಇದರಿಂದ ಶ್ರೀರಂಗಪಟ್ಟಣದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಯಿತು.

Author

ANU News

Follow Me
Other Articles
Previous

‘Cauvery Arati Is Not Ostentation but Heritage’: Chaluvarayaswamy Defends Srirangapatna Dasara

Next

Actor and directorRavichandran Inaugurates Srirangapatna Dasara

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Price Hikes, Corruption Are Congress Government’s ‘Guarantees’: Dr. C.T. Ravi
    • ಬೆಲೆ ಏರಿಕೆ, ಭ್ರಷ್ಟಾಚಾರವೇ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ: ಡಾ. ರವಿ ಸಿ.ಟಿ.
    • ‘Tulunadu Is Home to Diverse Languages’: Multilingual Poets’ Meet Held in Mangaluru
    • ‘ತುಳುನಾಡು ವಿವಿಧ ಭಾಷೆಗಳ ನೆಲೆವೀಡು’: ಮಂಗಳೂರಿನಲ್ಲಿ ಬಹುಭಾಷಾ ಕವಿಗೋಷ್ಠಿ
    • ‘Equal Life, Equal Share for All’ Becoming Reality in Muddenahalli: H.D. Kumaraswamy
    Copyright 2026 — ANU News. All rights reserved. Blogsy WordPress Theme